ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯ ಕೋಟಿ ನಗರ ಕೈರಂಗಳದಲ್ಲಿ ಶಿಕ್ಷಣ, ಉದ್ಯೋಗ, ಕೃಷಿಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ರಾಜ್ಯಮಟ್ಟದ ಶಿಕ್ಷಣ ಉದ್ಯೋಗ ಕೃಷಿ ಮೇಳ-2024 ಡಿ.6,7,8 ರಂದು ನಡೆಯಲಿದೆ. ಉದ್ಯೋಗಾಕಾಂಕ್ಷಿಗಳು, ಕೃಷಿಕರು, ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಟಿ.ಜಿ.ರಾಜಾರಾಮ್ ಭಟ್ ತಿಳಿಸಿದ್ದಾರೆ.
ಒಟ್ಟು 37 ಕಾಲೇಜುಗಳನ್ನು ಒಟ್ಟಾಗಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳ ಕೋರ್ಸುಗಳ ಪರಿಚಯದ ಶಿಕ್ಷಣ ಮೇಳ, ಪದವೀಧರ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಕಂಪೆನಿ ಗಳಿಗೆ ಆಹ್ವಾನಿಸಲಾಗಿದ್ದು, ಜೊತೆಗೆ ವಿಪ್ರೋ, ಲಿನೆವೋ, ಇನ್ಫೋಸಿಸ್ ನಂತಹ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಬಂತು ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್, ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!
ಒಟ್ಟು 306 ಮಳಿಗೆಗಳು ಕೃಷಿ ಮೇಳದಲ್ಲಿ ಭಾಗಿಯಾಗಲಿದೆ.
ಕೃಷಿಕನೇ ದೇಶದ ಅನ್ನತಾದ, ಕೃಷಿ ಚಟುವಟಿಕೆಗಳಿಗೆ ಪೂರಕವಾಗಬಲ್ಲಂತಹ ಯಂತ್ರೋಪಕರಣಗಳು, ಸಾವಯವ ಬಿತ್ತನೆ ಬೀಜಗಳು, ರಸಗೊಬ್ಬರಗಳು, ನಾಟಿಗೆ ಯೋಗ್ಯವಾದ ನರ್ಸರಿಗಳು ಹಾಗೂ ರಾಜ್ಯದ ವಿವಿಧ ಕಡೆ ಗಳಿಂದ ನರ್ಸರಿಯವರು ಭಾಗವಹಿಸುವ ಮೂಲಕ ನರ್ಸರಿ ಸಾಮ್ರಾಜ್ಯವನ್ನೇ ನಿರ್ಮಿಸುತ್ತಾರೆ. ಇದರ ನಡುವೆ ಆಟಗಳ ಪ್ರಪಂಚ, ಆಕರ್ಷಕ ದೋಣಿ ವಿಹಾರ, ಆಹಾರ ವಸ್ತುಗಳು, ತಿಂಡಿ ತಿನುಸುಗಳ ಮಳಿಗೆಗಳು ಸೇರಿದಂತೆ ಒಟ್ಟು 306 ಮಳಿಗೆಗಳು ಕೃಷಿ ಮೇಳದಲ್ಲಿ ಭಾಗಿಯಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯಕ್ಷಗಾನ, ಗಂಗಾವತಿ ಪ್ರಾಣೇಶ್ ಅವರ ಹಾಸ್ಯ, ಶಿವಮೊಗ್ಗದ ತಂಡದಿಂದ ನೃತ್ಯ ಹೀಗೆ ರಾಜ್ಯಮಟ್ಟದ ತಂಡಗಳು ಮೂರು ದಿನಗಳ ಕಾಲ ಯಶಸ್ವಿ ಕಾರ್ಯಕ್ರಮಗಳನ್ನು ನೀಡಲಿದೆ.
ಮೇಳದ ಪ್ರಯೋಜನವನ್ನು ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾವಂತ ನಿರುದ್ಯೋಗಿಗಳು, ಉದ್ಯೋಗಪತಿಗಳು, ಕೃಷಿಕರು ಪಡೆದುಕೊಳ್ಳ ಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಟಿ.ಜಿ.ರಾಜಾರಾಮ್ ಭಟ್ ತಿಳಿಸಿದ್ದಾರೆ.