ರಾಜ್ಯರಾಮನಗರ

ಅಯೋಧ್ಯೆಯ ಮಾದರಿಯಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ

Share news

ರಾಮನಗರದ ರಾಮದೇವರ ಬೆಟ್ಟದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಸಮಗ್ರ ಯೋಜನೆಗಳ ವರದಿ ಸಿದ್ಧವಾಗುತ್ತಿದ್ದು, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮಾದರಿಯಲ್ಲೇ 19 ಎಕರೆ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಲಾಗಿದೆ.

ಎಸ್ತೆಟಿಕ್‌ ಆರ್ಕಿಟೆಕ್ಸ್‌ನ ಖ್ಯಾತ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ನೇತೃತ್ವದ ತಂಡ ರಾಮಮಂದಿರದ ವಿನ್ಯಾಸ ಸಿದ್ಧಪಡಿಸುತ್ತಿದೆ. ರಾಮಮಂದಿರ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆಯೂ ಸಿದ್ಧಗೊಂಡಿದ್ದು, ಮುಖ್ಯಮಂತ್ರಿಯವರ ಅನುಮತಿಯಷ್ಟೇ ನೀಡಬೇಕಾಗಿದೆ.

ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ್ದ ಮಂಟಪ ಸಹಿತ ಈಗಿರುವ ದೇವಾಲಯ ಪುನಶ್ಚೇತನದೊಂದಿಗೆ ಭವ್ಯ ರಾಮಮಂದಿರ ನಿರ್ಮಾಣ ಮಾಡುವುದು. ಇದರ ಜತೆಗೆ ಶ್ರೀರಾಮ ದ್ವಾರಾ, ರಾಮಮಂದಿರ ಪೆವಿಲಿಯನ್‌, ಅಶೋಕವನ, ಶ್ರೀರಾಮ ಪಥ ಮ್ಯೂಸಿಯಂ, ಜಟಾಯು ಗ್ಯಾಲರಿ ಇವೆಲ್ಲಾವೂ ಕರ್ನಾಟಕದಲ್ಲೂ ರಾಮನ ಗತವೈಭವವನ್ನು ನೆನಪಿಸಲಿವೆ.


Share news

Related Articles

Leave a Reply

Your email address will not be published. Required fields are marked *

Back to top button