ಪುತ್ತೂರಿನಲ್ಲಿ ಸುಮಾರು ವರ್ಷಗಳಿಂದ ಪುಸ್ತಕ ಎಂದರೆ ಮೊದಲು ನೆನಪಾಗುವುದು ಪ್ರಕಾಶ್ ಕೊಡೆಂಕಿರಿ..ಗ್ರಾಮೀಣ ಪ್ರದೇಶದಲ್ಲಿ ವಿವಿಧ ವೃತ್ತಿಯವರನ್ನೂ ಒಳಗೊಂಡು ಮನೆಮನೆಗೂ ಪುಸ್ತಕಗಳನ್ನು ತಲಪಿಸುವ ಕಾಯಕದಲ್ಲಿ ತೊಡಗಿಕೊಂಡಿರುವ ಪುತ್ತೂರಿನ ಸಾಹಿತ್ಯ ಪರಿಚಾರಕ-ಪ್ರಕಾಶಕರು ಶ್ರೀ ಪ್ರಕಾಶ ಕೊಡೆಂಕಿರಿ.
ಇದನ್ನೂ ಓದಿ:ಡಿ.6ರಿಂದ ಕೈರಂಗಳದಲ್ಲಿ ರಾಜ್ಯಮಟ್ಟದ ಶಿಕ್ಷಣ ಉದ್ಯೋಗ ಕೃಷಿ ಮೇಳ – 2024
ಈ ಬಾರಿಯ ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನ ವತಿಯಿಂದ ನಡೆಯುತ್ತಿರುವ ಪುಸ್ತಕ ಹಬ್ಬದಲ್ಲಿ “ಪುಸ್ತಕ ಹಬ್ಬದ ಗೌರವ” ಪ್ರಕಾಶ್ ಕೊಡಂಕಿರಿ ಅವರಿಗೆ ಸಿಕ್ಕಿರುವುದು ನಿಜಕ್ಕೂ ಶ್ಲಾಘನೀಯ..ಪುತ್ತೂರಿಗೆ ಹೆಮ್ಮೆಯ ವಿಚಾರ..ಅವರ ಪುಸ್ತಕ ಪ್ರೀತಿ ಎಷ್ಟು ಎಂದರೆ ಒಂದು ಕಾಲದಲ್ಲಿ ತಾವೇ ಸ್ವತ: ಪುಸ್ತಕಗಳನ್ನು ಹೊತ್ತುಕೊಂಡು ಸಾಗುತ್ತ ಕನ್ನಡಾಂಬೆಯ ಸೇವೆ ಮಾಡಿದ ಅಪರೂಪದ ವ್ಯಕ್ತಿತ್ವ..
ನಮ್ಮ ಪುತ್ತೂರಿನ ಹೆಮ್ಮೆಯ ಪುಸ್ತಕ ಪರಿಚಾರಕರು
ಅವರ ಪ್ರೀತಿಯ ಮಾತುಗಳು ಜೊತೆಗೆ ಪ್ರತಿಯೊಂದು ಪುಸ್ತಕದ ಕುರಿತಾಗಿ ಇರುವ ಜ್ಞಾನ ಅದನ್ನು ಎಲ್ಲರಿಗೂ ವಿವರಿಸಿ ಹೇಳುವ ರೀತಿ ಅಧ್ಬುತವಾದದ್ದು, ಎಷ್ಟೋ ಬಾರಿ ಹೇಳಿದ್ದರು ನಡೆಸಲು ಕಷ್ಟವಾಗುತ್ತಿದೆ ಎಂದು ಆದರೂ ಛಲ ಬಿಡದೆ ಎಲ್ಲ ಮೇಳಗಳಲ್ಲಿ ಮಾರಾಟ ಮಳಿಗೆಗಳನ್ನು ಹಾಕಿ ಸಾಕಷ್ಟು ರೀತಿಯಲ್ಲಿ ಜನರಿಗೆ ಪುಸ್ತಕವನ್ನು ತಲುಪಿಸುವ ಕಾರ್ಯ ಮಾಡುತ್ತಿರುವ ನಮ್ಮ ಪುತ್ತೂರಿನ ಹೆಮ್ಮೆಯ ಪುಸ್ತಕ ಪರಿಚಾರಕರು
ಹಲವು ಯುವ ಲೇಖಕರ, ಹಿರಿಯ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ ಇಂತಹ ವ್ಯಕ್ತಿಗಳಿಗೆ ಸಲ್ಲಬೇಕಾದ ಗೌರವ ಎಂದರೆ ತಪ್ಪಲ್ಲ…ಅವರ ತಾಯಿ ಸರಸ್ವತಿಯ ಸೇವೆ ಎಷ್ಟೇ ವರ್ಷವಾದರೂ ಬಿಡದೆ ಸಾಗುತ್ತಿರುವ ಪುಸ್ತಕ ಪಯಣ ಎಲ್ಲವೂ ಪ್ರೇರಣೆ..