ಕೇಂದ್ರ ಸರಕಾರದ ಅತಿ ವಿಶಿಷ್ಟವಾದ ಯೋಜನೆಗಳಲ್ಲಿ ಒಂದಾಗಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಎಪ್ಪತ್ತು ವರ್ಷ ತುಂಬಿದ ದೇಶದ ಎಲ್ಲಾ ನಾಗರಿಕರಿಗೂ ವಿಸ್ತರಣೆ ಮಾಡಿ ಕೇಂದ್ರ ಸರಕಾರವು ಆದೇಶವನ್ನು ಹೊರಡಿಸಿದೆ.
ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಭಾರತದ 4.5 ಕುಟುಂಬಗಳ ಆರು ಕೋಟಿ ವೃದ್ಧರಿಗೆ ಅನುಕೂಲವಾಗಲಿದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ) ಅನ್ನೋ ಎಪ್ಪತ್ತು ವರ್ಷ ತುಂಬಿದ ಎಲ್ಲಾ ನಾಗರಿಕರಿಗೆ ವಿಸ್ತರಣೆ ಮಾಡಿದ್ದು ಅರ್ಹ ಹಿರಿಯ ನಾಗರಿಕರಿಗೆ ಈ ಯೋಜನೆ ಅಡಿ ಹೊಸದಾಗಿ ವಿಶಿಷ್ಟ ಕಾರ್ಡ್ ನೀಡಲಾಗುತ್ತದೆ.
ಈಗಾಗಲೇ ಎಬಿ ಪಿಎಂ -ಜೆಎವೈ ಅಡಿಯಲ್ಲಿ ಬರುವ ಕುಟುಂಬಗಳಿಗೆ ಸೇರಿದ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ತಮಗಾಗಿ ವರ್ಷಕ್ಕೆ 5 ಲಕ್ಷಗಳವರೆಗೆ ಹೆಚ್ಚುವರಿ ಟಾಪ್-ಅಪ್ ರಕ್ಷಣೆಯನ್ನು ಪಡೆಯುತ್ತಾರೆ.
ಅಷ್ಟೇ ಅಲ್ಲದೆ, ಈಗಾಗಲೇ ಕೇಂದ್ರ ಸರ್ಕಾರದ ವಿವಿಧ ವಿಮಾ ಯೋಜನೆಗಳಲ್ಲಿ ಇರುವಂತವರು ಹಾಲಿ ಯೋಜನೆಗಳನ್ನೇ ಮುಂದುವರಿಸಬಹುದು ಅಥವಾ ಆಯುಷ್ಮಾನ್ ಭಾರತ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳು ಅಥವಾ ನೌಕರರ ರಾಜ್ಯ ವಿಮಾ ಯೋಜನೆಯಲ್ಲಿ ಬರುವ 70 ವರ್ಷ ಮೀರಿದ ವೃದ್ಧರು ಎಬಿ ಪಿಎಂ-ಜೆಎವೈ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಂದಹಾಗೆ, ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2024ರ ಏಪ್ರಿಲ್ ನಲ್ಲಿ ಘೋಷಣೆ ಮಾಡಿದ್ದರು.
ಪ್ಯಾರಾಲಿಂಪಿಕ್ಸ್ 2024ರಲ್ಲಿ 29 ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ಭಾರತ