ಕೇರಳದ ವಯನಾಡಿನ ಕಾಡಿನಲ್ಲಿ ವಾಸಿಸುವ ‘ಆಶಾನ್’ ಎಂದು ಕರೆಯಲ್ಪಡುವ ಕೆ ಗೋವಿಂದನ್ ಅವರು ಬಿಲ್ಲು ಮತ್ತು ಬಾಣಗಳನ್ನು ಹಿಡಿದು ನಿಂತರೆ ಅವರ ಬಿಲ್ಲು ವಿದ್ಯೆಯ ಕೈಚಳಕ ನೋಡಿದರೆ ಮಹಾಭಾರತದಲ್ಲಿ ಬರುವ ಅರ್ಜುನ ನೆನಪಗುವುದು ಖಂಡಿತ. 72ರ ಹರೆಯದ ‘ಪ್ರಾಚೀನ ಬಿಲ್ಲುಗಾರ’ ಯುವ ಪೀಳಿಗೆಗೆ ಬಿಲ್ಲುಗಾರಿಕೆಯನ್ನು ಕಲಿಸುವುದನ್ನು ಈಗಲೂ ಮುಂದುವರೆಸಿದ್ದಾರೆ. ತಮ್ಮ ಹಳೆಯದಾದ ಕೌಶಲ್ಯವನ್ನು ಉಳಿಸುವ ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶ ಹೊಂದಿದ್ದಾರೆ.
ಗೋವಿಂದನ್ ಅವರು ಬೇಟೆಯನ್ನು ಪವಿತ್ರವೆಂದು ಪರಿಗಣಿಸುವ ವಯನಾಡಿನ ಮುಳ್ಳೂರ್ ಕುರ್ಮಾ ಸಮುದಾಯದಿಂದ ಬಂದವರು. ಅವರ ಸಮುದಾಯದ ಜನರು ಕೇವಲ ಆಹಾರಕ್ಕಾಗಿ ಬೇಟೆಯಾಡುತ್ತಾರೆ, ವ್ಯಾಪಾರಕ್ಕಾಗಿ ಅಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಗೋವಿಂದನ್ ತಾವು ಮತ್ತು ಅವರ ಪೂರ್ವಜರು ಬೇಟೆಯಾಡಿದ ಎಲ್ಲಾ ಪ್ರಾಣಿಗಳಿಗೆ ಪ್ರಾಯಶ್ಚಿತ್ತ ಮಾಡಲು ಸಸ್ಯಾಹಾರಿಯಾಗಲು ನಿರ್ಧರಿಸಿದರು.
ಇದನ್ನೂ ಓದಿ : ಭಾರತೀಯ ಆಹಾರ ಇಲಾಖೆ 11 ಹುದ್ದೆಗಳಿಗೆ ನೇಮಕಾತಿ 2024
ಪ್ರಸ್ತುತ, ಅವರು ತಮ್ಮ ದಿನದ ಬಹುಪಾಲು ಭಾಗವನ್ನು ಬಿದಿರನ್ನು ಬಳಸಿ ತಯಾರಿಸಿದ ಪರಿಕರಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಅವರ ಸಮುದಾಯದಲ್ಲಿ ಅವರ ಉಪಕರಣವಾದ ಬಿಲ್ಲು ಬಾಣವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಬೇಟೆಗಾರ ಸತ್ತಾಗ, ಆತನ ಉಪಕರಣಗಳನ್ನು ಅವನ ಜೊತೆಯೇ ಚಿತೆಗೆ ಹಾಕಲಾಗುತ್ತದೆ.
ಬಿಲ್ಲುಗಾರಿಕೆ ಮುಂದಿನ ಪೀಳಿಗೆಗೆ ದಾಟಿಸಲು ಬಿಲ್ಲುಗಾರ ನಿರ್ಧರಿಸಿದ್ದಾರೆ.
ಅವರನ್ನು ಭೇಟಿಯಾಗಿ ಅವರ ಕೈಚಳಕ ನೋಡಲುಬರುವುದಲ್ಲದೆ, ಪ್ರಪಂಚದಾದ್ಯಂತದ ಅನೇಕ ಜನರು ಬಿಲ್ಲು ವಿದ್ಯೆ ಕಲಿಯಲು ಅವರ ವಿದ್ಯಾರ್ಥಿಗಳಾಗಲು ಆಗಮಿಸುತ್ತಾರೆ. ಗೋವಿಂದನ್ ಅವರು ಈ ಕಲಿಯುವವರಲ್ಲಿ ಉತ್ಸಾಹವನ್ನು ಕಂಡು ಸಂತೋಷಪಡುತ್ತಾರೆ ಆದರೆ ಅವರದೇ ಸಮುದಾಯದ ಹೆಚ್ಚಿನ ಯುವಕರು ತಮ್ಮ ಹಳೆಯ ಬಿಲ್ಲುಗಾರಿಕೆ ತಂತ್ರಗಳನ್ನು ಕಲಿಯಲು ಆಸಕ್ತಿ ಹೊಂದಿಲ್ಲ ಎಂಬುದು ದುಃಖದ ಸಂಗತಿ.
ಗೋವಿಂದನ್ ಅವರಿಗೆ ವಯಸ್ಸು ಎಂದೂ ಅಡ್ಡಿಯಾಗಲಿಲ್ಲ. ಅವರು ಚುರುಕಾಗಿ, ಶಕ್ತಿಯುತವಾಗಿ ದಿನವಿಡೀ ಇದರಲ್ಲೇ ತೊಡಗಿಸಿಕೊಂಡಿದ್ದಾರೆ. ಪುರಾತನವಾದ ಬಿಲ್ಲುಗಾರಿಕೆಯನ್ನು ಸಂರಕ್ಷಿಸುವ ಬಗ್ಗೆ ಎಷ್ಟು ಜನರಿಗೆ ಸಾಧ್ಯವೋ ಅಷ್ಟು ಜನರಿಗೆ ಮುಂದಿನ ಪೀಳಿಗೆಗೆ ದಾಟಿಸಲು ನಿರ್ಧರಿಸಿದ್ದಾರೆ. ತಮ್ಮಲ್ಲಿರುವ ವಿದ್ಯೆಯನ್ನು ಮುಚ್ಚಿಡದೆ ಪರರಿಗೆ ದಾನ ಮಾಡುವ ಅವರ ಯೋಚನೆ ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ…
ಇದನ್ನೂ ಓದಿ : ಕೃಷಿ ನೀರಾವರಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್..!