ರಾಜ್ಯಶಿವಮೊಗ್ಗ

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ

Share news

ಕರ್ನಾಟಕಕ್ಕೆ ಇಂದು ಐತಿಹಾಸಿಕ ಕ್ಷಣ ಮಲೆನಾಡಿಗರ ಸಾಕಷ್ಟು ವರ್ಷಗಳ ಕನಸಾದ ವಿಮಾನ ನಿಲ್ದಾಣ ನಿರ್ಮಾಣವು ಇದೀಗ ನನಸಾಗಿದ್ದು, ಪ್ರಧಾನಿ ಮೋದಿ ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟಿಸಲಿದ್ದಾರೆ.

ವಿಮಾನದ ಮೂಲಕ ಬಂದಿಳಿದು ಮಲೆನಾಡ ಏರ್‌ಪೋರ್ಟ್‌ ಉದ್ಘಾಟನೆ ಮಾಡಲಿರುವ ಪ್ರಧಾನಿ ಹಾಗೂ ಶಿವಮೊಗ್ಗಕ್ಕೆ ಏರ್‌ಪೋರ್ಟ್ ನಿರ್ಮಾಣ ಆಗಲೇಬೇಕೆಂದು ಪಣತೊಟ್ಟು ಕನಸಿಗೆ ನೀರೆರೆದು ಪೋಷಿಸಿದವರು ಬಿ.ಎಸ್ ಯಡಿಯೂರಪ್ಪ ಹಾಗಾಗಿ ಅವರ ಹುಟ್ಟು ಹಬ್ಬದ ಸಂದರ್ಭದಲ್ಲೇ ಇದು ಉದ್ಘಾಟನೆಗೊಳ್ಳುತ್ತಿರುವುದು ವಿಶೇಷ.

ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕದ ಅತಿ ದೊಡ್ಡ ರನ್‌ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಹಾಗೂ ಗಂಟೆಗೆ ಸುಮಾರು 300 ಪ್ರಯಾಣಿಕರನ್ನು ನಿಭಾಯಿಸುವಷ್ಟು ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ ಸುಸಜ್ಜಿತವಾಗಿದೆ.ಇಂದು ಬೆಳಗ್ಗೆ 11:30 ಕ್ಕೆ ಶಿವಮೊಗ್ಗ ಏರ್‌ಪೋರ್ಟ್‌ಗೆ ಪ್ರಧಾನಿ ಮೋದಿ ಬಂದಿಳಿಯಲಿದ್ದಾರೆ. 11:45ರಿಂದ 11:55 ವರೆಗೆ ಟರ್ಮಿನಲ್ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 12 ರಿಂದ 1:15ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button