ಪ್ಲಾಸ್ಟಿಕ್ ಮಾಲಿನ್ಯ ಶ್ರೇಯಾಂಕದಲ್ಲಿ ಈಗ ಭಾರತವೇ ಅಗ್ರ ಸ್ಥಾನದಲ್ಲಿದೆ. ಭಾರತವು ವಾರ್ಷಿಕವಾಗಿ 9.3 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಡುಗಡೆ ಮಾಡುತ್ತಿದೆ ಎಂದು ಹೊಸ ಅಧ್ಯಯನ ಒಂದು ತಿಳಿಸಿದೆ. ಇದು ಜಾಗತಿಕವಾಗಿ ಪ್ಲಾಸ್ಟಿಕ್ ಹೊರಸುವಿಕೆಯ ಸುಮಾರು 5ನೇ ಒಂದು ಭಾಗದಷ್ಟಿದೆ.
ಭಾರತದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವು 605 ತಾಜ್ಮಹಲ್ ಗೆ ಸಮನಾದ ಪ್ರದೇಶಗಳಲ್ಲಿ ತುಂಬಾಬಹುದಾದಷ್ಟು ಇದೆ. ಅಷ್ಟೇ ಅಲ್ಲ ಅನಂತರದ ಸ್ಥಾನಗಳಲ್ಲಿರುವ ನಾಲ್ಕು ದೇಶಗಳ ಒಟ್ಟಾರೆ ತ್ಯಾಜ್ಯದ ಮೂರು ಪಟ್ಟು ಭಾರತ ಒಂದರಲ್ಲೇ ಉತ್ಪತ್ತಿಯಾಗುತ್ತಿದೆ ಎಂದು ವರದಿ ಹೇಳಿದೆ. ದೇಶದ ಅಧಿಕೃತ ತ್ಯಾಜ್ಯ ಉತ್ಪಾದನಾ ಪ್ರಮಾಣವು ದಿನಕ್ಕೆ ತಲಾ ಸುಮಾರು 0.12 ಕೆಜಿ ಎಷ್ಟು ಎಂದು ಅಂದಾಜಿಸಲಾಗಿದೆ ಎಂದು ನೇಚರ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವು ಹೇಳುತ್ತಿದೆ.
ನೈಜೀರಿಯಾ 3.5 ಮೆಟ್ರಿಕ್ ಟನ್ ಪ್ಲ್ಯಾಸ್ಟಿಕ್ ಹೊರಸುವಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಇಂಡೋನೇಷ್ಯಾ 3.4 ಮೆಟ್ರಿಕ್ ಟನ್ ಹೊರಸೂಸುವಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಚೀನಾ ಈಗ ನಾಲ್ಕನೇ ಸ್ಥಾನದಲ್ಲಿದೆ.
ವಿಶ್ವದಲ್ಲೇ ಶ್ರೇಷ್ಠ ಸಂಸ್ಕೃತಿಯುಳ್ಳ ಘನರಾಷ್ಟ್ರವೆಂಬ ಖ್ಯಾತಿ ಪಡೆದಿರುವ ಭಾರತವು ಪ್ಲಾಸ್ಟಿಕ್ ಮಾಲಿನ್ಯದಲ್ಲಿ ಮೊದಲ ಸ್ಥಾನ ಪಡೆದಿರುವುದು ಬೇಸರದ ಸಂಗತಿ. ನೇಚರ್ ಜರ್ನಲ್ ಪ್ರಕಟಿಸಿರುವ ಮೇಲಿನ ವರದಿಯು ಭಾರತದ ಭವಿಷ್ಯದ ಆರೋಗ್ಯ ಸ್ಥಿತಿಯನ್ನು ಊಹಿಸಿದರೆ ಭಯ ಹುಟ್ಟಿಸುತ್ತದೆ. ಪ್ಲಾಸ್ಟಿಕ್ ಎಂಬುದು ಪ್ರಕೃತಿಯಲ್ಲಿ ಕರಗದೆ ಶತಶತಮಾನಗಳವರೆಗೂ ಮಣ್ಣಿನಲ್ಲಿ ಮಾರಕವಾಗಿಯೇ ಉಳಿಯುವ ವಸ್ತುವಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡಲೇಬಾರದು. ಈ ಪ್ಲಾಸ್ಟಿಕ್
ಪ್ರಕೃತಿಯ ಸಮತೋಲನವನ್ನೇ ಏರುಪೇರು ಮಾಡುವುದಲ್ಲದೆ ಅನೇಕ ಸಮಸ್ಯೆಗಳಿಗೆ ಮುನ್ನುಡಿ ಬರೆಯುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಪ್ರಕೃತಿ ಮತ್ತು ಮನುಷ್ಯನ ಆರೋಗ್ಯವನ್ನು ಕಾಪಾಡಲೇಬೇಕು.