ಮೆಟ್ರೋ ರೈಲು ನಿಗಮ ಮಂಡಳಿ (BMRCL) ಇದೀಗ ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದು, ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಒದಗಿಸುವುದಾಗಿ ತಿಳಿಸಿದೆ.
ನಮ್ಮಮೆಟ್ರೋ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್
ಪ್ರಯಾಣಿಕರಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ಗಳ ಸೌಲಭ್ಯವನ್ನು ಒದಗಿಸುತ್ತದೆ. ಪ್ರಯಾಣಿಕರು ತಮ್ಮ ಲಗೇಜ್ ಇಟ್ಟು ಬೇರೆಡೆ ತೆರಳಬೇಕಾದರೆ ಇದಕ್ಕಾಗಿ ಸ್ನೇಹಿತರು, ಸಂಬಂಧಿಕರ ಮನೆಯನ್ನು ಹುಡುಕುವ ಅಗತ್ಯವಿಲ್ಲ. ಈ ಲಾಕರ್ಗಳಲ್ಲಿ ನಿಮ್ಮ ಲಗೇಜ್ ಇಟ್ಟು ಆರಾಮಾಗಿ ನಿಮ್ಮ ಕೆಲಸ ಮುಗಿಸಿ ಬರಬಹುದು.
ಇದನ್ನೂ ಓದಿ: ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ
Namma Metro ಪ್ರಯಾಣಿಕರು ಸೇಫ್ ಕ್ಲಾಕ್ ಸಂಸ್ಥೆಯ ಸ್ಮಾರ್ಟ್ ಡಿಜಿಟಲ್ ಲಾಕರ್ನಲ್ಲಿ ತಮ್ಮ ಲಗೇಜ್ ಇಟ್ಟು ನಿಶ್ಚಿಂತೆಯಿಂದ ತಮ್ಮ ಕೆಲಸ ಮುಗಿಸಿ ಬರಬಹುದು. ಪ್ರಯಾಣಿಕರು ಕಿಯೋಸ್ಟ್ನಲ್ಲಿನ ಆಯ್ಕೆಗಳನ್ನು ಭರ್ತಿ ಮಾಡಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ಇದರಲ್ಲಿ ಒಂದು ಓಟಿಪಿ ಬರುತ್ತದೆ. ಇದನ್ನು ಕಿಯೋಸ್ಟ್ನಲ್ಲಿ ನಮೂದಿಸಿದ ಕೂಡಲೇ ಪ್ರಯಾಣಿಕರಿಗೆ ತಮ್ಮ ಬ್ಯಾಗ್ಗಳನ್ನು ಇಡಲು ಡಿಜಿಟಲ್ ಲಾಕರ್ ಲಭ್ಯವಾಗುತ್ತದೆ. ವಿಶೇಷವೆಂದರೆ ಪ್ರಯಾಣಿಕರೇ ಬಂದು ಮತ್ತೆ ಓಟಿಪಿ ನಮೂದಿಸಿ ಈ ಲಾಕ್ ತೆರೆಯುವವರೆಗೂ “ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್” ತೆರೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಪ್ರಯಾಣಿಕರು ಸೇಫ್ ಲಾಕ್ ನಲ್ಲಿ ಇಟ್ಟಿರುವ ತಮ್ಮ ಲಗೇಜ್ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.
ಸ್ಮಾರ್ಟ್ ಡಿಜಿಟಲ್ ಲಾಕರ್ಗೆ ತಗಲುವ ವೆಚ್ಚ:
ಗಮನಾರ್ಹವಾಗಿ ಈ ಸ್ಮಾರ್ಟ್ ಡಿಜಿಟಲ್ ಲಾಕರ್ನಲ್ಲಿ ಸಾಮಾನ್ಯ ಗಾತ್ರದ 4ರಿಂದ 5 ಬ್ಯಾಗ್ಗಳನ್ನು ಇಡಬಹುದಾಗಿದೆ. ಈ ಲಾಕರ್ನಲ್ಲಿ 6 ಗಂಟೆಗಳ ಕಾಲ 2-3 ಬ್ಯಾಗ್ಗಳನ್ನು ಇಡಲು 70 ರೂ. ಶುಲ್ಕ ಪಾವತಿಸಬಹುದು. ಇದೇ ಸಮಯದಲ್ಲಿ ನಾಲ್ಕೈದು ಬ್ಯಾಗ್ಗಳನ್ನು ಇಡಲು 100 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಅದೇ ರೀತಿ 12 ಗಂಟೆಗಳ ಕಾಲ ಲಗೇಜ್ ಇಡಲು 120 ರೂ. ಗಳಿಂದ 160 ರೂ.ಗಳವರೆಗೆ ಪಾವತಿಸಬೇಕಾಗಬಹುದು.