ಅಮೆರಿಕದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಭಾರತೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅಮೆರಿಕ ಕಾಲೇಜುಗಳಲ್ಲಿ ಪದವೀಧರರಾಗುವ ವಿದೇಶೀ ವಿದ್ಯಾರ್ಥಿಗಳಿಗೆ ನೇರವಾಗಿ ಗ್ರೀನ್ ಕಾರ್ಡ್ ನೀಡುವ ಯೋಜನೆ ಜಾರಿಗೆ ತರುವ ಭರವಸೆ ನೀಡಿದ್ದಾರೆ.
ಪದವಿ ಪಡೆದವರು ಅಮೆರಿಕದಲ್ಲೇ ನೆಲೆಸಲು ಗ್ರೀನ್ ಕಾರ್ಡ್ ನೆರವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.