ರಾಜ್ಯ

ಕರ್ನಾಟಕದ ಕೊಪ್ಪಳದಲ್ಲಿ ಕಾರ್ಯಾರಂಭಿಸಿದ ಭಾರತದ ಮೊದಲ ಆಟಿಕೆ ಕ್ಲಸ್ಟರ್

Share news

ಭಾರತದ ಮೊದಲ ಆಟಿಕೆಗಳ ಉತ್ಪಾದನಾ ವ್ಯವಸ್ಥೆ ಕೊಪ್ಪಳ ಟಾಯ್ ಕ್ಲಸ್ಟರ್ (ಕೆಟಿಸಿ) ನಲ್ಲಿ ಉತ್ಪಾದನಾ ಪ್ರಕ್ರಿಯೆಯ ಮೊದಲ ಘಟಕವು ತನ್ನ ಕಾರ್ಯವನ್ನು ಪ್ರಾರಂಭಿಸಿದೆ. ಜಾಗತಿಕ ಮಟ್ಟದ ಆಟಿಕೆ ಉತ್ಪಾದನಾ ಕ್ಲಸ್ಟರ್‌ನಲ್ಲಿ ಮುಂದಿನ ತಿಂಗಳ ಆರಂಭದಲ್ಲಿ ಇನ್ನೂ ನಾಲ್ಕು ಇತರ ಘಟಕಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಏಕಸ್( Aequs) ಪ್ರೈವೇಟ್ ಲಿಮಿಟೆಡ್‌ನ ಸಮೂಹ ಕಂಪನಿಯಾದ ಏಕಸ್ (Aequs )ಇನ್ಫ್ರಾ ಅಭಿವೃದ್ಧಿಪಡಿಸಿದ ವಿಶೇಷ ಆರ್ಥಿಕ ವಲಯ (SEZ) ದಲ್ಲಿರುವ ಕ್ಲಸ್ಟರ್ 400 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು 100ಕ್ಕೂ ಅಧಿಕ ಆಟಿಕೆ ತಯಾರಿಕಾ ಘಟಕಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ವಿನ್ಯಾಸ, ಅಭಿವೃದ್ಧಿ, ಮಾದರಿ ತಯಾರಿಕೆ, ಚಿತ್ರಕಲೆ, ಜೋಡಣೆ ಮತ್ತು ಪ್ಯಾಕೇಜಿಂಗ್, ಗುಣಮಟ್ಟದ ಭರವಸೆ ಮತ್ತು ಉಳಿದ ಉಪಕರಣಗಳು ಸೇರಿದಂತೆ ಸಂಪೂರ್ಣ ಒಂದು ಆಟಿಕೆ ತಯಾರಿಕೆ ನಡೆಸುವ ಕ್ಲಸ್ಟರ್ ಇದಾಗಿದೆ. ಮುಂದಿನ 10 ವರ್ಷಗಳಲ್ಲಿ 25,000 ನೇರ ಮತ್ತು ಒಂದು ಲಕ್ಷ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಏಕಸ್ (Aequs )ನ ಅಧ್ಯಕ್ಷರು ಅರವಿಂದ ಮೆಳ್ಳಿಗೇರಿ ತಿಳಿಸಿದ್ದಾರೆ. “ಮಾನವ ಸಂಪನ್ಮೂಲವನ್ನು ಹೇರಳವಾಗಿ ಒದಗಿಸುವ ಜಿಲ್ಲೆಯಾದ ಕೊಪ್ಪಳದಲ್ಲಿ ಆರಂಭಗೊಂಡ ತಯಾರಿಕ ಘಟಕ ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಕೊಪ್ಪಳದಲ್ಲಿ ಹೊಸತೊಂದು ಅಧ್ಯಾಯ ಬರೆಯಲಿದೆ ಮತ್ತು ಆಟಿಕೆ ತಯಾರಿಕೆಗೆ ಹೆಚ್ಚು ಜನ ಅಗತ್ಯವಿರುವ ಕಾರಣ, ಕ್ಲಸ್ಟರ್ ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ”, ಎಂದು ಅರವಿಂದ ಮೆಳ್ಳಿಗೇರಿ ಹೇಳಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button