ಆಲ್ಸ್ ಟಮ್ ಇಂಡಿಯಾವು ಭಾರತ ದೇಶಾದ್ಯಂತ ಓದುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಮತ್ತು ಕಾಲೇಜು ಶಿಕ್ಷಣವನ್ನು ತೊರೆಯದಂತೆ ತಡೆಯಲು, ಆರ್ಥಿಕ ಬೆಂಬಲವನ್ನು ಒದಗಿಸಲು ಈ ಶಿಷ್ಯವೇತನವನ್ನು ಒದಗಿಸುತ್ತಿದೆ.
ಅಲ್ಸ್ಟಮ್ ಇಂಡಿಯಾ ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳೇನು?
- ಸ್ಟೆಮ್ ಕೋರ್ಸ್ ಗಳಲ್ಲಿ ಯಾವುದೇ ವರ್ಷದಲ್ಲಿ ವೃತ್ತಿಪರ ಗ್ರಾಜುಯೇಷನ್ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
- ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ಆರು ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
- ವಿದ್ಯಾರ್ಥಿ ವೇತನವು ಚೆನ್ನೈ (ತಮಿಳುನಾಡು), ಕೊಯಮತ್ತೂರ್(ತಮಿಳುನಾಡು), ಕೋಲ್ಕತಾ(ಪಶ್ಚಿಮ ಬಂಗಾಳ), ಮಾಧೇಪುರ(ಬಿಹಾರ), ಶ್ರೀ ಸಿಟಿ(ಆಂಧ್ರಪ್ರದೇಶ), ವಡೋದರಾ(ಗುಜರಾತ್) ಪ್ರದೇಶದ ನಿವಾಸಿಗಳಾಗಿರುವ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ.
- 75,000ಗಳವರೆಗೆ ಒಂದು ಬಾರಿ ಮಾತ್ರ ವಿದ್ಯಾರ್ಥಿವೇತನ ಲಭ್ಯ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.09.2024 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.b4s.in/saka/AISDG7 ಜಾಲತಾಣವನ್ನು ಭೇಟಿ ನೀಡಬಹುದಾಗಿದೆ.