ಆಕರ್ಷಕ ಕಪ್ಪುಜುಟ್ಟಿನ ಕೆಂಪುಬಾಲದ ಪಿಕಳಾರ

Table of Content

ಅಂದು ಚುಮುಚುಮು ಚಳಿಯ ಉಲ್ಲಾಸಭರಿತ ವಾತಾವರಣ. ಆ ದಿನ ನಮ್ಮ ಪಪ್ಪಾಯ ಮರದಲ್ಲಿ ಕೆಂಪುಬಾಲದ ಪಿಕಳಾರ ಪಪ್ಪಾಯದ ಸವಿ ಉಣ್ಣುತ್ತಿತ್ತು. ಅದೇ ಸಮಯಕ್ಕೆ ಪಪ್ಪಾಯ ಮರಕ್ಕೆ ಮೂರು ಹಸಿರುಕುಟ್ರಗಳ ಪ್ರವೇಶವಾಗಿತ್ತು. ಇದನ್ನು ನೋಡುತ್ತಿದ್ದ ನನಗೆ “ಈಗ ಹಸಿರುಕುಟ್ರಗಳು ಪಿಕಳಾರವನ್ನು ಓಡಿಸುವುದು ಖಂಡಿತ” ಎಂಬ ಯೋಚನೆ ಬಂತು. ಈ ಯೋಚನೆ ಬರುವುದಕ್ಕೆ ನನ್ನ ಅನುಭವಗಳೇ ಕಾರಣ. ನಮ್ಮ ಪಪ್ಪಾಯ ಮರಕ್ಕೆ ಹಸಿರುಕುಟ್ರನೇ ಒಡೆಯ! ಆ ಪಪ್ಪಾಯ ಮರದಲ್ಲಿ ಹಣ್ಣಾಗಿದ್ದ ಪಪ್ಪಾಯಿ ಅದೊಂದೇ ಆಗಿತ್ತು. 

ಮಿಕ್ಕುಳಿದವುಗಳು ಕಾಯಿಗಳಾದ್ದರಿಂದ ನನ್ನ ಈ ಯೋಚನೆಗೆ ಮತ್ತಷ್ಟು ಇಂಬು ನೀಡಿದ್ದು. ಆದರೆ ನನ್ನ ಆಲೋಚನೆ ಬುಡಮೇಲಾಯಿತು. ಪಿಕಳಾರ ಹಕ್ಕಿ ಹಣ್ಣು ತಿನ್ನುವವರೆಗೆ ಪಕ್ಕದ ರೆಂಬೆಯಲ್ಲಿ ಕುಳಿತಿದ್ದ ಹಸಿರುಕುಟ್ರಗಳು ಅದು ಹಾರಿ ಹೋದೊಡನೆ ಬಂದು ಪಪ್ಪಾಯ ಹಣ್ಣನ್ನು ತಿನ್ನತೊಡಗಿದವು. ಈಗ ಆಶ್ಚರ್ಯಪಡುವ ಸರದಿ ನನ್ನದು! ಆಹಾರಕ್ಕಾಗಿ ಸಮರವೇರ್ಪಡುವ ಪ್ರಕೃತಿಯಲ್ಲಿ ಇಂತಹ ವಿದ್ಯಮಾನಗಳೂ ನಡೆಯುತ್ತವೆ. ಕೆಂಪುಬಾಲದ ಪಿಕಳಾರವೆಂದಾಗ ನನಗೆ ನೆನಪಾಗುವುದು ಇದೇ ಘಟನೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆ..

ಪಿಕಳಾರ ಹಕ್ಕಿಗಳ ಪ್ರಭೇದಲ್ಲೊಂದಾದ  ಕೆಂಪು ಬಾಲದ ಪಿಕಳಾರವನ್ನು ಆಂಗ್ಲಭಾಷೆಯಲ್ಲಿ Red Vented Bulbul ಎಂದು, ವೈಜ್ಞಾನಿಕವಾಗಿ Pycnonotus cafer ಎಂದು ಕರೆಯುತ್ತಾರೆ. ಆಯಾ ಪ್ರದೇಶಕ್ಕನುಗುಣವಾಗಿ ಈ ಹಕ್ಕಿಯ ಹೆಸರುಗಳು ಬದಲಾಗುತ್ತವೆ. ಪಿಗ್ಲಿ ಪಿಟ್ಟ ಎಂದು ತೆಲುಗಿನಲ್ಲಿ, ಕೊಂಡೈ ಕುರುವಿ ಎಂದು ತಮಿಳಿನಲ್ಲಿ, ನಟ್ಟು ಬುಲ್ಬುಲ್ ಎಂದು ಮಲಯಾಳಂ ಭಾಷೆಯಲ್ಲಿ – ಹೀಗೆ ಕೆಂಪು ಬಾಲದ ಪಿಕಳಾರದ ಪ್ರಾದೇಶಿಕ ಹೆಸರುಗಳ ಪಟ್ಟಿ ದೊಡ್ಡದಿದೆ.

ಬಾಲದ ಅಡಿಯಲ್ಲಿ ವಿಶಿಷ್ಟವಾದ ಕೆಂಪು ಬಣ್ಣದ ತೇಪೆ (Patch) ಇರುವುದು ಪಿಕಳಾರ ಹಕ್ಕಿಯ ಮತ್ತೊಂದು ವಿಶೇಷತೆ.

ಇದು ಗಾತ್ರದಲ್ಲಿ ಗೊರವಂಕ ಹಕ್ಕಿಯಷ್ಟು ದೊಡ್ಡದಾದ ಹಕ್ಕಿ. ಗಾಢ ಕಂದು ಬಣ್ಣದ (ಹೊಗೆಗಪ್ಪು) ಹಕ್ಕಿ ಇದಾಗಿದ್ದು ತಲೆಯ ಮೇಲೆ ಕಪ್ಪು ಜುಟ್ಟಿದೆ. ಈ ಪಕ್ಷಿಯ ಮುಖ್ಯ ಆಕರ್ಷಣೆ ಎಂದರೆ ಎದೆಯ ಮೇಲೆ ಹಾಗೂ ಬೆನ್ನಿನ ಮೇಲೆ ಮೀನಿನ ಹುರುಪೆಗಳ ರೀತಿ ಪುಕ್ಕಗಳ  ಜೋಡಣೆ ಇರುವುದು. ಇದರ ಬಾಲದ ತುದಿ ಬೆಳ್ಳಗಿದೆ. ರೆಂಬೆ-ಕೊಂಬೆಯಲ್ಲಿ ಕುಳಿತಿದ್ದಾಗ ಬೆಳ್ಳಗಿನ ಬಾಲದ ತುದಿ ಅಷ್ಟಾಗಿ ಪ್ರಕಾಶಮಾನವಾಗಿ ಕಾಣದು. ಆದರೆ ಹಾರುವಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಬಾಲದ ಅಡಿಯಲ್ಲಿ ವಿಶಿಷ್ಟವಾದ ಕೆಂಪು ಬಣ್ಣದ ತೇಪೆ (Patch) ಇರುವುದು ಇದರ ಮತ್ತೊಂದು ವಿಶೇಷತೆ.

ಕೆಂಪು ಬಾಲದ ಪಿಕಳಾರ ಹೆಚ್ಚಾಗಿ ಜೋಡಿಗಳಲ್ಲಿ ಅಥವಾ ಚದುರಿದ ಗುಂಪುಗಳಲ್ಲಿ ಕಾಣಸಿಗುವ ಪಕ್ಷಿ. ತೀರಾ ಅಪರೂಪಕ್ಕೆ ಪಿಕಳಾರ ಹಕ್ಕಿಯ ಮತ್ತೊಂದು ಪ್ರಭೇದ ಕೆಮ್ಮೀಸೆಯ ಪಿಕಳಾರಗಳ ಜೊತೆಗೂ ಕಾಣಸಿಗುವುದಿದೆ. ಒಂದೆರಡು ಬಾರಿ ಪಪ್ಪಾಯ ಮರಕ್ಕೆ ಈ ಎರಡು ಪಿಕಳಾರ ಪ್ರಭೇದಗಳು ಜೊತೆಗೆ ಬಂದದ್ದನ್ನು ನಾನು ಗಮನಿಸಿದ್ದೇನೆ. ಇವು ಕೆಮ್ಮೀಸೆಯ ಪಿಕಳಾರಗಳಂತೆ ಅತಿಯಾಗಿ ಗಲಾಟೆ ಮಾಡುವ ಪಕ್ಷಿಗಳಲ್ಲ. ಇವುಗಳು ‘ಕ್ರೀಮ್’ ಎನ್ನುವ ಮಧುರ ಧ್ವನಿಯಲ್ಲಿ ಕೂಗುತ್ತವೆ. ಹಾಗೆಯೇ ಬೇರೆ ಪಕ್ಷಿಗಳ ಧ್ವನಿಯನ್ನು ಅನುಕರಿಸುವುದರಲ್ಲಿಯೂ ಇವುಗಳು ಯಾವತ್ತೂ ಮುಂದು. ಹಾಗಾಗಿ ಕೆಲವೊಮ್ಮೆ ಪಕ್ಷಿವೀಕ್ಷಕರು ಮೋಸ ಹೋಗುವುದೂ ಇದೆ!

ಭಾರತದಲ್ಲಿ  ಸಾಧಾರಣ 17 ಪ್ರಧಾನ ಜಾತಿಯ ಪಿಕಳಾರ ಹಕ್ಕಿಗಳಿವೆ. ಕೆಂಪು ಬಾಲದ ಪಿಕಳಾರ ಹಾಗೂ ಕೆಮ್ಮೀಸೆಯ ಪಿಕಳಾರಗಳು ಹೆಚ್ಚು ಮಾನವಸ್ನೇಹಿ. ಕೆಂಪು ಬಾಲದ ಪಿಕಳಾರಗಳು ಸಾಮಾನ್ಯವಾಗಿ ತೋಟಗಳಲ್ಲಿ, ಉದ್ಯಾನವನಗಳಲ್ಲಿ, ಪಟ್ಟಣಗಳಲ್ಲಿ, ಹೀಗೆ ಮಾನವ ನಿರ್ಮಿತ ಪ್ರದೇಶಗಳಲ್ಲಿ ಮಾತ್ರವಲ್ಲದೆ ಕಾಡಿನಲ್ಲಿಯೂ ಜೀವಿಸುತ್ತವೆ. ಈ ಹಕ್ಕಿಯ ಗಾತ್ರ 20 ಸೆಂಟಿಮೀಟರ್. ಹಕ್ಕಿಯ ಗಾತ್ರ, ಬಣ್ಣಗಳ ಆಧಾರದಲ್ಲಿ ಇವುಗಳಲ್ಲಿ 7 ಉಪಜಾತಿಗಳಿವೆ. ಇವುಗಳು ಏಷ್ಯಾದ ಅನೇಕ ಭಾಗಗಳಲ್ಲಿ ಕಂಡುಬರುವ ಸಾಮಾನ್ಯ ಪಕ್ಷಿಗಳು. ಭಾರತದಾದ್ಯಂತ ಸೇರಿದಂತೆ ಶ್ರೀಲಂಕಾ, ಮಯನ್ಮಾರ್, ಬಾಂಗ್ಲಾದಲ್ಲಿ ಕಂಡುಬರುತ್ತವೆ. ಫಿಜಿ, ನ್ಯೂಜಿಲೆಂಡ್ ಮತ್ತು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿಯೂ ಇವುಗಳು ವಾಸಿಸುತ್ತವೆ. 

ಕೆಂಪು ಬಾಲದ ಪಿಕಳಾರ ಮಿಶ್ರಾಹಾರಿ.

ಹುಳುಹುಪ್ಪಟೆಗಳು, ಹಣ್ಣು-ಹಂಪಲುಗಳು, ತರಕಾರಿಗಳು, ಹೂವುಗಳ ಮಕರಂದ ಈ ಹಕ್ಕಿಯ ಆಹಾರ. ಹಣ್ಣಿನ ಮರಗಳು ಹಣ್ಣು ಬಿಟ್ಟಾಗ ಅದನ್ನು ತಿನ್ನುವುದಕ್ಕಾಗಿ ಇವುಗಳ ಗುಂಪೇ ದೌಡಾಯಿಸುತ್ತದೆ. ನಮ್ಮಲ್ಲಿ ಪಪ್ಪಾಯ ಹಣ್ಣು ತಿನ್ನುವುದಕ್ಕೆ ಅಪರೂಪಕ್ಕೊಮ್ಮೆ ಈ ಹಕ್ಕಿ ಪಪ್ಪಾಯ ಮರಕ್ಕೆ ಭೇಟಿಕೊಡುತ್ತದೆ. ಗುವಾ ಮತ್ತು ಪಪ್ಪಾಯ ಹಣ್ಣು ಇವುಗಳ ನೆಚ್ಚಿನ ಆಹಾರಗಳಲ್ಲೊಂದು. 

ಸುಳ್ಯ ತಾಲೂಕಿನ ಬಾಳಿಲ ಸಮೀಪವಿರುವ ವನ್ಯಜೀವಿ ಛಾಯಾಗ್ರಾಹಕ ರಾಧಾಕೃಷ್ಣ ರಾವ್ ಉಡುವೆಕೋಡಿಯವರಲ್ಲಿಗೆ ನಾನೊಮ್ಮೆ ಹೋಗಿದ್ದಾಗ ಕೆಂಪು ಬಾಲದ ಪಿಕಳಾರದ ಫೋಟೋವನ್ನು ಅತ್ಯಂತ ಸಮೀಪದಲ್ಲಿ ತೆಗೆಯುವ ಅವಕಾಶ ಲಭಿಸಿತ್ತು. ಆಗ ಈ ಹಕ್ಕಿ ಕೇಪುಳದ ಹಣ್ಣನ್ನು ತಿನ್ನುತ್ತಿತ್ತು. ನಾನು ಬಹಳಷ್ಟು ಸಲ ಈ ಹಕ್ಕಿಯನ್ನು ಗಮನಿಸಿದಾಗ ಇದು ಏನಾದರೊಂದು ಹಣ್ಣನ್ನು ತಿನ್ನುತ್ತಲೇ ಇರುತ್ತದೆ! 

ಮೊದಲೇ ಹೇಳಿದಂತೆ ಇವು ಅತಿಯಾಗಿ ಗದ್ದಲ ಎಬ್ಬಿಸುವ ಹಕ್ಕಿಗಳಲ್ಲ. ಆದರೆ ಸಂತಾನೋತ್ಪತ್ತಿಯ ಸಮಯದಲ್ಲಿ ಬೇರೆ ಪಕ್ಷಿಗಳಿಂದ ತೊಂದರೆ ಉಂಟಾದರೆ ಇವು ತಮ್ಮ ಜಾಗವನ್ನು ರಕ್ಷಿಸಿಕೊಳ್ಳಲು ಅತಿಯಾಗಿ ಗಲಾಟೆ ಮಾಡುತ್ತವೆ. ಇವು ಸಾಮಾನ್ಯವಾಗಿ ವರುಷದ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳವರೆಗೆ ಪೊದೆಗಳ ಕವಲುಗಳಲ್ಲಿ ನಾರು ಹುಲ್ಲು ಜೇಡರ ಬಲೆಗಳಿಂದ ಬಟ್ಟಲಾಕಾರದ ಗೂಡು ಕಟ್ಟುತ್ತವೆ. ಮರಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಬಹಳ ಕಾಳಜಿವಹಿಸುತ್ತವೆ. ಮರಿಗಳು ಬೆಳೆಯುತ್ತಾ ನಿಧಾನವಾಗಿ ಹಾರಲು ಪ್ರಾರಂಭಿಸುತ್ತವೆ. ಹಕ್ಕಿಗಳು ತಮ್ಮ ಮರಿಗಳಿಗೆ ಅಚ್ಚುಕಟ್ಟಾಗಿ ಹಾರಲು ತರಬೇತಿ ಕೊಡುವುದನ್ನು ಜೀವಿತಾವಧಿಯಲ್ಲಿ ಕನಿಷ್ಠಪಕ್ಷ ಒಂದು ಬಾರಿಯಾದರೂ ನೋಡಲೇಬೇಕು. 

ಕೆಂಪು ಬಾಲದ ಪಿಕಳಾರಗಳು ವ್ಯಾಪಕವಾಗಿ ವಿಸ್ತರಣೆಗೊಂಡಿವೆ. ಹಾಗಾಗಿ ICUN ನ ಪಟ್ಟಿಯಲ್ಲಿ ಇವುಗಳು Least Concern ನಲ್ಲಿ ಬರುತ್ತವೆ. ಇವುಗಳು ವೈವಿಧ್ಯಮಯ ಪರಿಸರದಲ್ಲಿ ಅಭಿವೃದ್ಧಿ ಹೊಂದುತ್ತವೆ. ಇದರ ಜೊತೆಗೆ ಇವುಗಳು ಮಾನವಸ್ನೇಹಿಗಳಾಗಿರುವ ಕಾರಣ ಇವುಗಳ ವಿಸ್ತಾರ ವ್ಯಾಪಕವಾಗಿದೆ. ನಮ್ಮ ಪರಿಸರದಲ್ಲಂತೂ ನಿತ್ಯವೂ ಕಾಣಸಿಗುವ ಹಕ್ಕಿಯಿದು. ಮರಗಳ ರೆಂಬೆಗಳಲ್ಲಿ ಮಾತ್ರವಲ್ಲದೇ ಟೆರೇಸ್ ನ ಮೇಲೆಯೂ ಕುಳಿತುಕೊಳ್ಳುವುದನ್ನು ಹೆಚ್ಚಾಗಿ ನಾನು ಕಾಣುತ್ತೇನೆ. 

ಕೆಂಪು ಬಾಲದ ಪಿಕಳಾರಕ್ಕೆ ಸಾಂಸ್ಕೃತಿಕ ಮಹತ್ವವೂ ಇದೆ

. ಇವುಗಳನ್ನು ಕೆಲವು ಸಂಸ್ಕೃತಿಗಳಲ್ಲಿ ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಗಳಲ್ಲಿ; ಅದರಲ್ಲಿಯೂ ವಿಶೇಷವಾಗಿ ತಮಿಳುನಾಡಿನಲ್ಲಿ ಇವುಗಳನ್ನು ಅದೃಷ್ಟದ ಪಕ್ಷಿ ಎಂದು ಪರಿಗಣಿಸಲಾಗಿದೆ. ಜನವರಿಯಲ್ಲಿ ಆಚರಿಸಲಾಗುವ ಸುಗ್ಗಿಯ ಹಬ್ಬ ಪೊಂಗಲ್ ನ ಸಮಯದಲ್ಲಿ ಕೆಂಪು ಬಾಲದ ಪಿಕಳಾರದ ಉಪಸ್ಥಿತಿ ಇದ್ದರೆ ಆ ವರ್ಷವನ್ನು ಸಮೃದ್ಧ ಸುಗ್ಗಿ ಬರುವ ವರ್ಷ ಎಂದು ಬಣ್ಣಿಸುತ್ತಾರೆ. 

– ನವೀನಕೃಷ್ಣ ಎಸ್. ಉಪ್ಪಿನಂಗಡಿ 

Tags :
Subscribe
Notify of
guest
0 Comments
Inline Feedbacks
View all comments

Bharathavani News Desk

Bharathavani is a prominent Kannada news portal based in Puttur, Karnataka, dedicated to delivering comprehensive coverage of local, state, national, and international news.

ಇನ್ನಷ್ಟು ಸುದ್ದಿಗಳು

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

ಇತ್ತೀಚಿನಸುದ್ದಿ

ಇನ್ನೊ ಓದಿ

ಭಾರಧ್ವಾಜಾಶ್ರಮ : ವೇದಾಧ್ಯಯನಕ್ಕೊಂದು ಗುರುಕುಲ..

By Balu Deraje  ಭಾರತದ ಪ್ರಾಚೀನ ಹಿಂದು ಧರ್ಮದ ಸಾಹಿತ್ಯ ಎಂದರೆ ವೇದಗಳು ಎಂದು ಪರಿಗಣಿಸಲಾಗಿದೆ. ಇದು ಸಂಸ್ಕೃತ ದಲ್ಲಿ ರಚಿಸಲ್ಪಟ್ಟಿದೆ. ಈ ವೇದಗಳನ್ನು ವ್ಯಾಸ ಮಹರ್ಷಿಗಳು ಪಠ್ಯ ರೂಪದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ಇವರ ನಾಲ್ಕು ಶಿಷ್ಯರಾದವರು 1: ಋಗ್ವೇದವನ್ನು ಪೈಲ ಮಹರ್ಷಿ, 2: ಯಜುರ್ವೇದ ವನ್ನು ವೈಶಂಪಾಯನ ಮಹರ್ಷಿ, 3:ಸಾಮವೇದ ವನ್ನು ಜೈಮಿನಿ ಮಹರ್ಷಿ, 4: ಅಥರ್ವಣ ವೇದವನ್ನು ಸುಮಂತ ಮಹರ್ಷಿ ಗಳು ಪ್ರಚಾರ ಮಾಡಿದರು. ನಂತರ ಗುರುಕುಲ ಪದ್ದತಿಯು ಆರಂಭಗೊಂಡಿತು ಎಂದು ಉಲ್ಲೇಖವಿದೆ.. ನಾಡಿನ...
suvarna vidhana soudha, belgaum, legislative building

ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ

ಜುಲೈ 12ರಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 25 ರಂದು ಉಪಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ...
arrows, tendency, businesswoman

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಜಾಗತಿಕ ರೇಟಿಂಗ್ ಏಜೆನ್ಸಿಯಾದ ಫಿಚ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಾಗಬಹುದು. ಈ ಹಿಂದೆ ಮಾಡಿದ ಅಂದಾಜಿನಲ್ಲಿ ಶೇ. 7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಈಗ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೂಡಿಕೆಗಳು ಹೆಚ್ಚುತ್ತಿರುವುದು, ಗ್ರಾಹಕರ ವಿಶ್ವಾಸ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಫಿಚ್ ರೇಟಿಂಗ್ಸ್​ನ ಅನಿಸಿಕೆಯಾಗಿದೆ.
cricket, sports, athlete

200 ಸಿಕ್ಸರ್‌ ಪೂರ್ಣಗೊಳಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ದದ ತಮ್ಮ ಕೊನೆಯ ಸೂಪರ್‌-8ರ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌ 1. ರೋಹಿತ್‌ ಶರ್ಮಾ-157 ಪಂದ್ಯಗಳಿಂದ 203 ಸಿಕ್ಸರ್‌2. ಮಾರ್ಟಿನ್‌ ಗಪ್ಟಿಲ್‌-122 ಪಂದ್ಯಗಳಿಂದ 173 ಸಿಕ್ಸರ್‌3. ಜೋಸ್‌ ಬಟ್ಲರ್‌- 123 ಪಂದ್ಯಗಳಿಂದ 137 ಸಿಕ್ಸರ್‌4. ಗ್ಲೆನ್‌ ಮ್ಯಾಕ್ಸ್‌ವೆಲ್‌-113 ಪಂದ್ಯಗಳಿಂದ 133...

Get in Touch

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

Technology Partner

© Copyright 2024 – All Rights reserved

0
Would love your thoughts, please comment.x
()
x