Othersರಾಜ್ಯ

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ (KSOU) ಏಕಕಾಲದಲ್ಲಿ ಎರಡು ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು..

Share news

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಮೈಸೂರು (Karnataka State Open University) ಏಕಕಾಲದಲ್ಲಿ ಎರಡು ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅವಕಾಶವನ್ನು ನೀಡಿದೆ. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈಗ ಪ್ರಾರಂಭವಾಗಿರುವ ಪ್ರವೇಶಾತಿಗಳಲ್ಲಿ ಜುಲೈ ಆವೃತ್ತಿ ಯಲ್ಲಿಯೇ ಏಕಕಾಲದಲ್ಲಿ ಎರಡು ಶೈಕ್ಷಣಿಕ ಕೋರ್ಸ್‌ಗಳಿಗೆ ಪ್ರವೇಶಾತಿಯನ್ನು ಪಡೆಯಬಹುದಾಗಿದೆ. ಎಲ್ಲಾ ಮುಕ್ತ ದೂರಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಿದ್ದು, ಪ್ರವೇಶಾತಿ ಪಡೆಯಲು ಆಗಸ್ಟ್ 31, 2023 ಕೊನೆಯ ದಿನಾಂಕವಾಗಿದೆ.

ವಿಶ್ವವಿದ್ಯಾನಿಲಯವು ಜುಲೈ ಆವೃತ್ತಿ ಪ್ರವೇಶಾತಿಯ ಮುಕ್ತ ದೂರಶಿಕ್ಷಣ (ODL) ಪಿಜಿ ಡಿಪ್ಲೋಮಾ, ಡಿಪ್ಲೋಮಾ ಮತ್ತು ಪ್ರಮಾಣಪತ್ರ ಕಾರ್ಯಕ್ರಮಗಳ ಜೊತೆಗೆ ಯುಜಿ ಮತ್ತು ಪಿಜಿ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, 2023-24 ನೇ ಸಾಲಿನ ಆನ್‌ಲೈನ್ ಪ್ರವೇಶಾತಿಗಾಗಿ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜೂನ್ 30 ರಂದು ಪ್ರವೇಶಾತಿ ಆರಂಭವಾಗಿದ್ದು ಪ್ರವೇಶಾತಿ ಅರ್ಜಿ ಸಲ್ಲಿಸಲು ಆಗಸ್ಟ್ 31,2023 ಕೊನೆಯ ದಿನಾಂಕವಾಗಿದೆ.

ಬೇಟಿ ನೀಡಿ ವೆಬ್​ಸೈಟ್​ : https://ksoumysuru.ac.in/

ವಿದ್ಯಾರ್ಥಿಗಳು ಒಂದೇ ಬಾರಿಗೆ ಎರಡು ಮುಕ್ತ ದೂರಶಿಕ್ಷಣ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಒಂದು ದೂರಶಿಕ್ಷಣ ಕೋರ್ಸ್ ಮತ್ತು ಸಾಂಪ್ರದಾಯಿಕ ವಿಶ್ವವಿದ್ಯಾಲಯದಿಂದ ಮತ್ತೊಂದು ನಿಯಮಿತ ಕೋರ್ಸ್ ಅನ್ನು ತೆಗೆದುಕೊಳ್ಳಬಹುದು.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ (KSOU) ಹಲವು ಕೋರ್ಸ್​ಗಳಿಗೆ ಪ್ರವೇಶ ಆರಂಭ | ಯಾವೆಲ್ಲ ಕೋರ್ಸ್ ಇಲ್ಲಿವೆ ಮಾಹಿತಿ..


Share news

Related Articles

Leave a Reply

Your email address will not be published. Required fields are marked *

Back to top button