ಜೂ. 19ರಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ. ಈ ಕುರಿತಂತೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಪ್ರಕಟಣೆ ನೀಡಿದೆ.ಮುಂದಿನ ವಿಂಡ್ ಶೀಲ್ಡ್ ಮೇಲೆ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಅಂಟಿಸದ ವಾಹನಗಳ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ, ಅಂಥ ವಾಹನಗಳ ಮೇಲೆ ನಿಗಾ ಇರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಮುಂದಿನ ಗಾಜಿನ ಮೇಲೆ ಬೇಕೆಂತಲೇ ಫಾಸ್ಟಾಗ್ ಅಂಟಿಸದಿರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಕ್ಕೆ ಕಾರಣವಾಗುತ್ತದೆ. ಅದರಿಂದ ಸಹಜವಾಗಿ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತೊಂದರೆ ಉಂಟುಮಾಡುತ್ತದೆ. ಅಂಥ ತಪ್ಪುಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.
ಟೋಲ್ ಪ್ಲಾಜಾ ಗಳತ್ತ ಬರುವ ವಾಹನಗಳಿಗೆ ಈ ಕುರಿತಂತೆ ಸೂಚನಾ ಫಲಕ ಅಳವಡಿಸಬೇಕು
ಈಗಾಗಲೇ, ಭಾರತೀಯ ಹೆದ್ದಾರಿಗಳೊಂದಿಗೆ ಕೈ ಜೋಡಿಸಿರುವ ಅನೇಕ ಶುಲ್ಕ ವಸೂಲಾತಿ ಕೇಂದ್ರಗಳಿಗೆ ಈ ಕುರಿತಂತೆ ಸೂಚನೆ ನೀಡಲಾಗಿದೆ. ಯಾವ ವಾಹನಗಳ ಮುಂದಿನ ವಿಂಡ್ ಶೀಲ್ಡ್ ಮೇಲೆ ಫಾಸ್ಟ್ ಟ್ಯಾಗ್ ಅಂಟಿಸಿಲ್ಲವೋ ಅಂಥ ವಾಹನಗಳಿಂದ ದುಪ್ಪಟ್ಟು ದಂಡ ವಸೂಲಿಗೆ ಸೂಚಿಸಲಾಗಿದೆ. ಟೋಲ್ ಪ್ಲಾಜಾ ಗಳತ್ತ ಬರುವ ವಾಹನಗಳಿಗೆ ಈ ಕುರಿತಂತೆ ಸೂಚನಾ ಫಲಕಗಳನ್ನು ಟೋಲ್ ಪ್ಲಾಜಾ ಗಳ ಬಳಿ ಅಳವಡಿಸಬೇಕು ಎಂದೂ ಸಹ ಸೂಚಿಸಲಾಗಿದೆ. ಈ ಕುರಿತಂತೆ, ಸಾರಿಗೆ ಸಚಿವಾಲಯ ಪ್ರಕಟಣೆ ನೀಡಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರವಿರಲಿ