ರಾಜ್ಯ

ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಗುರುತಿನ ಚೀಟಿ ಕಡ್ಡಾಯ

Share news

ಉಚಿತ ಪ್ರಯಾಣದಲ್ಲಿ 6 ರಿಂದ 8 ವರ್ಷದ ಮಕ್ಕಳೂ ಒಳಗೊಂಡಿರುತ್ತಾರೆ. ಬಸ್ ನಿಲ್ದಾಣಗಳಲ್ಲಿ ಮಹಿಳೆಯರನ್ನು ಹತ್ತಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ ಇದರಂತೆ ರಾಜ್ಯದ ಎಲ್ಲಾ ಕಡೆ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಗೆ ಸೇರಿದ ಸಾಮಾನ್ಯ ಬಸ್​​ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಲಿದ್ದು, ಮಧ್ಯಾಹ್ನ 1 ಗಂಟೆಗೆ ಉಚಿತ ಪ್ರಯಾಣ ಸೇವೆ ಆರಂಭವಾಗಲಿದೆ.

ಇನ್ನೂ ಓದಿ.. ಕೈಲಾಸದ ಒಡೆಯನಿಗೆ ಪ್ರಿಯ ಈ ನಾಗಲಿಂಗ ಪುಷ್ಪ

ಶಕ್ತಿ ಯೋಜನೆಯಡಿ ಕರ್ನಾಟಕಾದ್ಯಂತ ಉಚಿತ ಪ್ರಯಾಣ ನಡೆಸಲು ಬಿಎಂಟಿಸಿ ಸೇರಿ ಎಲ್ಲಾ ಸಾರಿಗೆ ಸಂಸ್ಥೆಗಳಿಗೆ ಸರ್ಕಾರದಿಂದ ಆದೇಶ ಹೊರಡಿಸಿದ್ದು, ರಾಜಹಂಸ, ಐಷಾರಾಮಿ, ಎಸ್ ಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಗಳಲ್ಲಿ ಉಚಿತ ಪ್ರಯಾಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯ ಸಾರಿಗೆ, ವೇಗದೂತಗಳಲ್ಲಿ ಮಾತ್ರ ಉಚಿತ ಪ್ರಯಾಣ ಸೇವೆ ಲಭ್ಯವಾಗಲಿದ್ದು, ಶಕ್ತಿ ಸ್ಮಾರ್ಟ್ ಬರೋವರೆಗೆ ಸರ್ಕಾರಿ ಗುರುತಿನ ಚೀಟಿ ಕಂಡೆಕ್ಟರ್​​ಗೆ ತೋರಿಸುವುದು ಕಡ್ಡಾಯವಾಗಿದೆ.

ಇನ್ನೂ ಓದಿ.. “ಸಿಡಿಲಮರಿ – ರಂಗಪಾದರಸ ತೀರ್ಥಹಳ್ಳಿ ಗೋಪಾಲ ಆಚಾರ್ಯ “

ಉಚಿತ ಪ್ರಯಾಣ ಯೋಜನೆ ಯ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ. ಹೀಗಾಗಿ ಕಂಡೆಕ್ಟರ್ ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ಚೀಟಿಯನ್ನು ನೀಡುವುದು ಕಡ್ಡಾಯ ಮಾಡಲಾಗಿದೆ. ಉಳಿದಂತೆ ಮಹಿಳಾ ಪ್ರಯಾಣಿಕರು ಹೆಚ್ಚುವರಿ ಲಗೇಜ್ ಕೊಂಡು ಹೋದಲ್ಲಿ ಅದರ ಮೊತ್ತವನ್ನು ಪಾವತಿ ಮಾಡಬೇಕು. ಅಂತರ ರಾಜ್ಯ ಸಾರಿಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಇದೇ ವೇಳೆ ಮಹಿಳಾ ಪ್ರಯಾಣಿಕರೊಂದಿಗೆ ಚಾಲಕರು, ನಿರ್ವಾಹಕರು‌ ಸೌಜನ್ಯದಿಂದ ವರ್ತಿಸಬೇಕು ಸೂಚನೆ ನೀಡಿದೆ.

ಇನ್ನೂ ಓದಿ.. ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ

ಥೈಲ್ಯಾಂಡ್ ನಲ್ಲಿ ಹಿಂದೂ ಧರ್ಮದ ಸಂಕೇತವಾದ ಸೃಷ್ಟಿಕರ್ತ ಬ್ರಹ್ಮ

ನಟಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಮೇಧಾ ಗಾಯಕಿಯೂ ಹೌದು!

ಕುಮಾರ ಪರ್ವತ – ಗಿರಿ ಗದ್ದೆಯ ಬೆಟ್ಟದ ಜೀವ…ಶ್ರೀ ಮಹಾಲಿಂಗೇಶ್ವರ ಭಟ್

ಕೆಲಸ ಮಾಡಲು ದೈಹಿಕ ಸಾಮರ್ಥ್ಯ ಮುಖ್ಯವಲ್ಲ, ದೃಢ ಮನಸ್ಸು ಬೇಕು ಎಂದ ಪೂರ್ಣಿಮಾ

ಯಕ್ಷಗಾನ ಕಲಾ ಪ್ರತಿಭೆ ಪೂಜಾ ಆಚಾರ್ ತೆಕ್ಕಟ್ಟೆ

BHARATHAVANI YOUTUBE

ಹಿರೇಮಗಳೂರು ಕಣ್ಣನ್ ಮಾಮನ ಕನ್ನಡ ದೇಗುಲ

ಸಾಣಿಕಟ್ಟಾ ಉಪ್ಪು ತಯಾರಿಕೆ

ಪುರಾತನ ವೇದ ಪಾಠಶಾಲೆ | ಶ್ರೀ ಹರಿಹರೇಶ್ವರ ವೇದವಿದ್ಯಾಪೀಠ || ಗೋಕರ್ಣ

ವಾಹನಗಳ ಸೃಷ್ಟಿಕರ್ತ | ಕಲಾವಿದ ಕಾರ್ತಿಕ್ ಗಾಣಿಗ


Share news

Related Articles

Leave a Reply

Your email address will not be published. Required fields are marked *

Back to top button