ಕಾಯಕ ಯೋಗಿ ನಾಡಿನ ಶ್ರೇಷ್ಠ ಸಂತ ಪರಮ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ..

Table of Content

ನಮ್ಮ ನಾಡಿನ ಶ್ರೇಷ್ಠ ಸಂತ ಪರಮ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಕಳೆದ 25 ವರ್ಷಗಳಿಂದ ಮಾಡುತ್ತಿರುವ ಸಮಾಜ ಸೇವೆಗಳು :

25000 ಕ್ಕೂ ಅಧಿಕ ಜನರನ್ನು ಸನಾತನ ಧರ್ಮಕ್ಕೆ ಮರಳಿ ಕರೆತಂದಿದ್ದಾರೆ ಅಲ್ಲದೆ ಪ್ರತಿವರ್ಷ 500 ಕ್ಕೂ ಅಧಿಕ ಕುಟುಂಬಗಳನ್ನು ಮರಳಿ ಸನಾತನ ಧರ್ಮಕ್ಕೆ ಕರೆತರುತ್ತಾರೆ. 28 ಕ್ಕೂ ಅಧಿಕ ದೇಶಿಯ ತಳಿಯ 2000 ಗೋವುಗಳನ್ನು ಸಾಕುತ್ತಿದ್ದಾರೆ.

ಕಳೆದ 8 ವರ್ಷಗಳಿಂದ ಊಟ ವಸತಿ ಶಿಕ್ಷಣ ಮಾರಾಟಕ್ಕಲ್ಲ ಎಂಬ ಸಂಕಲ್ಪದೊಂದಿಗೆ 400 ಕ್ಕೂ ಅಧಿಕ ಮಕ್ಕಳಿಗೆ ಭಾರತೀಯ ಪರಂಪರೆಯ ಗುರುಕುಲ ದ ಶಿಕ್ಷಣ ನೀಡಿ ನಮ್ಮ ಭರತ ಭೂಮಿಯ ಸಂಸ್ಕೃತಿ ಜ್ಞಾನ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.

600ಕ್ಕೂ ಅಧಿಕ ವಯೋವೃದ್ಧರಿಗೆ ತಾವೇ ಗೌರವಧನ ನೀಡಿ ಸಾಕಿ ಸಲಹುತ್ತಿದ್ದಾರೆ. ವಿಶ್ವದರ್ಜೆಯ ಆಯುರ್ವೇದ ಹಾಗೂ ಅಲೋಪೆತಿಕ ಆಸ್ಪತ್ರೆ ಕಟ್ಟಿಸಿ ಲಕ್ಷಾಂತರ ಬಡವರಿಗೆ ಅತ್ಯಲ್ಪ ಖರ್ಚಿನಲ್ಲಿ ಅರೋಗ್ಯ ಸೇವೆ ಕೊಡಿಸುತ್ತಿದ್ದಾರೆ.1000ಕ್ಕೂ ಅಧಿಕ ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಉಚಿತ ಊಟ ವಸತಿ ಶಿಕ್ಷಣ ನೀಡುವುದಲ್ಲದೆ ಉದ್ಯೋಗವನ್ನೂ ಒದಗಿಸುತ್ತಿದ್ದಾರೆ.

ಹಿಂದುಳಿದ ಗ್ರಾಮಗಳ 500 ಕ್ಕೂ ಅಧಿಕ ಶಾಲೆಗಳನ್ನು ದತ್ತು ಪಡೆದು ಅಲ್ಲಿ ಅವಶ್ಯಕ ಶಿಕ್ಷಕರನ್ನು ನೇಮಿಸಿ ಅಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸುತ್ತಿದ್ದಾರೆ.ಸಮಾಜಕ್ಕೆ ಮಾರ್ಗದರ್ಶನ ನೀಡಲು ಬ್ರಹ್ಮಚಾರ್ಯ ಗುರುಕುಲವನ್ನು ನಿರ್ಮಿಸಿ 100 ಕ್ಕೂ ಅಧಿಕ ವೀರ ಸನ್ಯಾಸಿಗಳನ್ನು ಬೆಳೆಸುತ್ತಿದ್ದಾರೆ.

ಕಳೆದ 20 ವರ್ಷಗಳಿಂದ 15 ಲಕ್ಷ ಕ್ಕೂ ಅಧಿಕ ರೈತರಿಗೆ ಗೋ ಆಧಾರಿತ / ಸಾವಯವ / ನೈಸರ್ಗಿಕ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.10000ಕ್ಕೂ ಅಧಿಕ ದೇಶಿಯ ಬೀಜಗಳನ್ನು ಬೆಳೆಸಿ ಭಾರತದಾದ್ಯಂತ ಹಂಚುತ್ತಿದ್ದಾರೆ.ಭಾರತದ ಮೊಟ್ಟಮೊದಲ ಸಾವಯವ ಕೃಷಿ ವಿಜ್ಞಾನ ಕೇಂದ್ರ ವನ್ನು ನಿರ್ಮಿಸಿ ಲಕ್ಷಾಂತರ ರೈತರಿಗೆ ಸಮಗ್ರ ವಿಷಮುಕ್ತ ಗೋಆಧಾರಿತ ಕೃಷಿಯ ಜ್ಞಾನ ನೀಡುತ್ತಿದ್ದಾರೆ.

ಇದೆಲ್ಲದರ ಜೊತೆಗೆ ಕೋಟ್ಯಂತರ ಭಾರತೀಯರಿಗೆ ನಮ್ಮ ದೇಶ ಧರ್ಮದ ಆದ್ಯಾತ್ಮ ಸಂಸ್ಕೃತಿ ಪರಂಪರೆ ಆಚಾರ ವಿಚಾರಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಲೇ ಇರುತ್ತಾರೆ.ಕಲಿಯುಗದಲ್ಲಿ ಹುಟ್ಟಿದ ನಾನು ಚಿಕ್ಕವನಿದ್ದಾಗ ಯುಗಪುರುಷನ ಬಗ್ಗೆ ಓದಿದ್ದೆ ಕೇಳಿದ್ದೆ ಆದರೆ ಸಾಕ್ಷಾತ್ ಯುಗಪುರುಷನೆ ಈ ಸಂತ….

Tags :
Subscribe
Notify of
guest
0 Comments
Inline Feedbacks
View all comments

Bharathavani News Desk

Bharathavani is a prominent Kannada news portal based in Puttur, Karnataka, dedicated to delivering comprehensive coverage of local, state, national, and international news.

ಇನ್ನಷ್ಟು ಸುದ್ದಿಗಳು

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

ಇತ್ತೀಚಿನಸುದ್ದಿ

ಇನ್ನೊ ಓದಿ

ಭಾರಧ್ವಾಜಾಶ್ರಮ : ವೇದಾಧ್ಯಯನಕ್ಕೊಂದು ಗುರುಕುಲ..

By Balu Deraje  ಭಾರತದ ಪ್ರಾಚೀನ ಹಿಂದು ಧರ್ಮದ ಸಾಹಿತ್ಯ ಎಂದರೆ ವೇದಗಳು ಎಂದು ಪರಿಗಣಿಸಲಾಗಿದೆ. ಇದು ಸಂಸ್ಕೃತ ದಲ್ಲಿ ರಚಿಸಲ್ಪಟ್ಟಿದೆ. ಈ ವೇದಗಳನ್ನು ವ್ಯಾಸ ಮಹರ್ಷಿಗಳು ಪಠ್ಯ ರೂಪದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ಇವರ ನಾಲ್ಕು ಶಿಷ್ಯರಾದವರು 1: ಋಗ್ವೇದವನ್ನು ಪೈಲ ಮಹರ್ಷಿ, 2: ಯಜುರ್ವೇದ ವನ್ನು ವೈಶಂಪಾಯನ ಮಹರ್ಷಿ, 3:ಸಾಮವೇದ ವನ್ನು ಜೈಮಿನಿ ಮಹರ್ಷಿ, 4: ಅಥರ್ವಣ ವೇದವನ್ನು ಸುಮಂತ ಮಹರ್ಷಿ ಗಳು ಪ್ರಚಾರ ಮಾಡಿದರು. ನಂತರ ಗುರುಕುಲ ಪದ್ದತಿಯು ಆರಂಭಗೊಂಡಿತು ಎಂದು ಉಲ್ಲೇಖವಿದೆ.. ನಾಡಿನ...
suvarna vidhana soudha, belgaum, legislative building

ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ

ಜುಲೈ 12ರಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 25 ರಂದು ಉಪಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ...
arrows, tendency, businesswoman

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಜಾಗತಿಕ ರೇಟಿಂಗ್ ಏಜೆನ್ಸಿಯಾದ ಫಿಚ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಾಗಬಹುದು. ಈ ಹಿಂದೆ ಮಾಡಿದ ಅಂದಾಜಿನಲ್ಲಿ ಶೇ. 7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಈಗ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೂಡಿಕೆಗಳು ಹೆಚ್ಚುತ್ತಿರುವುದು, ಗ್ರಾಹಕರ ವಿಶ್ವಾಸ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಫಿಚ್ ರೇಟಿಂಗ್ಸ್​ನ ಅನಿಸಿಕೆಯಾಗಿದೆ.
cricket, sports, athlete

200 ಸಿಕ್ಸರ್‌ ಪೂರ್ಣಗೊಳಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ದದ ತಮ್ಮ ಕೊನೆಯ ಸೂಪರ್‌-8ರ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌ 1. ರೋಹಿತ್‌ ಶರ್ಮಾ-157 ಪಂದ್ಯಗಳಿಂದ 203 ಸಿಕ್ಸರ್‌2. ಮಾರ್ಟಿನ್‌ ಗಪ್ಟಿಲ್‌-122 ಪಂದ್ಯಗಳಿಂದ 173 ಸಿಕ್ಸರ್‌3. ಜೋಸ್‌ ಬಟ್ಲರ್‌- 123 ಪಂದ್ಯಗಳಿಂದ 137 ಸಿಕ್ಸರ್‌4. ಗ್ಲೆನ್‌ ಮ್ಯಾಕ್ಸ್‌ವೆಲ್‌-113 ಪಂದ್ಯಗಳಿಂದ 133...

Get in Touch

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

Technology Partner

© Copyright 2024 – All Rights reserved

0
Would love your thoughts, please comment.x
()
x