ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಡಿ.10 ರಿಂದ 15ರವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿದೆ. ಈ ಬಾರಿ 30ನೇ ವರ್ಷದ ಆಳ್ವಾಸ್ ವಿರಾಸತ್ ಆಗಿದ್ದು,ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ನ್ನು ಡಿಸಂಬರ್ 10 ರಂದು ಸಂಜೆ 5.30 ರಿಂದ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ ಶ್ರೀಪತಿ ಭಟ್ ಬಯಲುರಂಗ ಮಂದಿರ ವೇದಿಕೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿದ್ದಾರೆ.ಈ ಸಂದರ್ಭದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ 6:35 ರಿಂದ 8:30ರವರೆಗೆ 100 ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾತಂಡಗಳಿಂದ 3000ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ:ಡಿ.6ರಿಂದ ಕೈರಂಗಳದಲ್ಲಿ ರಾಜ್ಯಮಟ್ಟದ ಶಿಕ್ಷಣ ಉದ್ಯೋಗ ಕೃಷಿ ಮೇಳ – 2024
ಆಳ್ವಾಸ್ ವಿರಾಸತ್ ವಿಶೇಷತೆಗಳು :
- ಕೃಷಿ ಮೇಳ
- ಆಹಾರ ಮೇಳ
- ಫಲಪುಷ್ಪ ಮೇಳ
- ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ
- ಚಿತ್ರಕಲಾ ಮೇಳ
- ಕಲಾಕೃತಿ ಪ್ರದರ್ಶನ
- ಛಾಯಾಚಿತ್ರಗಳ ಪ್ರದರ್ಶನ
- ಮಾರಾಟ ಮಳಿಗೆಗಳ ಮಹಾಮೇಳ ದಿನವಿಡೀ ತೆರೆದಿರುತ್ತದೆ.
ಡಿಸಂಬರ್ 11 ರಂದು ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರು “ಅಳ್ವಾಸ್ ವಿರಾಸತ್ 2024 ಪ್ರಶಸ್ತಿ” ಸ್ವೀಕರಿಸಲಿದ್ದಾರೆ. ಸಂಜೆ 07:45 ರಿಂದ ಹಿಂದೂಸ್ಥಾನಿ ಗಾಯನ ಕಾರ್ಯಕ್ರಮ ನಡೆಯಲಿದೆ. ಹಾಗೂ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ನಡೆಯಲಿದೆ. ಪ್ರತಿದಿನ ಹಲವು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು , ಪ್ರತಿದಿನ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.
ಈಗಾಗಲೇ ಡಾ.ಮೋಹನ್ ಆಳ್ವ ಅವರ ನೇತೃತ್ವದಲ್ಲಿ ಸಿಧ್ಧತೆ ನಡೆಯುತ್ತಿದ್ದು, ಲಕ್ಷ ಸಂಖ್ಯೆಯಲ್ಲಿ ಜನ ಬರುವ ನೀರಿಕ್ಷೆ ಇದೆ. ದೇಶದಾದ್ಯಂತ ಮಾನ್ಯತೆ ಪಡೆದ ಹಲವು ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಪ್ರತಿದಿನವೂ ಮಾರಾಟ ಮೇಳಗಳು ತೆರೆದಿರುತ್ತದೆ ಆ ಮೂಲಕ ಜನರಿಗೆ ವಸ್ತುಗಳನ್ನು ಖರೀದಿಸುವ ಅವಕಾಶವಿದೆ ಈ ಬಾರಿಯ ಆಳ್ವಾಸ್ ವಿರಸತ್ ಸಾಕಷ್ಟು ಕುತೂಹಲ ಸೃಷ್ಟಿಸಿದೆ.
ಕಾರ್ಯಕ್ರಮಗಳ ವಿವರ: