ಉತ್ತರಕನ್ನಡರಾಜ್ಯ

ಪದ್ಮಶ್ರೀ ತುಳಸಿಗೌಡರ ಮನವಿಗೆ ಸ್ಪಂದಿಸಿ ಸೇತುವೆ ನಿರ್ಮಿಸಲು ಮುಂದಾದ ಜಿಲ್ಲಾಡಳಿತ

Share news

ವೃಕ್ಷ ಮಾತೆಯೆಂದು ಪ್ರಸಿದ್ಧರಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ವಾಸಿಸುವ ತುಳಸಿ ಗೌಡ ಅವರ ಮನೆಯ ಮುಂದೆ ಹಳ್ಳ ಹರಿಯುತ್ತಿದ್ದು, ದಾಟಲು ಕಷ್ಟವಾಗುತ್ತಿರುವ ವಿಡಿಯೋ ತುಣುಕು ನೋಡಿ ಜಿಲ್ಲಾಡಳಿತ ಸ್ಪಂದಿಸಲು ಮುಂದಾಗಿದೆ.

ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ ತುಳಸಿ ಗೌಡ ಅವರ ಮನೆಯ ಎದುರು ಸೇತುವೆ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ನಗರ ಜೀವನ ಬಯಸದೆ ವೃಕ್ಷಗಳನ್ನು ಬೆಳೆಸುತ್ತಾ ಪರಿಸರದ ಮಧ್ಯೆಯೇ ವಾಸಿಸುತ್ತಿರುವ ತುಳಸಿ ಗೌಡ ಅವರಿಗೆ ಸಹಾಯವಾಗಲಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಳಸಿ ಗೌಡ ಅವರ ಮನೆಯ ಎದುರಿನ ಹಳ್ಳ ತುಂಬಿ ಹರಿಯುತ್ತಿದ್ದು, ಸೇತುವೆ ನಿರ್ಮಿಸಲು ಕಳೆದ ವರ್ಷವೇ ಮನವಿ ಮಾಡಲಾಗಿತ್ತು. ಇದೀಗ ಅವರ ವಿಡಿಯೋ ತುಣುಕು ಬಹಳಷ್ಟು ಸದ್ದು ಮಾಡುತ್ತಿದೆ. ತಾವು ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹಾಗೂ ಇಲ್ಲಿಯ ಮಕ್ಕಳಿಗೆ, ಜನರಿಗೆ ಪೂರ್ತಿ ನೀರು ತುಂಬಿದ ಹಳ್ಳವನ್ನು ದಾಟಲು ಕಷ್ಟವಾಗುತ್ತಿರುವ ಕಾರಣ ಸೇತುವೆ ನಿರ್ಮಿಸುವಂತೆ ಮನವಿ ಮಾಡಿ ವಿಡಿಯೋ ಮಾಡಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ವೀಕ್ಷಿಸಿ ಸೇತುವೆ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ತುಳಸಿ ಗೌಡ ಅವರ ಮನವಿಗೆ ಪ್ರತಿಫಲ ದೊರಕಿದಂತಾಗಿದೆ.

ತುಳಸಿ ಗೌಡ ಅವರ ನಿವಾಸ ಸಂಪರ್ಕಿಸುವ ಕಿರು ಸೇತುವೆಗೆ 25 ಲಕ್ಷ ರೂ. ಹಾಗೂ ರಸ್ತೆಗೆ 15 ಲಕ್ಷ ರೂ. ಮಂಜೂರಾಗಿದ್ದು, ಮಳೆಗಾಲದ ತರುವಾಯ ಕಾಮಗಾರಿ ಶುರುವಾಗಲಿದೆ. ತುಳಸಿ ಗೌಡ ಅವರ ಸಂಚಾರಕ್ಕಾಗಿ ತಾತ್ಕಾಲಿಕ ಸೇತುವೆಯನ್ನು ವಾರದೊಳಗೆ ನಿರ್ಮಿಸಲಾಗುವುದು ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಭರವಸೆ ನೀಡಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button