ರಾಜ್ಯ

ರಾಜ್ಯ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಜರ್ಷಿ

Share news

ಭಾರತದ ರಾಜ್ಯ ಸಭೆಗೆ ನೂತನವಾಗಿ ನಾಮ ನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನೇ ಸೃಷ್ಟಿಸಿದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮನೆ ಮನಗಳನ್ನು ಮುಟ್ಟಿ ಸಾಕಷ್ಟು ಜನರಿಗೆ ಉದ್ಯೋಗವನ್ನು ನೀಡಿ ಜನರ ಮನ್ನಣೆಗೆ ಪಾತ್ರರಾಗಿರುವ ರಾಜರ್ಷಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ನಿಜಕ್ಕೂ ರಾಜ್ಯದ ಜನತೆ ಹೆಮ್ಮೆ ಪಡುವಂತೆ ಮಾಡಿದೆ.

ಡಾ.ಡಿ ವೀರೇಂದ್ರ ಹೆಗ್ಗಡೆ ಹಾಗೂ ಇಳೆಯರಾಜಾ ಮತ್ತು ಪಿಟಿ ಉಷಾ ಅವರನ್ನು ರಾಜ್ಯಸಬೆಗೆ ನಾಮನಿರ್ದೇಶನಗೊಳಿಸಲಾಗಿತ್ತು. ಕರಾವಳಿ ಕರ್ನಾಟಕದ ಭಾಗದಿಂದ ಪ್ರಸ್ತುತ ರಾಜ್ಯಸಭೆಗೆ ಆಯ್ಕೆಯಾಗಿರುವ ಶ್ರೀಯುತರು ಇಂದು ರಾಜ್ಯಸಭೆಯ ಸ್ಪೀಕರ್‌ ವೆಂಕಯ್ಯನಾಯ್ಡು ಅವರ ಸಮ್ಮುಖದಲ್ಲಿ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.


Share news

Related Articles

Leave a Reply

Your email address will not be published. Required fields are marked *

Back to top button