ಉಡುಪಿಗೆ ಹೋದಾಗ ಭೇಟಿ ನೀಡಲೇಬೇಕಾದ ಜಾಗ ಅದು “ಸಮರ್ಪಣಾ” ಎಂಬ ದೇಸಿ ಅಂಗಡಿ..ಹೌದು ಹೊರಗಿನಿಂದ ನೋಡುವಾಗಲೇ ಹಳೆಯ ಮನೆಯಂತೆ ಕಾಣುವ ಸುಂದರವಾದ ಹಂಚಿನ ಕಟ್ಟಡ ನಿಜಕ್ಕೂ ಬಹಳ ಆಕರ್ಷಣೀಯ…ಒಳಗೆ ಹೋದಾಗ ಅಲ್ಲೊಂದು ವೈವಿಧ್ಯಮಯ ಕಲೆ, ಸಂಸ್ಕೃತಿಯ ಕೈಯಲ್ಲೇ ತಯಾರಿಸಿದ ಉತ್ಪನ್ನಗಳಿರುವ ಪ್ರಪಂಚ ತೆರೆದುಕೊಳ್ಳುತ್ತದೆ.
ಕಡೆಗೋಲು, ಚೀಲಗಳು, ಬುಟ್ಟಿಗಳು ವಿವಿಧ ಕಲಾಕೃತಿಗಳ ವೈವಿಧ್ಯ
ಇಲ್ಲಿ ಕಲಾವಿದರು ತಯಾರಿಸಿದ ಕಡೆಗೋಲು, ಚೀಲಗಳು, ಬುಟ್ಟಿಗಳು ಇನ್ನೂ ವಿವಿಧ ರೀತಿಯ ಕಲಾಕೃತಿಗಳನ್ನು ನೋಡಬಹುದು..ನೇರವಾಗಿ ಕಲಾವಿದರು ತಯಾರಿಸಿ ತಂದು ಕೊಡುತ್ತಾರೆ. ಯಾರೇ ಏನೇ ತಯಾರಿಸಿದ ವಸ್ತು ತಂದುಕೊಟ್ಟರು ಮಾರಾಟ ಮಾಡಲು ಅವಕಾಶ ನೀಡುವುದು ಬಹಳ ವಿಶೇಷ…ತುಪ್ಪ, ಎಣ್ಣೆ, ಧಾನ್ಯಗಳು,ಹಣ್ಣುಗಳು ಹೀಗೆ ಇವೆಲ್ಲವೂ ನೇರ ರೈತರೇ ತಂದುಕೊಡುವುದರಿಂದ ಯಾವುದೇ ರಾಸಾಯನಿಕ ವಸ್ತುಗಳು ಇಲ್ಲಿಲ್ಲ..
ಇನ್ನೂ ಇಲ್ಲಿ ವಿಶೇಷವಾಗಿ ಉಡುಪಿ ಮೀಠಯಿ ಸೇರಿದಂತೆ ಹಲವು ಸಿಹಿ ತಿನಿಸುಗಳು ಸಕ್ಕರೆ ಬಳಸದೆ ನೈಸರ್ಗಿಕವಾಗಿ ಬೆಲ್ಲದ ಮೂಲಕ ಮಾಡಲಾಗುತ್ತದೆ. ಹಲ್ವಾ ಸೇರಿದಂತೆ ವಿವಿಧ ತಿನಿಸು ಅಲ್ಲೇ ತಯಾರಾಗುತ್ತದೆ..ನೈಸರ್ಗಿಕ ಆರೋಗ್ಯಕರ ರುಚಿಯಾದ ದೇಸಿ ತಿನಿಸುಗಳ ಜೊತೆಗೆ ದೇಸಿ ಉತ್ಪನ್ನಗಳಿರುವ ಅಪರೂಪದ ಅಂಗಡಿ
ಇದನ್ನೂ ಓದಿ: ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ
ಮತ್ತೊಂದು ಇಲ್ಲಿಯ ವಿಶೇಷ ಕಂಡದ್ದು, ಎರಡು ವಿದ್ಯಾರ್ಥಿಗಳು ತಮ್ಮ ಸ್ವಂತ ಉದ್ಯೋಗ ತೆರೆಯಲು ಕಲಿಯುವುದಕ್ಕೆ ಹೊನ್ನಾವರದಿಂದ ಬಂದಿದ್ದಾರೆ ಅಂತಹವರಿಗೆ ಪ್ರತಿಯೊಂದನ್ನು ಕಲಿಯಲು ಅವಕಾಶ ನೀಡಿರುವುದು ನಿಜಕ್ಕೂ ಶ್ಲಾಘನೀಯ…
ಇದನ್ನೂ ಓದಿ: ಬಂತು ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್, ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!
ಪರಿಶ್ರಮದಿಂದ ತಯಾರಿಸುವ ಕೈಗಳಿಗೆ ಪ್ರೋತ್ಸಾಹಿಸಲು ಮರೆಯದಿರಿ…
ಅದಮಾರು ಮಠದ ಕಿರಿಯ ಶ್ರೀಗಳ ಆಶಯದಂತೆ ಕಲಾವಿದರಾದ ಪುರುಷೋತ್ತಮ ಅಡ್ವೆ ಹಾಗೂ ಅವರ ತಂಡ ಹಾಗೇ ಮೊದಲು ಇಂಜನಿಯರ್ ಆಗಿದ್ದ ತಮ್ಮ ಆಸಕ್ತಿಯಲ್ಲಿ ಅಡುಗೆ ಕಲಿತು ಚೆಫ್ ಆಗಿ ಕೆಲಸ ಮಾಡಿ ಇದೀಗ ಸಮಾರ್ಪಣದಲ್ಲಿ ಮೆನೇಜರ್ ಆಗಿರುವ ಮನು ಅವರು ಸೇರಿ ಇದನ್ನು ಅಧ್ಬುತವಾಗಿ ಕಟ್ಟಿಕೊಟ್ಟು ಸ್ಥಳೀಯ ಕಲಾವಿದರಿಗೆ,ರೈತರಿಗೆ ಸಹಾಯವಾಗುವಂತೆ ಮಾಡಿದ್ದಾರೆ ನಿಜಕ್ಕೂ ಅವರ ಸಮಾರ್ಪಣ ಪ್ರಯತ್ನ ಪ್ರೇರಣೆ ನೀಡುವಂತದ್ದು, ಇಂತಹ ಕಾರ್ಯ ಶ್ಲಾಘನೀಯ..ಉಡುಪಿಗೆ ಹೋದಾಗ ಸಮಾರ್ಪಣ ಅಂಗಡಿಗೆ ಭೇಟಿ ನೀಡಿ ಏನಾದರೂ ಖರೀದಿಸಿ ಕಲಾವಿದರಿಗೆ ಪರಿಶ್ರಮದಿಂದ ತಯಾರಿಸುವ ಕೈಗಳಿಗೆ ಪ್ರೋತ್ಸಾಹಿಸಲು ಮರೆಯದಿರಿ…