ನೀವು ಉದ್ಯೋಗ ಆಕಾಂಕ್ಷಿಗಳೇ ? ಅದರಲ್ಲೂ ಅಂಚೆ ಇಲಾಖೆ ಕೆಲಸ ಹುಡುಕುತ್ತಿದ್ದೀರಾ..? ಹಾಗಾದರೆ ನಿಮಗೆ ಸಿಹಿ ಸುದ್ದಿ ಇಲ್ಲಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ ಬಾಕಿಯಿರುವ ಸುಮಾರು 44,228 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿ ಅಧಿಸೂಚನೆ (India Post GDS Recruitment 2024) ಹೊರಡಿಸಿದೆ. ಗ್ರಾಮೀಣ ಡಾಕ್ ಸೇವಕ್, ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು ಖಾಲಿಯಿದ್ದು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 15 ರಿಂದ ಆರಂಭವಾಗಿದ್ದು ಕೊನೆಯ ದಿನ ಆಗಸ್ಟ್ 5.
ಎಲ್ಲೆಲ್ಲಿ ಹುದ್ದೆ ಖಾಲಿಯಿದೆ?
ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳಾದ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚತ್ತೀಸ್ ಘಡ, ಹರಿಯಾಣ, ದೆಹಲಿ, ಗುಜರಾತ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯ ಪ್ರದೇಶ, ಕೇರಳ, ಮಹಾರಾಷ್ಟ್ರ, ಪಂಜಾಬ್, ಈಶಾನ್ಯ ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಖಂಡ, ತಮಿಳು ನಾಡು, ರಾಜಸ್ಥಾನಗಳಲ್ಲಿ ಈ ನೇಮಕಾತಿ ನಡೆಯಲಿದೆ.
ಇದನ್ನೂ ಓದಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ 28 ಹುದ್ದೆಗಳ ನೇಮಕಾತಿ 2024
ವಿದ್ಯಾರ್ಹತೆ ಮತ್ತು ವಯೋಮಿತಿ
ಅಂಚೆ ಇಲಾಖೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು. ಕಡ್ಡಾಯವಾಗಿ ಇಂಗ್ಲಿಷ್ ಹಾಗೂ ಗಣಿತ ವಿಷಯಗಳನ್ನು ಒಳಗೊಂಡಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಹಾಗೂ ಗರಿಷ್ಟ 40 ವರ್ಷ ಆಗಿರಬೇಕು. ವಯೋಮಿತಿ ಸಡಿಲಿಕೆ ಕೇವಲ ಮೀಸಲಾತಿಗೆ ಅನುಗುಣವಾಗಿ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ
ಅಂಚೆ ಇಲಾಖೆ ಈ ಹುದ್ದೆಗಳಿಗೆ ಸಲ್ಲಿಸುವ ಅರ್ಜಿಗೆ ಶುಲ್ಕ ನಿಗದಿ ಪಡಿಸಲಾಗಿದೆ. ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿ ಪಡಿಸಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡ, ವಿಕಲ ಚೇತನರು ಹಾಗೂ ಇತರ ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ ಹಾಗೂ ವೇತನ ನಿಗದಿ
ಅಭ್ಯರ್ಥಿಗಳ ಆಯ್ಕೆಯು ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಹುದ್ದೆಗಳಿಗೆ ಅನುಗುಣವಾಗಿ 10,000 ರೂ. ಇಂದ 29,380 ರೂ. ಮಾಸಿಕ ವೇತನ ನೀಡುವ ಬಗ್ಗೆ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಭಾರತೀಯ ಆಹಾರ ಇಲಾಖೆ 11 ಹುದ್ದೆಗಳಿಗೆ ನೇಮಕಾತಿ 2024
ಅರ್ಜಿ ಸಲ್ಲಿಸುವುದು ಹೇಗೆ?
ಅಂಚೆ ಇಲಾಖೆಯ ಜಾಲತಾಣhttps://indiapostgdsonline.gov.in/reg_validation.aspx ಇದಕ್ಕೆ ಕ್ಲಿಕ್ ಮಾಡಿ ಇಮೇಲ್ ಐಡಿ, ಫೋನ್ ನಂಬರ್ ಹಾಕಿ ಹೆಸರು ನಮೂದಿಸಿ ಪಾಸ್ವರ್ಡ್ ರಚಿಸಬೇಕು. ಆ ಪಾಸ್ವರ್ಡ್ ಮೂಲಕ ಲಾಗಿನ್ ಆದಾಗ ಅರ್ಜಿ ಫಾರಂ ಕಂಡು ಬರುತ್ತದೆ. ಅಲ್ಲಿ ಕೇಳಲಾದ ಮಾಹಿತಿಗಳನ್ನು ಹಾಕಿ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಅಗತ್ಯವಿದ್ದವರು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಅಭ್ಯರ್ಥಿಗಳ ಇತ್ತೀಚಿನ ಫೋಟೋ ಹಾಗೂ ಸಹಿಯನ್ನು ಸೂಚಿಸಲಾಗಿರುವ ಸೂಕ್ತ ಅಳತೆಯಲ್ಲಿ ಅಪ್ಲೋಡ್ ಮಾಡಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಮರು ಪರಿಶೀಲನೆ ಮಾಡಿ submit ಬಟನ್ ಒತ್ತಿದರೆ ಆಯಿತು.
ಹೆಚ್ಚಿನ ಮಾಹಿತಿಗಾಗಿ ಅಂಚೆ ಇಲಾಖೆಯ ವೆಬ್ಸೈಟ್ https://indiapostgdsonline.gov.in/ ಗೆ ಭೇಟಿ ನೀಡಿ.