Union Budget 2024  : ಮೊದಲ ಬಾರಿಗೆ ಉದ್ಯೋಗ ಹುಡುಕುವವರಿಗೆ ಒಂದು ತಿಂಗಳ ವೇತನ

Table of Content

Union Budget 2024  : ಸರ್ಕಾರದ 9 ಆದ್ಯತೆಗಳಲ್ಲಿ ಒಂದು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಾಗಿರುವವರಿಗೆ ದೊಡ್ಡ ಸಹಾಯ ದೊರೆಯಲಿದೆ. ಔಪಚಾರಿಕ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದ ವತಿಯಿಂದ ನೀಡಲಾಗುವುದು. ಈ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಗರಿಷ್ಠ ಮೊತ್ತ 15 ಸಾವಿರ ರೂ. ಇಪಿಎಫ್​ಒನಲ್ಲಿ ನೋಂದಾಯಿಸಲ್ಪಟ್ಟವರು ಈ ಭತ್ಯೆ ಪಡೆಯಲಿದ್ದಾರೆ. ಅರ್ಹತೆಯ ಮಿತಿಯು ತಿಂಗಳಿಗೆ 1 ಲಕ್ಷ ರೂ. ಇದರಿಂದ 2.10 ಕೋಟಿ ಯುವಕರಿಗೆ ಅನುಕೂಲವಾಗಲಿದೆ.

ಉದ್ಯೋಗ, ಕೌಶಲ್ಯ ತರಬೇತಿಗೆ ಸಂಬಂಧಿಸಿದ 5 ಯೋಜನೆಗಳಿಗೆ ₹2 ಸಾವಿರ ಕೋಟಿ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಭಾರತದ ಆರ್ಥಿಕತೆಯ ಬೆಳವಣಿಗೆಯು ಅತ್ಯುತ್ತಮವಾಗಿ ಮುಂದುವರಿದಿದೆ. ಭಾರತದ ಹಣದುಬ್ಬರವು ಸ್ಥಿರವಾಗಿದೆ, 4% ಗುರಿಯತ್ತ ಸಾಗುತ್ತಿದೆ. ಬಡವರು, ಯುವಕರು, ಮಹಿಳೆಯರು, ರೈತರಂತಹ ಪ್ರಮುಖ ವರ್ಗಗಳನ್ನು ಕೇಂದ್ರೀಕರಿಸುವ ಪ್ರಯತ್ನ ಮಾಡಲಾಗುತ್ತಿದೆ. ಉದ್ಯೋಗ, ಕೌಶಲ್ಯ, ಎಂಎಸ್‌ಎಂಇ, ಮಧ್ಯಮ ವರ್ಗದವರಿಗೆ ನಿರಂತರ ಗಮನ ನೀಡಲಾಗುತ್ತಿದೆ. ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ ಸಂಬಂಧಿಸಿದ 5 ಯೋಜನೆಗಳಿಗೆ 2 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಹೇಳಿದರು.

Tags :
Subscribe
Notify of
guest
0 Comments
Inline Feedbacks
View all comments

Bharathavani News Desk

Bharathavani is a prominent Kannada news portal based in Puttur, Karnataka, dedicated to delivering comprehensive coverage of local, state, national, and international news.

ಇನ್ನಷ್ಟು ಸುದ್ದಿಗಳು

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

ಇತ್ತೀಚಿನಸುದ್ದಿ

ಇನ್ನೊ ಓದಿ

ಭಾರಧ್ವಾಜಾಶ್ರಮ : ವೇದಾಧ್ಯಯನಕ್ಕೊಂದು ಗುರುಕುಲ..

By Balu Deraje  ಭಾರತದ ಪ್ರಾಚೀನ ಹಿಂದು ಧರ್ಮದ ಸಾಹಿತ್ಯ ಎಂದರೆ ವೇದಗಳು ಎಂದು ಪರಿಗಣಿಸಲಾಗಿದೆ. ಇದು ಸಂಸ್ಕೃತ ದಲ್ಲಿ ರಚಿಸಲ್ಪಟ್ಟಿದೆ. ಈ ವೇದಗಳನ್ನು ವ್ಯಾಸ ಮಹರ್ಷಿಗಳು ಪಠ್ಯ ರೂಪದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ಇವರ ನಾಲ್ಕು ಶಿಷ್ಯರಾದವರು 1: ಋಗ್ವೇದವನ್ನು ಪೈಲ ಮಹರ್ಷಿ, 2: ಯಜುರ್ವೇದ ವನ್ನು ವೈಶಂಪಾಯನ ಮಹರ್ಷಿ, 3:ಸಾಮವೇದ ವನ್ನು ಜೈಮಿನಿ ಮಹರ್ಷಿ, 4: ಅಥರ್ವಣ ವೇದವನ್ನು ಸುಮಂತ ಮಹರ್ಷಿ ಗಳು ಪ್ರಚಾರ ಮಾಡಿದರು. ನಂತರ ಗುರುಕುಲ ಪದ್ದತಿಯು ಆರಂಭಗೊಂಡಿತು ಎಂದು ಉಲ್ಲೇಖವಿದೆ.. ನಾಡಿನ...
suvarna vidhana soudha, belgaum, legislative building

ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ

ಜುಲೈ 12ರಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 25 ರಂದು ಉಪಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ...
arrows, tendency, businesswoman

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಜಾಗತಿಕ ರೇಟಿಂಗ್ ಏಜೆನ್ಸಿಯಾದ ಫಿಚ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಾಗಬಹುದು. ಈ ಹಿಂದೆ ಮಾಡಿದ ಅಂದಾಜಿನಲ್ಲಿ ಶೇ. 7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಈಗ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೂಡಿಕೆಗಳು ಹೆಚ್ಚುತ್ತಿರುವುದು, ಗ್ರಾಹಕರ ವಿಶ್ವಾಸ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಫಿಚ್ ರೇಟಿಂಗ್ಸ್​ನ ಅನಿಸಿಕೆಯಾಗಿದೆ.
cricket, sports, athlete

200 ಸಿಕ್ಸರ್‌ ಪೂರ್ಣಗೊಳಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ದದ ತಮ್ಮ ಕೊನೆಯ ಸೂಪರ್‌-8ರ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌ 1. ರೋಹಿತ್‌ ಶರ್ಮಾ-157 ಪಂದ್ಯಗಳಿಂದ 203 ಸಿಕ್ಸರ್‌2. ಮಾರ್ಟಿನ್‌ ಗಪ್ಟಿಲ್‌-122 ಪಂದ್ಯಗಳಿಂದ 173 ಸಿಕ್ಸರ್‌3. ಜೋಸ್‌ ಬಟ್ಲರ್‌- 123 ಪಂದ್ಯಗಳಿಂದ 137 ಸಿಕ್ಸರ್‌4. ಗ್ಲೆನ್‌ ಮ್ಯಾಕ್ಸ್‌ವೆಲ್‌-113 ಪಂದ್ಯಗಳಿಂದ 133...

Get in Touch

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

Technology Partner

© Copyright 2024 – All Rights reserved

0
Would love your thoughts, please comment.x
()
x