ಬೆಂಗಳೂರು: ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯಪುರದಲ್ಲಿ ಜೂನ್ 18 ರಂದು ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಹಾಗು ಪಠ್ಯೇತರ ಚಟುವಟಿಕೆಯ ಬಗ್ಗೆ ಗಮನ ಹರಿಸುವ ಕುರಿತು ಜ್ಞಾನ ಬೆಳಕು ಟ್ರಸ್ಟ್ ಕಡೆಯಿಂದ ಮಕ್ಕಳ ಒಂದು ದಿನದ ಮಕ್ಕಳ ಶಿಬಿರ ನಡೆಯಿತು. ಈ ಶಿಬಿರದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯಪುರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ರಮೇಶ್ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರವಿಶಂಕರ್ ಡೋಂಗ್ರೆ ಆದ್ಯಾತ್ಮ ಚಿಂತಕರು ಮಕ್ಕಳಲ್ಲಿ ಮಾತನಾಡುತ್ತಾ ಮಕ್ಕಳ ಹಕ್ಕುಗಳ ಬಗ್ಗೆ, ಪರೀಕ್ಷೆ ಎದರಿಸುವುದು ಹೇಗೆ ಎನ್ನುವ ಕುರಿತು ಮಾಹಿತಿ ಕಾರ್ಯಗಾರ ನಡೆಸಿದರು, ಶ್ರೀಮತಿ ಪದ್ಮಶ್ರೀ ಗಣಿತ ಶಾಸ್ತ್ರಜ್ಞರು ಮಾತನಾಡುತ್ತಾ ಮಕ್ಕಳಲ್ಲಿ ಗಣಿತ ವಿಷಯ ಕುರಿತು ಹಾಗೆ ಗಣಿತ ಎಂದರೆ ಕಷ್ಟವೇನಿಲ್ಲ ಎನ್ನುವ ವಿಷಯದ ಕುರಿತು ಮಾತನಾಡುತ್ತಾ ಇಂದಿನ ಮಕ್ಕಳು ಇಂದಿನ ಪ್ರಜೆಗಳೆಂದು ಮಕ್ಕಳಿಗೆ ಹುರಿದುಂಬಿಸಿದರು.ಹಾಗೆ ಚಂದ್ರಮೌಳಿ ಕಡಂದೇಲು ಜ್ಞಾನ ಬೆಳಕು ಬಳಗದ ಸ್ಥಾಪಕರು ಮಾತನಾಡುತ್ತಾ ಪಠ್ಯೇತರ ಚಟುವಟಿಕೆಗೆ ಮೂಲಕ ಮಕ್ಕಳಲ್ಲಿ ಆಟ ಆಡಿಸುತ್ತಾ ಮನೋರಂಜಿಸಿದರು.
ವಿಧ್ಯಾರ್ಥಿ ಸಮೂಹಕ್ಕೆ ಒಂದೊಳ್ಳೆ ರೀತಿಯಲ್ಲಿ ಮಾಹಿತಿ
ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರವಿರಲಿ
ಜ್ಞಾನ ಬೆಳಕು ಸಂಸ್ಥೆಯು 1 ವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಒಂದರಿಂದ ಎರಡು ಸಾವಿರ ಮಕ್ಕಳಿಗೆ ಪಠ್ಯೇತರ ಚಟುವಟಿಕೆಯ ಕುರಿತು ಮಾಹಿತಿ ಕಾರ್ಯಗಾರ ನಡೆಸಿದೆ ಹಾಗೆ ಮಕ್ಕಳ ಹಕ್ಕುಗಳು , ಮಕ್ಕಳ ಆರೋಗ್ಯ , ಮಕ್ಕಳ ಕೌಶಲ್ಯಾಭಿವೃದ್ಧಿ ತರಬೇತಿ ,ದೈಹಿಕ ಮತ್ತು ಮಾನಸಿಕ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ತಿಳಿಸಿಸುತ್ತಾ ಬರುತ್ತಿದೆ.ಇದೊಂದು ವಿದ್ಯಾರ್ಥಿಗಳೇ ಸೃಷ್ಟಿಸಿದ ಬಳಗ ಹಾಗೆ ವಿಧ್ಯಾರ್ಥಿಗಳ ಸಮೂಹ ,ಒಗ್ಗಟ್ಟಾಗಿದ್ದುಕೊಂಡು ವಿಧ್ಯಾರ್ಥಿ ಸಮೂಹಕ್ಕೆ ಒಂದೊಳ್ಳೆ ರೀತಿಯಲ್ಲಿ ಮಾಹಿತಿ ಒದಗಿಸುತ್ತಾ ಬಂದಿದೆ.
ಇದನ್ನೂ ಓದಿ: 1ನೇ ತರಗತಿ ಸೇರಲು ಗರಿಷ್ಠ ವಯೋಮಿತಿ 8 ವರ್ಷಕ್ಕೆ ಹೆಚ್ಚಳ