ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಚಾಲನೆ ನೀಡಿದ ಸ್ವಚ್ಛ ಭಾರತ ಅಭಿಯಾನ ದೇಶದಲ್ಲಿ ಶಿಶುಮರಣ ಪ್ರಮಾಣವನ್ನು ತಗ್ಗಿಸಲು ನೆರವಾಗಿದ್ದು, ಶೌಚಾಲಯಗಳ ನಿರ್ಮಾಣದಿಂದಾಗಿ ವಾರ್ಷಿಕ 60,000 ದಿಂದ 70,000 ಶಿಶುಗಳ ಸಾವನ್ನು ತಡೆಯುವಲ್ಲಿ ಅಭಿಯಾನ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅಧ್ಯಯನ ತಿಳಿಸಿದೆ.
ಈ ಅಧ್ಯಯನವನ್ನು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಶಿಶು ಮತ್ತು ಮಕ್ಕಳ ಮರಣವನ್ನು ಕಡಿಮೆ ಮಾಡುವಲ್ಲಿ ಶೌಚಾಲಯಗಳ ನಿರ್ಮಾಣ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಭಾರತದಲ್ಲಿ ಪರಿವರ್ತಕ ಪಾತ್ರವನ್ನು ವಹಿಸಿದೆ ಎಂದು ಬ್ರಿಟಿಷ್ ಸಂಶೋಧನಾ ನಿಯತಕಾಲಿಕೆ ನೇಚರ್ ಹೇಳಿದೆ.
ಸ್ವಚ್ಛ ಭಾರತ ಅಭಿಯಾನದಲ್ಲಿ ಶೌಚಾಲಯ ನಿರ್ಮಾಣ ಮತ್ತು ಭಾರತದಲ್ಲಿ ಶಿಶು ಮರಣ ಪ್ರಮಾಣ ಎಂಬ ಸಂಗತಿಯನ್ನು ಅಧ್ಯಯನ ಬಹಿರಂಗ ಪಡಿಸಿದೆ. ಅಭಿಯಾನವು ಸ್ವಚ್ಛ ಮತ್ತು ಸುರಕ್ಷಿತ ನೈರ್ಮಲ್ಯವು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 2014 ರಿಂದ 2020ರ ಅವಧಿಯಲ್ಲಿ ಅಧ್ಯಯನ ನಡೆಸಲಾಗಿದ್ದು, ಈ ಅವಧಿಯಲ್ಲಿ ಸರ್ಕಾರ 10 ಕೋಟಿ ಗೃಹ ಶೌಚಾಲಯಗಳನ್ನು ನಿರ್ಮಿಸಿದೆ. 2003ರಲ್ಲಿ ದೇಶದ ಬಹುಪಾಲು ಜಿಲ್ಲೆಗಳಲ್ಲಿ ಶೇಕಡ 60 ಕ್ಕಿಂತ ಹೆಚ್ಚು ಶಿಶು ಮರಣ ಪ್ರಮಾಣವನ್ನು ಹೊಂದಿದ್ದವು. ನಂತರ 2020 ರ ವೇಳೆಗೆ, ಹೆಚ್ಚಿನ ಜಿಲ್ಲೆಗಳು ಶೇಕಡ 30ಕ್ಕಿಂತ ಕಡಿಮೆ ಶಿಶು ಮರಣ ಪ್ರಮಾಣವನ್ನು ಸಾಧಿಸಿದೆ.