ವಿಶ್ವದ ಪ್ರಭಾವಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಆಶಾ ಕಾರ್ಯಕರ್ತೆ ಮತಿಲ್ದಾ ಕುಲ್ಲು

Table of Content

ಫೋರ್ಬ್ಸ್‌ ಪ್ರತಿ ವರ್ಷ ವಿಶ್ವದ ಪ್ರಭಾವಶಾಲಿ ನಾಯಕರು, ಮಹಿಳೆಯರು ಹಾಗೂ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿತ್ತು ಅದರಲ್ಲಿ ಅಚ್ಚರಿ ಎಂದರೆ ಒಡಿಶಾ ಮೂಲದ ಆಶಾ ಕಾರ್ಯಕರ್ತೆ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದರು. ತಿಂಗಳಿಗೆ ಕೇವಲ 4,500 ರೂ ಸಂಬಳ ಪಡೆಯುವ ಒಡಿಶಾ ಮೂಲದ ಆದಿವಾಸಿ ಸಮುದಾಯದ ಆಶಾ ಕಾರ್ಯಕರ್ತೆ.

45 ವರ್ಷದ ಆಶಾ ಕಾರ್ಯಕರ್ತೆ ಮತಿಲ್ದಾ ಕುಲ್ಲು ಒಡಿಶಾದ ಸುಂದರ್‌ಗರ್ ಜಿಲ್ಲೆಯವರು. ಇವರು ತೆಹ್ಸಿಲ್‌ನ 964 ಜನರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಇವರು ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕೆಲಸಗಳಿಂದ ಗುರುತಿಸಲ್ಪಟ್ಟಿದ್ದಾರೆ.

ಮತಿಲ್ದಾ ಕುಲ್ಲು ಬರಗಾನ್‌ ತೆಹ್ಸಿಲ್‌ನಲ್ಲಿರುವ ಗರ್ಗಡ್‌ಬಹಲ್‌ ಗ್ರಾಮದವರು. ಆಶಾ ದೀದೀಯೆಂದು ಕೂಡ ಕರೆಯಲ್ಪಡುವ ಇವರು ಕೋವಿಡ್-19ಗೆ ಸಂಬಂಧಿಸಿದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2021ರ ಫೋರ್ಬ್ಸ್‌ ಪಟ್ಟಿಯಲ್ಲಿ ಮತಿಲ್ದಾ ಕುಲ್ಲು ಅಲ್ಲದೇ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದ ಮಾಜಿ ಅಧ್ಯಕ್ಷರಾದ ಅರುಂಧತಿ ಭಟ್ಟಾಚಾರ್ಯ ಸೇರಿ 21 ಮಹಿಳೆಯರು ಸ್ಥಾನ ಪಡೆದಿದ್ದಾರೆ.

ಮುಂಜಾನೆ 5 ಗಂಟೆಗೆ ತನ್ನ ದಿನಚರಿ ಶುರು ಮಡುವ ಮತಿಲ್ದಾ ಕುಲು ತನ್ನೆಲ್ಲಾ ಮನೆಕೆಲಸಗಳನ್ನು ಮುಗಿಸಿ ತನ್ನ ಕುಟುಂಬದ ನಾಲ್ವರು ಸದಸ್ಯರಿಗೆ ಆಹಾರವನ್ನು ತಯಾರಿಸುತ್ತಾಳೆ. ಜೊತೆಗೆ ಮನೆಯಲ್ಲಿರುವ ನಾಲ್ಕು ದನಗಳಿಗೂ ಆಹಾರ ನೀಡುವ ಆಕೆ ಇಡೀ ಗ್ರಾಮವನ್ನೇ ತನ್ನ ಕುಟುಂಬವೆಂದು ಭಾವಿಸಿದ್ದಾರೆ.

ಮತಿಲ್ದಾ ಕುಲ್ಲು ತಾವು ಆಶಾಕರ್ತೆಯಾದ ಆರಂಭದ ದಿನಗಳಲ್ಲಿ, ಹಳ್ಳಿಯ ಜನರು ಆರೋಗ್ಯ ಹಾಳಾದ ಕೂಡಲೇ, ವೈದ್ಯರ ಬಳಿ ಹೋಗುವ ಬದಲು ಮಾಟಗಾರರು ಅಥವಾ ಮಾಂತ್ರಿಕರ ಬಳಿ ತೆರಳುವುದನ್ನು ಗಮನಿಸಿದ್ದರು. ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸಿ ಅವರ ಈ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಮತಿಲ್ದಾ ಕುಲ್ಲು ನಿರ್ಣಾಯಕ ಪಾತ್ರ ವಹಿಸಿದ್ದರು.

ಪ್ರತಿದಿನ ತನ್ನ ಸೈಕಲ್‌ನಲ್ಲಿ ತೆರಳುವ ಮತಿಲ್ದಾ ಗ್ರಾಮದಲ್ಲಿ ಪ್ರತಿ ಮನೆ ಬಾಗಿಲುಗಳಿಗೆ ಹೋಗಿ ಜನರ ಆರೋಗ್ಯದ ಕುರಿತಾದ ಮಾಹಿತಿಯನ್ನು ಪಡೆಯುತ್ತಿದ್ದರು. ಅದರ ಜೊತೆ ನವಜಾತ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕುವುದು ಹೀಗೆ ಆರೋಗ್ಯದ ಅನೇಕ ಸೇವೆಗಳನ್ನು ಹಳ್ಳಿ ಹಳ್ಳಿಗೆ ಜನಜಾಗೃತಿ ಮೂಲಕ ತಿಳಿಸುತ್ತಿದ್ದಾರೆ.

ಪ್ರಸವಪೂರ್ವ ತಪಾಸಣೆ ನಡೆಸುವ ಬಗ್ಗೆ, ಹೆರಿಗೆಗೆ ಸಿದ್ಧತೆ ನಡೆಸುವ ಬಗ್ಗೆ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವುದು ಸೇರಿದಂತೆ ಹೀಗೆ ಹಲವಾರು ಸಲಹೆಗಳನ್ನು ಗ್ರಾಮಸ್ಥರಿಗೆ ಇವರು ನೀಡುತ್ತಾರೆ. ಮಧ್ಯರಾತ್ರಿ ಹೆರಿಗೆ ನೋವು ಅನುಭವಿಸುವ ಮಹಿಳೆಯರಿಗೆ ಚಿಕಿತ್ಸೆಯನ್ನು ಇವರು ನೀಡಿದ್ದಾರೆ. ಹೀಗೆ ಹಳ್ಳಿಯ ಜನರ ಆರೋಗ್ಯ ಕಾಪಾಡುವ ಅನೇಕ ಜೀವ ಉಳಿಸುವಲ್ಲಿ ಮುಖ್ಯವಾಗಿ ಕೋರೋನ ವಿರುದ್ಧ ಹೋರಾಡುವಲ್ಲೂ ಅವರ ಕೆಲಸ ನಿಜಕ್ಕೂ ಶ್ಲಾಘನೀಯ. ಅವರ ಕಾರ್ಯ ಯುವ ಪೀಳಿಗೆಗೆ ಸ್ಪೂರ್ತಿದಾಯಕ.

Tags :

admin

ಇನ್ನಷ್ಟು ಸುದ್ದಿಗಳು

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

ಇತ್ತೀಚಿನಸುದ್ದಿ

ಇನ್ನೊ ಓದಿ

ಭಾರಧ್ವಾಜಾಶ್ರಮ : ವೇದಾಧ್ಯಯನಕ್ಕೊಂದು ಗುರುಕುಲ..

By Balu Deraje  ಭಾರತದ ಪ್ರಾಚೀನ ಹಿಂದು ಧರ್ಮದ ಸಾಹಿತ್ಯ ಎಂದರೆ ವೇದಗಳು ಎಂದು ಪರಿಗಣಿಸಲಾಗಿದೆ. ಇದು ಸಂಸ್ಕೃತ ದಲ್ಲಿ ರಚಿಸಲ್ಪಟ್ಟಿದೆ. ಈ ವೇದಗಳನ್ನು ವ್ಯಾಸ ಮಹರ್ಷಿಗಳು ಪಠ್ಯ ರೂಪದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ಇವರ ನಾಲ್ಕು ಶಿಷ್ಯರಾದವರು 1: ಋಗ್ವೇದವನ್ನು ಪೈಲ ಮಹರ್ಷಿ, 2: ಯಜುರ್ವೇದ ವನ್ನು ವೈಶಂಪಾಯನ ಮಹರ್ಷಿ, 3:ಸಾಮವೇದ ವನ್ನು ಜೈಮಿನಿ ಮಹರ್ಷಿ, 4: ಅಥರ್ವಣ ವೇದವನ್ನು ಸುಮಂತ ಮಹರ್ಷಿ ಗಳು ಪ್ರಚಾರ ಮಾಡಿದರು. ನಂತರ ಗುರುಕುಲ ಪದ್ದತಿಯು ಆರಂಭಗೊಂಡಿತು ಎಂದು ಉಲ್ಲೇಖವಿದೆ.. ನಾಡಿನ...
suvarna vidhana soudha, belgaum, legislative building

ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ

ಜುಲೈ 12ರಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 25 ರಂದು ಉಪಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ...
arrows, tendency, businesswoman

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಜಾಗತಿಕ ರೇಟಿಂಗ್ ಏಜೆನ್ಸಿಯಾದ ಫಿಚ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಾಗಬಹುದು. ಈ ಹಿಂದೆ ಮಾಡಿದ ಅಂದಾಜಿನಲ್ಲಿ ಶೇ. 7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಈಗ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೂಡಿಕೆಗಳು ಹೆಚ್ಚುತ್ತಿರುವುದು, ಗ್ರಾಹಕರ ವಿಶ್ವಾಸ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಫಿಚ್ ರೇಟಿಂಗ್ಸ್​ನ ಅನಿಸಿಕೆಯಾಗಿದೆ.
cricket, sports, athlete

200 ಸಿಕ್ಸರ್‌ ಪೂರ್ಣಗೊಳಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ದದ ತಮ್ಮ ಕೊನೆಯ ಸೂಪರ್‌-8ರ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌ 1. ರೋಹಿತ್‌ ಶರ್ಮಾ-157 ಪಂದ್ಯಗಳಿಂದ 203 ಸಿಕ್ಸರ್‌2. ಮಾರ್ಟಿನ್‌ ಗಪ್ಟಿಲ್‌-122 ಪಂದ್ಯಗಳಿಂದ 173 ಸಿಕ್ಸರ್‌3. ಜೋಸ್‌ ಬಟ್ಲರ್‌- 123 ಪಂದ್ಯಗಳಿಂದ 137 ಸಿಕ್ಸರ್‌4. ಗ್ಲೆನ್‌ ಮ್ಯಾಕ್ಸ್‌ವೆಲ್‌-113 ಪಂದ್ಯಗಳಿಂದ 133...

Get in Touch

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

Technology Partner

© Copyright 2024 – All Rights reserved

0
Would love your thoughts, please comment.x
()
x