ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿ ಆರ್ ಡಿಓ)
ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ದೀರ್ಘ ವ್ಯಾಪ್ತಿಯ ಗ್ಲೈಡ್ ಬಾಂಬ್ ಗೌರವನಾ ಪರೀಕ್ಷಾರ್ಥ ಹಾರಾಟ ಇತ್ತೀಚೆಗೆ ಯಶಸ್ವಿಯಾಗಿ ನಡೆದಿದೆ ಕರಾವಳಿಯಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಸು-30 ಎಂ.ಕೆ-1 ವಿಮಾನದಿಂದ ಉಡಾವಣೆಗೊಂಡ ಬಾಂಬ್ ತನ್ನ ಗುರಿಯನ್ನು ನಿಖರವಾಗಿ ಹೊಡೆದಿರುಳಿಸಿದೆ. ಮಿಲಿಟರಿ ಉತ್ಪನ್ನಗಳಲ್ಲಿ ಆತ್ಮನಿರ್ಭರತೆ ಸಾಧಿಸುವುದರ ಜೊತೆಗೆ ಭಾರತದ ಸ್ವದೇಶಿ ಮಿಲಿಟರಿ ತಂತ್ರಜ್ಞಾನ ಸಾಮರ್ಥ್ಯವೂ ಅನಾವರಣಗೊಂಡಿದೆ.
ಸು-30 ಎಂಕೆ ಐ ವಿಮಾನದಿಂದ ಉಡಾವಣೆ
ಭಾರತೀಯ ಸೇನೆಗೆ “ಗೌರವ್” ನ ಮೊದಲ ಯಶಸ್ವಿ ಪರೀಕ್ಷಾ ಹಾರಾಟವನ್ನು ಆಗಸ್ಟ್ 13.2024ರಂದು ಒಡಿಶಾ ಕರಾವಳಿಯಲ್ಲಿ ನಡೆಸಲಾಯಿತು. ಐಎಎಫ್ ಸುಕನ್ 30 ಎಂಕೆ ವಿಮಾನದಿಂದ ಉಡಾವಣೆ ಮಾಡಲಾದ ಬಾಂಬ್, ತನ್ನ ಗುರಿಯನ್ನು ನಿಖರವಾಗಿ ಭೇದಿಸುವ ಮೂಲಕ, ಭಾರತದ ದೇಶಿಯ ಮಿಲಿಟರಿ ತಂತ್ರಜ್ಞಾನದ ಸಾಮರ್ಥ್ಯ ಪ್ರದರ್ಶಿಸಿತು.. ಇದು ನೂರು ಕಿಲೋಮೀಟರ್ಗಿಂತ ಹೆಚ್ಚು ದೂರದಲ್ಲಿರುವ ಗುರಿಯನ್ನು ನಿಖರವಾಗಿ ಭೇದಿಸಬಲ್ಲದು.
ಹೈಬ್ರಿಡ್ ಸಂಚಾರ ವ್ಯವಸ್ಥೆ
ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಸೇರಿದಂತೆ ಪಾಲುದಾರರೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಭಿವೃದ್ದಿ ಪಡಿಸಿದ ಈ ಸ್ಟ್ಯಾಂಡ್ ಆಫ್ ಗ್ಲೈಡ್ ಬಾಂಬ್ ಭಾರತೀಯ ವಾಯುಪಡೆಯ ಬಲ ಹೆಚ್ಚಿಸಿದೆ. ಜಿಪಿಎಸ್ ದತ್ತಾಂಶದೊಂದಿಗೆ ಜಡ ಸಂಚಾರ ವ್ಯವಸ್ಥೆಗಳ ಸಂಯೋಜನೆಯಾದ ಹೈಬ್ರಿಡ್ ಸಂಚರಣೆ ವ್ಯವಸ್ಥೆಯನ್ನು ಬಳಸಿಕೊಂಡು, ಬಾಂಬ್ ತನ್ನ ಗುರಿಯತ್ತ ನಿಖರವಾಗಿ ಚಲಿಸುವ ಸಾಮರ್ಥ್ಯ ಪ್ರದರ್ಶಿಸಿತು.
ವೈಮಾನಿಕ ದಾಳಿಗೆ ಪ್ರತ್ಯುತ್ತರ ನೀಡಲು ಗೌರವ್ ಬಳಕೆ
ಒಡಿಶಾ ಕರಾವಳಿಯ ಸಂಯೋಜಿತ ಪರೀಕ್ಷಾ ಪ್ರದೇಶದಲ್ಲಿ ಹಿರಿಯ ಡಿಆರ್‌ಡಿಓ ವಿಜ್ಞಾನಿಗಳ ಮೇಲ್ವಿಚಾರಣೆಯಲ್ಲಿ ನಡೆದ ಪರೀಕ್ಷೆಯಲ್ಲಿ ಟೆಲಿಮೆಂಟ್ರಿ ಮತ್ತು ಎಲೆಕ್ಟ್ರೋಆಪ್ಟಿಕಲ್ ಟ್ರ್ಯಾಕಿಂಗ್ ವ್ಯವಸ್ಥೆಗಳ ಮೂಲಕ ಹಾರಾಟದ ದತ್ತಾಂಶವನ್ನು ದಾಖಲಿಸಿಕೊಳ್ಳಲಾಯಿತು. ಬಾಂಬ್ 1 ಟನ್ ತೂಗುತ್ತದೆ ಮತ್ತು ಅನೇಕ ರೀತಿಯ ಸಿಡಿತಲೆಗಳಿಗೆ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. 2019ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಕೋಟ್ ಒಳಗಿನ ಭಯೋತ್ಪಾದಕ ಶಿಬಿರದ ಮೇಲೆ ವೈಮಾನಿಕ ದಾಳಿಯಂತಹ ಕಾರ್ಯಚರಣೆಯಲ್ಲಿ ಗೌರವ್ ಅನ್ನು ಬಳಸಬಹುದು. ಆ ಸಮಯದಲ್ಲಿ ಐಎಎಫ್ ಇಸ್ರೇಲಿ ಸ್ನೈಸ್ ಗ್ಲೈಡ್ ಬಾಂಬ್ ಗಳನ್ನು ಭಾರತ ಬಳಸಿತ್ತು. ಹೊಸ ಭಾರತೀಯ ಗ್ಲೈಡ್ ಬಾಂಬ್ ಕಠಿಣ ರಚನೆಗಳನ್ನೂ ಭೇದಿಸುವ ಸಾಮರ್ಥ್ಯ ಹೊಂದಿದೆ.
ಸಾರ್ವಜನಿಕ, ಖಾಸಗಿ ರಕ್ಷಣಾ ಕ್ಷೇತ್ರಗಳ ಸಹಭಾಗಿತ್ವ
ಅಭಿವೃದ್ಧಿ ಪ್ರಕ್ರಿಯೆಯ ಸಮಯದಲ್ಲಿ ಅದಾನಿ ಡಿಫೆನ್ಸ್ ಮತ್ತು ಭಾರತ್ ಫೋರ್ಜ್ ನಂತಹ ಖಾಸಗಿ ವಲಯದ ದೈತ್ಯ ಸಂಸ್ಥೆಗಳೊಂದಿಗಿನ ಸಹಯೋಗವು ಭಾರತದ ಸಾರ್ವಜನಿಕ ಮತ್ತು ಖಾಸಗಿ ರಕ್ಷಣಾ ಕ್ಷೇತ್ರಗಳ ನಡುವೆ ಬೆಳೆಯುತ್ತಿರುವ ಸಂಯೋಜನೆಗೆ ಸಾಕ್ಷಿಯಾಯಿತು. ಇದು ದೇಶದ ರಕ್ಷಣಾ ಮಹತ್ವಕಾಂಕ್ಷೆಗಳನ್ನು ಉಳಿಸಿಕೊಳ್ಳಲು ಸಹಾಯಕವಾಗಲಿದೆ. ಇದೇ ವೇಳೆ ರಕ್ಷಣಾ ಉತ್ಪನ್ನಗಳಲ್ಲಿ ಆತ್ಮನಿರ್ಭರತೆ ಸಾಧಿಸುವ ದೇಶದ ಉದ್ದೇಶಕ್ಕೆ ಮತ್ತಷ್ಟು ಉತ್ತೇಜನ ದೊರಕಿದಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಫ್ರೀ-ಫಾಲ್ ಬಾಂಬ್ ಗಳಿಗಿಂತ “ಗೌರವ್” ಹೆಚ್ಚು ಪರಿಣಾಮಕಾರಿ
ಗೌರವ್, ಉಪಗ್ರಹ ಆಧಾರಿತ ಸ್ಥಾನೀಕರಣ ವ್ಯವಸ್ಥೆ (ಜಿಪಿಎಸ್)ಯನ್ನು ಬಳಸಿ ಮಾರ್ಗದರ್ಶನ ವ್ಯವಸ್ಥೆಯ ಮೂಲಕ ಜಡತ್ವ ಸಂಚಾರ ವ್ಯವಸ್ಥೆ (ಐಎನ್ಎಸ್) ಅನ್ನು ಬಳಸಿಕೊಳ್ಳುತ್ತದೆ. ಇದು ವ್ಯವಸ್ಥೆಯನ್ನು ಹೆಚ್ಚು ನಿಖರವಾಗಿಸುತ್ತದೆ. ಫ್ರೀ ಫಾಲ್ ಬಾಂಬ್ ಗಳಿಗಿಂತ ಭಿನ್ನವಾಗಿ, ಗೌರವ್ ಗ್ಲೈಡ್ ಬಾಂಬ್ ಗಳು ಅವುಗಳ ಮೇಲ್ಮೈಯಲ್ಲಿ ರೆಕ್ಕೆಗಳನ್ನು ಹೊಂದಿರುತ್ತವೆ. ಇದು ಬಾಂಬನ್ನು ಚಲಿಸಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಅಮೇರಿಕನ್ ಜಾಯಿಂಟ್ ಡೈರೆಕ್ಟ್ ಅಟ್ಯಾಕ್ ಮುನಿಷನ್ (ಜೆಡಿಎಮ್) ತಯಾರಿಸಿದ ಜಿಬಿಯು 31/32 ಅಥವಾ ಡಿ.ಆರ್.ಡಿ.ಓ.ಪಿ ಅಭಿವೃದ್ಧಿಪಡಿಸಿದ ಹೈಸ್ಪೀಡ್ ಲೋಡ್ರ್ಯಾಗ್ (ಹೆಚ್‌ಎಸ್‌ಎಲ್‌ಡಿ) ಬಾಂಬ್ ಗಳಂತಹ ಫ್ರೀಫಾಲ್ ಬಾಂಬ್ ಗಳು ಎತ್ತರದಿಂದ ಉಡಾಯಿಸಿದಾಗ, 30 ಕಿಲೋಮೀಟರ್ ನಷ್ಟು ಗರಿಷ್ಠ ವ್ಯಾಪ್ತಿಯನ್ನು ಹೊಂದಿರುತ್ತದೆ. ಆದರೆ ಗೌರವ್ 100ಕೀ.ಮೀ ವ್ಯಾಪ್ತಿಯ ಗುರಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಗ್ಲೋಬಲ್ ಡೇಟಾದ ಡಿ ಗ್ಲೋಬಲ್ ಮಿಸ್ಟೈಲ್ ಅಂಡ್ ಮಿಸೈಲ್ ಡಿಫೆನ್ಸ್ ಸಿಸ್ಟಮ್ ಮಾರ್ಕೆಟ್ 2023-2033 ವರದಿಯ ಪ್ರಕಾರ, ಡಿ.ಆರ್.ಡಿ.ಒ ತನ್ನ ಸ್ಥಳಿಯ ಒಪ್ಪಂದಗಳಾದ ಪ್ರಳಯ್, ಅಗ್ನಿ, ಅಸ್ತ್ರ ಎಮ್ ಕೆ, ವಿ ಎಸ್ ಹೆಚ್ ಓ ಆರ್ ಎ ಡಿ ಮತ್ತು ಭಾರತೀಯ ಸೇನೆ ಜೊತೆಗಿನ ಪ್ರಾಜೆಕ್ಟ್ ವಿಷ್ಣುವಿನಿಂದಾಗಿ 14.8 ಬಿಲಿಯನ್ ಡಾಲರ್ ಮೌಲ್ಯದ ವ್ಯವಹಾರವನ್ನು ಗಳಿಸುವ ನಿರೀಕ್ಷೆ ಇದೆ. ಗೌರವನಂತಹ ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಸ್ವಾಯತ್ತತೆಯನ್ನು ಬಲಪಡಿಸುವ ಗುರಿ ಹೊಂದಿದೆ. ಜೊತೆಗೆ ತನ್ನ ಶಶಸ್ತ್ರ ಪಡೆಗಳ ಸಾಮರ್ಥ್ಯಗಳನ್ನು ಹೆಚ್ಚಿಸುವ ಸ್ಪಷ್ಟ ಉದ್ದೇಶವನ್ನು ಸೂಚಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಡಿ ಆರ್ ಡಿ ಓ ಅಧ್ಯಕ್ಷ ಸಮೀರ್ ವಿ.ಕಾಮತ್ ಅವರು ಗೌರವ್ ಯಶಸ್ವಿ ಪರೀಕ್ಷೆಯನ್ನು ಭಾರತದ ಸ್ಥಳೀಯ ರಕ್ಷಣಾ ಸಾಮರ್ಥದ ಪ್ರಮುಖ ಮೈಲಿಗಲ್ಲು ಎಂದು ಶ್ಲಾಘಿಸಿದ್ದಾರೆ. ಇದು ವಿದೇಶಿ ಮಿಲಿಟರಿ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.