ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ದದ ತಮ್ಮ ಕೊನೆಯ
ಸೂಪರ್-8ರ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ಸ್
1. ರೋಹಿತ್ ಶರ್ಮಾ-157 ಪಂದ್ಯಗಳಿಂದ 203 ಸಿಕ್ಸರ್
2. ಮಾರ್ಟಿನ್ ಗಪ್ಟಿಲ್-122 ಪಂದ್ಯಗಳಿಂದ 173 ಸಿಕ್ಸರ್
3. ಜೋಸ್ ಬಟ್ಲರ್- 123 ಪಂದ್ಯಗಳಿಂದ 137 ಸಿಕ್ಸರ್
4. ಗ್ಲೆನ್ ಮ್ಯಾಕ್ಸ್‌ವೆಲ್-113 ಪಂದ್ಯಗಳಿಂದ 133 ಸಿಕ್ಸರ್
5.ನಿಕೋಲಸ್ ಪೂರನ್-95 ಪಂದ್ಯಗಳಿಂದ 132 ಸಿಕ್ಸರ್
ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಮೂರನೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ.