ರಾಜ್ಯ

ತಿಂಗಳಾಂತ್ಯಕ್ಕೆ "ರೈತ ಶಕ್ತಿ" ಯೋಜನೆಗೆ ಚಾಲನೆ

Share news

ಜನವರಿ ತಿಂಗಳ ಕೊನೆಗೆ ಕೃಷಿಕರ ಮೇಲಿನ ಭಾರವನ್ನು ಕಡಿಮೆ ಮಾಡುವ ಸಲುವಾಗಿ ಈ ಹಿಂದೆ ಬಜೆಟ್ ನಲ್ಲಿ ಘೋಷಿಸಿದಂತೆ “ರೈತ ಶಕ್ತಿ ” ಎಂಬ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.  ಕೃಷಿ ಯಂತ್ರೋಪಕರಣಕ್ಕೆ ಅಧಿಕ ಡೀಸೆಲ್ ಇಂಧನದ ಅಗತ್ಯವಿರುವುದರಿಂದ ಹಾಗೂ ರೈತರ ಆರ್ಥಿಕ ಹೊರೆಯನ್ನು ತಗ್ಗಿಸಲು ಈ ವರ್ಷದ 2022 -23 ನೇ ಶೈಕ್ಷಣಿಕ ವರ್ಷದ ಬಜೆಟ್ ನಲ್ಲಿ ರೈತ ಶಕ್ತಿ ಯೋಜನೆಯನ್ನು ರೂಪಿಸಿ ಜಾರಿಗೆ ತರುವ ಉದ್ದೇಶವನ್ನು ಹೊಂದಿದ್ದಾರೆ.

ಪ್ರತಿ ಎಕ್ರೆ 250 ರೂ.ಗಳಂತೆ ಗರಿಷ್ಠ 5 ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್‌ಗೆ ಸಹಾಯಧನವನ್ನು ನೀಡುವ ರೈತ ಶಕ್ತಿ ಯೋಜನೆಯಡಿ ಸಿಎಂ ಸುಮಾರು 45 ಲಕ್ಷಕ್ಕೂ ಹೆಚ್ಚಿನ ರೈತಾಪಿ ಕುಟುಂಬಗಳಿಗೆ ಡಿಬಿಟಿ ಮೂಲಕ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಬಿಡುಗಡೆ ಮಾಡಲಿದ್ದಾರೆ.

ರಾಜ್ಯದ ರೈತರಿಗೆ ಕೃಷಿ ಇಲಾಖೆಯ ಎಲ್ಲಾ ಯೋಜನೆಗಳನ್ನು FRUITS ಫೋರ್ಟಲ್‌‌ ಮೂಲಕ ನೋಂದಣಿ ಗುರುತಿನ ಸಂಖ್ಯೆ ಬಳಸಿ ಕಿಸಾನ್ ತಂತ್ರಾಂಶದ ಮೂಲಕವೇ ಅನುಷ್ಠಾನ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ FRUITS ಪೋರ್ಟಲ್‌ನಲ್ಲಿ ನೊಂದಣಿಗೊಂಡ ರಾಜ್ಯದ ಎಲ್ಲಾ ರೈತರಿಗೆ ರೈತ ಶಕ್ತಿ ಯೋಜನೆಯನ್ನು , ಕಿಸಾನ್ ತಂತ್ರಾಂಶ ಬಳಸಿಕೊಂಡು ನೇರ ವರ್ಗಾವಣೆ ( DBT ) ಮೂಲಕವೇ ಅನುಷ್ಠಾನ ಮಾಡಲಾಗುತ್ತಿದೆ.

ಈ ಯೋಜನೆಯು ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಹೊಂದಲು ಹಾಗೂ ಇಂಧನದ ವೆಚ್ಚ ಇಳಿಸಲು ಯೋಜನೆಯನ್ನು ಜಾರಿಗೆ ತರುವುದಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button