ಜುಲೈ 14ರ ಭಾನುವಾರ, 46 ವರ್ಷಗಳ ನಂತರ ಒಡಿಶಾಸದ ಪುರಿಯಲ್ಲಿರುವ ಪುರಾಣ ಪ್ರಸಿದ್ದ ಜಗನ್ನಾಥ ದೇವಾಲಯದ ರತ್ನಭಂಡಾರ ಓಪನ್ ಮಾಡಲು ರಾಜ್ಯದ ಬಿಜೆಪಿ ಸರ್ಕಾರ ನಿರ್ಧರಿಸಿದೆ.
ಪುರಿ ಜಗನ್ನಾಥ ದೇವಾಲಯದ ಬಾಗಿಲುಗಳನ್ನು ತೆಗೆಯುವುದು, ರತ್ನಭಂಡಾರದ ಕೊಠಡಿಯನ್ನು ತೆರೆಯುವುದು ಬಿಜೆಪಿ, ಚುನಾವಣೆಯ ವೇಳೆ ನೀಡಿದ್ದ ಚುನಾವಣಾ ಭರವಸೆಯಾಗಿತ್ತು. ಅದರಂತೆಯೇ, ಜೂನ್ 13ರಂದು ದೇವಾಲಯದ ಎಲ್ಲಾ ನಾಲ್ಕು ಬಾಗಿಲುಗಳನ್ನು ತೆರೆಯಲಾಗಿತ್ತು.ಈಗ, ಮತ್ತೊಂದು ಭರವಸೆಯ ಪ್ರಕಾರ, ದೇವಾಲಯದ ರತ್ನಭಂಡಾರದ ಒಳಗಿನ ಕೊಠಡಿಯನ್ನು ಜುಲೈ 14ಕ್ಕೆ ತೆರೆಯುವಂತೆ ಮುಖ್ಯಮಂತ್ರಿ ಮಾಝಿ ಸೂಚಿಸಿದ್ದಾರೆ. ಭಂಡಾರದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಉನ್ನತ ಮಟ್ಟದ ಸಮಿತಿಯು, ಈ ಬಗ್ಗೆ ಸರ್ಕಾರಕ್ಕೆ ಶಿಫಾರಸನ್ನು ಮಾಡಿದೆ.
ದಾಸ್ತಾನು ಮಾಡುವಾಗ ತ್ರಿಮೂರ್ತಿಗಳ ದರ್ಶನಕ್ಕೆ ಭಕ್ತರಿಗೆ ತೊಂದರೆಯಾಗದಂತೆ ಸಮಿತಿಯು ಶ್ರೀ ಜಗನ್ನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಕೆಲವು ಪ್ರಸ್ತಾವನೆಗಳನ್ನು ಕಳುಹಿಸಿದೆ ಎಂದು ಭರವಸೆ ನೀಡಿದರು.