ರಾಜ್ಯ

ಗೋಸಂರಕ್ಷಣೆಗೆ ಹೊಸ ಆಯಾಮ ನೀಡುವ ರಾಜ್ಯ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆ

Share news

ಗೋವುಗಳು ಭಾರತದ ಪರಂಪರೆಯಲ್ಲಿ ತಮ್ಮದೇ ಆದ ಪವಿತ್ರ ಸ್ಥಾನವನ್ನು ಹೊಂದಿದೆ. “ಹಟ್ಟಿ ತುಂಬಾ ಆಕಳು ಸಂಸಾರ ಮನೆ ತುಂಬಾ ಕ್ಷೀರ ಸಾಗರ ” ಎಂಬ ಮಾತಿನಂತೆ ಪ್ರತಿಯೊಂದು ಮನೆಯಲ್ಲೂ ಗೋವುಗಳನ್ನು ಸಾಕುತ್ತಿದ್ದರು ಆದರೆ ಆಧುನಿಕ ಜಗತ್ತಿನಲ್ಲಿ ನಗರೀಕರಣದಿಂದ ಮನೆಗಳಲ್ಲಿ ಹಸುಗಳನ್ನು ಸಾಕುವುದು ಕಡಿಮೆಯಾಗಿದೆ ಮಾತ್ರವಲ್ಲದೆ ಗೋಹತ್ಯೆಯಿಂದ ಸಾಕಷ್ಟು ದೇಶಿ ತಳಿಯ ಹಸುಗಳು ನಾಶವಾಗಿವೆ.

ಕರ್ನಾಟಕ ರಾಜ್ಯ ಸರ್ಕಾರವು ವಯಸ್ಸಾದ,ಕೈಬಿಡಲಾದ, ಗೋಹತ್ಯೆಯಿಂದ ರಕ್ಷಿಸಿದ, ವಶಪಡಿಸಿಕೊಂಡ ಹಾಗೂ ಅನಾರೋಗ್ಯ , ಗಾಯಗೊಂಡ ಗೋವುಗಳನ್ನು ರಕ್ಷಿಸಲು ಸರ್ಕಾರವು ಗೋಹತ್ಯೆ ಮತ್ತು ಸಂರಕ್ಷಣಾ ಕಾಯ್ದೆ 2021ರಲ್ಲಿ ತಂದಿತು, ಸರ್ಕಾರವು ಆರ್ಥಿಕ ನೆರವು ನೀಡುವ ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ಸ್ಥಾಪಿಸುತ್ತಿದೆ. ಖಾಸಗಿ ಗೋಶಾಲೆಗಳಿಗೆ ನೆರವು ನೀಡಲು ಗೋ ಸಂಪತ್ತನ್ನು ಸಂರಕ್ಷಿಸುವ ಪ್ರಯತ್ನದ ಮುಂದಿನ ಹಂತವಾಗಿ, ‘ಪುಣ್ಯಕೋಟಿ ದತ್ತು ಯೋಜನೆ’ಯನ್ನು ಘೋಷಿಸಿದೆ.

ಗೋವನ್ನು ನೋಡಿಕೊಳ್ಳಲು ಮತ್ತು ಗೋಶಾಲೆಗಳನ್ನು ನಿರ್ಮಿಸಲು ಸರ್ಕಾರದೊಂದಿಗೆ ಕೈಜೋಡಿಸಲು ಜನರಿಗೆ ಅವಕಾಶವನ್ನು ನೀಡುವ ವಿಶಿಷ್ಟ ಕಾರ್ಯಕ್ರಮ ‘ಪುಣ್ಯಕೋಟಿ ದತ್ತು ಯೋಜನೆ’ https://punyakoti.karahvs.in/ ಈ ಪೋರ್ಟಲ್ ನಿಮಗೆ ‘ಗೋವನ್ನು ದತ್ತು’, ‘ಗೋಶಾಲೆಗೆ ದಾನ’ ಮತ್ತು ‘ಗೋವಿಗೆ ಆಹಾರ’ ನೀಡಲು ಸಹಾಯಮಾಡುತ್ತದೆ. ಹಸುವನ್ನು ದತ್ತು ಸ್ವೀಕಾರ ಮಾಡಲು ಮೇವು, ಪೌಷ್ಟಿಕಾಂಶದ ಪೂರಕಗಳು ಮತ್ತು ಆರೋಗ್ಯ ತಪಾಸಣೆ ಮತ್ತು ಔಷಧಗಳು ಸೇರಿ ಒಂದು ವರ್ಷಕ್ಕೆ ರೂ 11,000 ವನ್ನು ಹಸುವಿನ ಆರೈಕೆಗೆ ನೀಡುವ ಮೂಲಕ 3 ತಿಂಗಳುಗಳು, 6 ತಿಂಗಳುಗಳು, 9 ತಿಂಗಳುಗಳು ಅಥವಾ ಒಂದು ವರ್ಷದಿಂದ 5 ವರ್ಷಗಳವರೆಗೆ ದತ್ತು ಸ್ವೀಕಾರ ಮಾಡಬಹುದು.

ಗೋಶಾಲೆಗಳಿಗೆ ಸಹಾಯ ಮಾಡಲು ನೀವು ಗೋಶಾಲೆಗಳಿಗೆ ದಾನ ಮಾಡಬಹುದು ಇದರಲ್ಲಿ ಹಸುಗಳನ್ನು ತೊಳೆಯುವುದು ಮತ್ತು ಆವರಣದ ನಿರ್ವಹಣೆ ವೆಚ್ಚಗಳನ್ನು ಪೂರೈಸುವುದು ಅಥವಾ ಗೋಶಾಲೆಗಳು, ನೀರು ಕೊಯ್ಲು ರಚನೆಗಳು ಇತ್ಯಾದಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಧನ ಸಹಾಯ ಮಾಡುವುದು, ಹಸುವಿನ ಸಗಣಿ ಮತ್ತು ಗೋಮೂತ್ರದಿಂದ ತಯಾರಿಸಿದ ಪರಿಸರ ಸ್ನೇಹಿ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಸಕ್ರಿಯಗೊಳಿಸುವುದು ಈ ರೀತಿ ಸಹಕಾರ ನೀಡಬಹುದು.

ಹಸುವಿಗೆ ಆಹಾರ ನೀಡಿ ಒಂದು ದಿನ ಹಸುವಿಗೆ ಮೇವನ್ನು ಪ್ರಾಯೋಜಿಸಬಹುದು. ಜನ್ಮದಿನಗಳು ಮತ್ತು ವಾರ್ಷಿಕೋತ್ಸವಗಳಂತಹ ವಿಶೇಷ ಸಂದರ್ಭಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಇದು ಒಂದು ಅನನ್ಯ ಮಾರ್ಗವಾಗಿದೆ. ಪುಣ್ಯಕೋಟಿ ದತ್ತು ಯೋಜನೆಯು ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಮುಖ ಕಾರ್ಯಕ್ರಮವಾಗಿದ್ದು, ನಾಗರಿಕರು ಹಸುಗಳನ್ನು ಸೇವಾ ಕಾರ್ಯವಾಗಿ ಅಳವಡಿಸಿಕೊಳ್ಳಲು ವೇದಿಕೆಯನ್ನು ರಚಿಸುವ ಉದ್ದೇಶದಿಂದ 28 ಜುಲೈ 2022 ರಂದು ಪ್ರಾರಂಭಿಸಲಾಗಿದೆ.

ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಗೋಶಾಲೆಗಳಿವೆ, ಅವುಗಳಲ್ಲಿ ಸುಮಾರು 45,000 ಹಸುಗಳು ತೊರೆದ, ರಕ್ಷಿಸಲ್ಪಟ್ಟ, ವಯಸ್ಸಾದ ಅಥವಾ ಅನಾರೋಗ್ಯಕ್ಕೆ ಒಳಗಾಗಿವೆ. ಈ ಜಾನುವಾರುಗಳನ್ನು ನೋಡಿಕೊಳ್ಳಲು ಸರ್ಕಾರವು ಪ್ರತಿ ವರ್ಷ ಹಣವನ್ನು ವ್ಯಯಿಸುತ್ತಿದ್ದರೂ, ಹಸುಗಳ ಸಂಪೂರ್ಣ ಕಾಳಜಿಯನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಸಹಭಾಗಿತ್ವವು ಅವಶ್ಯಕವಾಗಿದೆ. ಹಾಗಾಗಿ ಗೋಶಾಲೆಗಳನ್ನು ಆರ್ಥಿಕವಾಗಿ ಬಲಪಡಿಸಲು, ಜಾನುವಾರುಗಳ ಸ್ಥಳೀಯ ತಳಿಗಳನ್ನು ಸಂರಕ್ಷಿಸಲು, ಹಸುವಿನ ಆರೈಕೆಯಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳಲು, ದತ್ತು ಪಡೆದ ಹಸುವಿನೊಂದಿಗೆ ಭಾವನಾತ್ಮಕ ಸಂಬಂಧವನ್ನು ಸೃಷ್ಟಿಸಲು ಪುಣ್ಯಕೋಟಿ ದತ್ತು ಯೋಜನೆಯು ಮಹತ್ವದ ಪಾತ್ರ ವಹಿಸುತ್ತದೆ.


Share news

Related Articles

Leave a Reply

Your email address will not be published. Required fields are marked *

Back to top button