ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (ಎಲ್.ಸಿ.ಎ) ತೇಜಸ್ ನ ಯಶಸ್ವಿ ಹಾರಾಟ ನಡೆಸುವ ಮೂಲಕ ಸ್ಕ್ವಾಡ್ರನ್ ಲೀಡರ್ ಮೋಹನಾ ಸಿಂಗ್ ಅವರು ಫೈಟರ್ ಜಟ್ ನ ಸ್ಕ್ವಾಡ್ರನ್ ಅನ್ನು ನಿರ್ವಹಿಸುವ ವಾಯುಪಡೆಯ ಎಲೈಟ್ 18 ಫ್ಲೈಯಿಂಗ್ ಬುಲೆಟ್ಸ್ ಸ್ಕ್ವಾಡ್ರನ್ ಗೆ ಸೇರ್ಪಡೆಗೊಂಡ ಮೊದಲ ಮಹಿಳಾ ಫೈಟರ್ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೋಹನ ಸಿಂಗ್ ಅವರ ಈ ಐತಿಹಾಸಿಕ ಸಾಧನೆ ಮೂಲಕ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಭಾರತೀಯ ವಾಯುಪಡೆಯ ಬದ್ಧತೆ ಅನಾವರಣಗೊಂಡಿದೆ. ಇತ್ತೀಚೆಗೆ ಜೋಧಪುರದಲ್ಲಿ ನಡೆದ ತರಂಗ್ ಶಕ್ತಿ ವಾಯು ಸಮರಾಭ್ಯಾಸದಲ್ಲಿ ಭಾಗವಹಿಸಿದ್ದ ಅವರು, ಮೂರು ಪಡೆಗಳ ಮೂವರು ಉಪಮುಖ್ಯಸ್ಥರ ಐತಿಹಾಸಿಕ ಹಾರಾಟದ ಭಾಗವಾಗಿದ್ದರು.
ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲೆಟ್ಗಳಾದ ಮೂವರು ಮಹಿಳೆಯರ ಮೊದಲ ಗುಂಪಿನಲ್ಲಿ ಲೆಫ್ಟಿನೆಂಟ್ ಮೋಹನಾ ಸಿಂಗ್ ಕೂಡ ಇದ್ದರು. ಇತರ ಇಬ್ಬರು ಮಹಿಳಾ ಪೈಲೆಟ್ಗಳಾದ ಲೆಫ್ಟಿನೆಂಟ್ ಭಾವನಾ ಕಾಂತ್ ಮತ್ತು ಸ್ಕ್ವೇರ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಈಗ ಪಶ್ಚಿಮ ಮರುಭೂಮಿಯಲ್ಲಿ ಸು-30 ಎಂಕೆಐ ಫೈಟರ್ ಜಟ್‌ಗಳನ್ನು ಹಾರಿಸುತ್ತಿದ್ದಾರೆ. ಮಿಗ್-21 ಗಳನ್ನು ಕಾರ್ಯಾಚರಿಸುತ್ತಿದ್ದ ಅವರು ಇತ್ತೀಚೆಗೆ ಪಾಕಿಸ್ತಾನದ ಗಡಿಯಲ್ಲಿರುವ ಗುಜರಾತ್ ವಲಯದ ನಲಿಯಾ ವಾಯುನೆಲೆಯಲ್ಲಿ ನಿಯೋಜಿಸಲಾದ ಎಲ್.ಸಿ.ಎ ಸ್ಕ್ವಾಡ್ರನ್ ಗೆ ನೇಮಕಗೊಂಡಿದ್ದರು.