ಪುತ್ತೂರು: ಕಳೆದ ಮೂವತ್ತೈದು ವರ್ಷಗಳಿಂದ ರಾಧಾಕೃಷ್ಣ ರಸ್ತೆ ಪುತ್ತೂರು ಇಲ್ಲಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಶಿಶು ಮಂದಿರವು ಈಗಿರುವ ಜಾಗದಿಂದ ಸ್ಥಳಾಂತರಗೊಂಡು ಪುತ್ತೂರು ಪಾಣಾಜೆ ರಸ್ತೆ ಶಿವಪೇಟೆ ಪರ್ಲಡ್ಕ ಇಲ್ಲಿ ಇರುವ ವಿವೇಕ ಕಟ್ಟಡದಲ್ಲಿ 11/7/2024ರಂದು ಶುಭಾರಂಭಗೊಳ್ಳಲಿದೆ.
ದಿ.10/7/2024 ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮ 11/7/2024 ಬೆಳಿಗ್ಗೆ ಗಣಪತಿ ಹೋಮ, ದುರ್ಗಾ ಪೂಜೆ ನಡೆಯಲಿದೆ. ನೂತನ ಜಾಗದಲ್ಲಿ ಮಕ್ಕಳ ಪ್ರವೇಶೋತ್ಸವ ಆಗಿ ನಂತರ ಹತ್ತು ಗಂಟೆಗೆ ಸಭಾ ಕರ್ಯಕ್ರಮ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ವಹಿಸಲಿದ್ದಾರೆ.
ಶ್ರೀಮತಿ ಪ್ರೇಮಲತಾ ಉದಯ ನಿವೃತ್ತ ಶಿಕ್ಷಕಿ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶ್ರೀಮತಿ ರಾಜೀ ಬಲರಾಮ್ ಜಿ ಎಲ್ ಆಚಾರ್ಯ ಜುವೆಲ್ಲರ್ಸ್ ಸಾರ್ಜೆಂಟ್, ಶ್ರೀ ಕೃಷ್ಣಪ್ಪ ಗೌಡ(ನಿವೃತ್ತ) ಶ್ರೀ ಚೆನ್ನಪ್ಪ ಇ ಎಮ್ ಪುತ್ತೂರು
ಅತಿಥಿಗಳಾಗಿ ಭಾಗವಹಿಸಲಿದ್ದಾರೆ.