ರಾಜ್ಯ

ಬೆಂಗಳೂರಿಗೆ 921 ‘ಮೇಡ್ ಇನ್ ಇಂಡಿಯಾ’ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

Share news

ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (BMTC) 921 ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸಲು ಆರ್ಡರ್ ಪಡೆದುಕೊಂಡಿದೆ. ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ಮೂಲಕ ದೊಡ್ಡ ಟೆಂಡರ್ ಅಡಿಯಲ್ಲಿ, 12 ವರ್ಷಗಳವರೆಗೆ 12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್‍ಗಳನ್ನು ಸರಬರಾಜು ಮಾಡುವ ಹಾಗೂ ನಿರ್ವಹಣೆ ಮಾಡುವ ಜಾಬ್ದಾರಿಯನ್ನು ಟಾಟಾ ಮೋಟಾರ್ಸ್‌ಗೆ ವಹಿಸಲಾಗಿದೆ.

“ಟಾಟಾ ಸ್ಟಾರ್‌ಬಸ್ ಸುಸ್ಥಿರ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಉನ್ನತ ವಿನ್ಯಾಸ ಮತ್ತು ಅತ್ಯುತ್ತಮ ದರ್ಜೆಯ ವೈಶಿಷ್ಟ್ಯಗಳೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಾಹನವಾಗಿದೆ” ಎಂದು ಕಂಪನಿ ಹೇಳಿದೆ. ಸ್ವಚ್ಛ, ಸುಸ್ಥಿರ ನಗರಕ್ಕಾಗಿ ಹಾಗೂ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನರ ಸಂಚಾರಕ್ಕೆ ಅಗತ್ಯತೆಗೆ ಈ ಆದೇಶವು ಅತ್ಯುನ್ನತವಾಗಿದೆ. ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆಗಾಗಿ ಗರಿಷ್ಠ ಪ್ರಯಾಣಿಕರನ್ನು ಆಕರ್ಷಿಸುವ ಆಧುನಿಕ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಬಿಎಂಟಿಸಿ ಸಂತೋಷವಾಗಿದೆ ಎಂದು ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ ಹೇಳಿದ್ದರೆ.

“ಭಾರತದಲ್ಲಿ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್‌ನ ಬದ್ಧತೆಯು BMTC ಯಿಂದ ಎಲೆಕ್ಟ್ರಿಕ್ ಬಸ್‌ಗಳ ಪ್ರತಿಷ್ಠಿತ ಆದೇಶವನ್ನು ಪಡೆಯುವ ಮೂಲಕ ಮತ್ತಷ್ಟು ಬಲಗೊಂಡಿದೆ. ಈ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರಿನ ನಿವಾಸಿಗಳಿಗೆ ಪ್ರಯೋಜನವನ್ನು ನೀಡುತ್ತವೆ ಎಂಬ ವಿಶ್ವಾಸವಿದೆ ಎಂದು ಟಾಟಾ ಮೋಟಾರ್ಸ್‌ನ ಪ್ರಾಡಕ್ಟ್ ಲೈನ್-ಬಸ್‌ಗಳ ಉಪಾಧ್ಯಕ್ಷ ರೋಹಿತ್ ಶ್ರೀವಾಸ್ತವ ಹೇಳಿದ್ದಾರೆ.

ಕಳೆದ 30 ದಿನಗಳಲ್ಲಿ ಟಾಟಾ ಮೋಟಾರ್ಸ್ ಈಗಾಗಲೇ ದೆಹಲಿ ಸಾರಿಗೆ ನಿಗಮದಿಂದ (ಡಿಟಿಸಿ) 1,500 ಎಲೆಕ್ಟ್ರಿಕ್ ಬಸ್‌ಗಳಿಗೆ ಮತ್ತು ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಯಿಂದ (ಡಬ್ಲ್ಯುಬಿಟಿಸಿ) 1,180 ಎಲೆಕ್ಟ್ರಿಕ್ ಬಸ್‌ಗಳಿಗೆ ಆದೇಶವನ್ನು ಪಡೆದಿದೆ.ಟಾಟಾ ಮೋಟರ್ಸ್‍ನ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಸೌಕರ್ಯಗಳು, ಬ್ಯಾಟರಿ-ಎಲೆಕ್ಟ್ರಿಕ್, ಮಿಶ್ರತಳಿ, ಸಿಎನ್‍ಜಿ,ಎಲ್‍ಎನ್‍ಜಿ ಮತ್ತು ಸಾರಜನಕ ಇಂಧನ ಸೆಲ್ ತಂತ್ರಜ್ಞಾನ ಸೇರಿದಂತೆ ಪರ್ಯಾಯ ಇಂಧನ ತಂತ್ರಜ್ಞಾನದಿಂದ ಚಾಲಿತವಾದ ವಿನೂತನ ಸಂಚಾರ ಪರಿಹಾರಗಳನ್ನು ಹೊರತರುವ ನಿಟ್ಟಿನಲ್ಲಿ ನಿರಂತರ ಕಾರ್ಯತತ್ಪರವಾಗಿದೆ. ಇಲ್ಲಿಯವರೆಗೆ, ಟಾಟಾ ಮೋಟಾರ್ಸ್ ಭಾರತದ ಅನೇಕ ನಗರಗಳಲ್ಲಿ 715 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಿದೆ, ಇದು ಒಟ್ಟು 40 ಮಿಲಿಯನ್ ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಿದೆ.


Share news

Related Articles

Leave a Reply

Your email address will not be published. Required fields are marked *

Back to top button