ಕರ್ನಾಟಕ ರಾಜ್ಯ ಸರ್ಕಾರವು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವಾಗಿ ವಾರ್ಷಿಕ ವಿದ್ಯಾರ್ಥಿ ವೇತನ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿ ವೇತನ ಪಡೆಯಲು ಮಾಧ್ಯಮಿಕ/ಪ್ರೌಢಶಾಲಾ ವಿದ್ಯಾರ್ಥಿಗಳ ಅಂದರೆ 6 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಕ್ರೀಡಾ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಈ ವಿದ್ಯಾರ್ಥಿ ವೇತನವು ವಾರ್ಷಿಕ 10,000ರೂ ಪ್ರೋತ್ಸಾಹ ಧನವನ್ನು ಹೊಂದಿರುತ್ತದೆ.
2024-25ನೇ ಸಾಲಿನ ವಿದ್ಯಾರ್ಥಿವೇತನ ಪಡೆಯಲು ಆಸಕ್ತ ಕ್ರೀಡಾ ವಿದ್ಯಾರ್ಥಿಗಳು ಕಛೇರಿಯ ಅಧಿಕೃತ ಜಾಲತಾಣ https://sevasindhuservices.karnataka.gov.in ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು 01.06.2024 ರಿಂದ 30.06.2024ರವರೆಗೆ ತಿಳಿಸಲಾಗಿತ್ತು. ಆದರೆ ಈಗ ಸದರಿ ದಿನಾಂಕವನ್ನು 20.07.2024ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರತೀ ಜಿಲ್ಲೆಯಲ್ಲೂ ಅಗತ್ಯ ಕ್ರಮ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಅರ್ಜಿ ಸಲ್ಲಿಸುವಂತೆ ಪ್ರಚಾರ ನೀಡಲು ಆದೇಶಿಸಿದೆ.