Uncategorized

ಉತ್ತರ ರೈಲ್ವೆಯಲ್ಲಿ 93 ಹುದ್ದೆಗಳಿಗೆ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ..

Share news

ಉತ್ತರ ರೈಲ್ವೆಯು ತನ್ನ ಕಂಸ್ಟ್ರಕ್ಷನ್‌ ಪ್ರಾಜೆಕ್ಟ್‌ಗಳಲ್ಲಿ ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್‌ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಸಿವಿಲ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್, ಸಿಗ್ನಲ್ ಮತ್ತು ಟೆಲಿಕಾಂ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಿದೆ.

ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮ | ಏನಿದು ನಿಯಮ ?

  • ನೇಮಕಾತಿ ಪ್ರಾಧಿಕಾರ : ಉತ್ತರ ರೈಲ್ವೆ, ರೈಲ್ವೆ ನೇಮಕಾತಿ ಮಂಡಳಿ.
  • ಹುದ್ದೆ ಹೆಸರು : ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್‌.
  • ಹುದ್ದೆಗಳ ಸಂಖ್ಯೆ : 93
  • ವಿದ್ಯಾರ್ಹತೆ : 4 ವರ್ಷದ ಇಂಜಿನಿಯರಿಂಗ್ ಪದವಿ ಪಾಸ್.

ವಯಸ್ಸಿನ ಅರ್ಹತೆ : ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 34 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಕೆಟಗರಿಯವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಪಿ.ಎಂ ವಿಶ್ವಕರ್ಮ ಯೋಜನೆಗೆ ಒಪ್ಪಿಗೆ | ಶೇ 5ರ ಬಡ್ಡಿ ದರದಲ್ಲಿ 1 ಲಕ್ಷದ ವರಗೆ ಸುಲಭ ಸಾಲ ಸೌಲಭ್ಯ | ಇಲ್ಲಿದೆ ಮಾಹಿತಿ…

ವಿಭಾಗವಾರು ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್ ಹುದ್ದೆಗಳು
ಸಿವಿಲ್ ಡಿಪಾರ್ಟ್‌ಮೆಂಟ್ : 60
ಇಲೆಕ್ಟ್ರಿಕಲ್ ಡಿಪಾರ್ಟ್‌ಮೆಂಟ್ : 20
ಸಿಗ್ನಲ್ ಮತ್ತು ಟೆಲಿಕಾಂ : 13

ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದವರ ಗೇಟ್‌ ಸ್ಕೋರ್‌ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ನಿಗಧಿತ ವಿದ್ಯಾರ್ಹತೆಯಲ್ಲಿ ಸಾಮಾನ್ಯ ಕೆಟಗರಿಯವರು ಶೇಕಡ.60 ಅಂಕಗಳು, ಒಬಿಸಿ-ಎನ್‌ಸಿಎಲ್‌ ಅಭ್ಯರ್ಥಿಗಳು ಶೇಕಡ.55 ಅಂಕಗಳು, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು ಶೇಕಡ.50 ಅಂಕಗಳನ್ನು ಗಳಿಸಿ ಪಾಸ್‌ ಮಾಡಿದವರು ಮಾತ್ರ ಆಯ್ಕೆ ಪ್ರಕ್ರಿಯೆಗೆ ಅರ್ಹರು.

ಅರ್ಜಿ ಶುಲ್ಕ ರೂ.100.

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?

ಸೀನಿಯರ್ ಟೆಕ್ನಿಕಲ್ ಅಸೋಸಿಯೇಟ್ ಹುದ್ದೆಗೆ ಮಾಸಿಕ ಸಂಭಾವನೆ
Z ಕ್ಲಾಸ್ ಸಿಟಿಗಳಲ್ಲಿ ರೂ.32,000.
Y ಕ್ಲಾಸ್‌ ಸಿಟಿಗಳಲ್ಲಿ ರೂ.34,000.
X ಕ್ಲಾಸ್ ಸಿಟಿಗಳಲ್ಲಿ ರೂ.37,000.

ಮೇಲಿನ ಸಂಭಾವನೆ ಜತೆಗೆ ವೈದ್ಯಕೀಯ ಭತ್ಯೆ, ಡೈಲಿ ಅಲೋವೆನ್ಸ್‌, ಇತರೆ ವಿಶೇಷ ಭತ್ಯೆಗಳು ಸಿಗಲಿವೆ.

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : http://www.nr.indianrailways.gov.in/

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಕ್ಲಿಕ್ ಮಾಡಿ ಓದಿರಿ.

Northern Railway STA Job Notification 2023

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಅಂಚೆ ಮೂಲಕ ಅಥವಾ ಕೊರಿಯರ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಅರ್ಜಿ ಸಲ್ಲಿಸಿದ ನಂತರ ಮುಂದಿನ ಪ್ರಕ್ರಿಯೆಗಳನ್ನು ತಿಳಿಯಲು ಆಗಾಗ ವೆಬ್‌ಸೈಟ್‌ http://www.nr.indianrailways.gov.in/ ಗೆ ಭೇಟಿ ನೀಡಲು ಸೂಚಿಸಲಾಗಿದೆ.

BHARATHAVANI NEWS

Share news

Related Articles

Leave a Reply

Your email address will not be published. Required fields are marked *

Back to top button