ಪ್ಯಾರಿಸ್ ನಲ್ಲಿ ನಡೆದ 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ 2024 ಕ್ರೀಡಾ ಹಬ್ಬವು ಭಾನುವಾರ ಮುಕ್ತಾಯಗೊಂಡಿದೆ. ಈ ಬಾರಿಯ ಪ್ಯಾರಲಿಂಪಿಕ್ಸ್ ನಲ್ಲಿ ಇತಿಹಾಸ ಸೃಷ್ಟಿಸಿರುವ ಭಾರತವು ದಾಖಲೆಯ 21 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಏಳು ಚಿನ್ನ, ಒಂಬತ್ತು ಬೆಳ್ಳಿ ಹಾಗೂ 13 ಕಂಚಿನ ಪದಕಗಳನ್ನು ಭಾರತವು ತನ್ನ ಮುಡಿಗೇರಿಸಿಕೊಂಡಿದೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತವು ಗರಿಷ್ಠ ಪದಕಗಳನ್ನು ಗೆದ್ದಿದ್ದು ಇದೇ ಮೊದಲ ಬಾರಿಯಾಗಿದೆ. ಇದಕ್ಕೂ ಮೊದಲು ಟೋಕಿಯೋ ಪ್ಯಾರಲಿಂಪಿಕ್ಸ್ ನಲ್ಲಿ 19 ಪದಕಗಳನ್ನು ಗೆದ್ದಿದ್ದು ಅತ್ಯುತ್ತಮ ಕ್ರೀಡಾ ಪ್ರದರ್ಶನವಾಗಿತ್ತು. ಕ್ರೀಡಾಕೂಟದ ಕೊನೆಯ ದಿನವಾದ ಭಾನುವಾರ ಭಾರತದ ಪ್ಯಾರಾ ಅಥ್ಲೇಟ್ ಪೂಜಾ ಓಜಾ, ಮಹಿಳೆಯರ ಪ್ಯಾರಾ ಕ್ಯಾನೊ ಏಐ1 200 ಮೀಟರ್ ಸ್ಪರ್ಧೆಯ ಸೆಮಿಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಫೈನಲ್ ರೇಸ್ ನಿಂದ ಹೊರಬಿದ್ದರು. ಇದರೊಂದಿಗೆ ಪ್ಯಾರಲಿಂಪಿಕ್ಸ್ 2024ರಲ್ಲಿ ಭಾರತದ ಅಭಿಯಾನವೂ ಕೊನೆಗೊಂಡಿತು.
ಟೋಕಿಯೋ ಪ್ಯಾರಲಿಂಪಿಕ್ಸ್ ನಲ್ಲಿ 5 ಚಿನ್ನ, 8 ಬೆಳ್ಳಿ, ಹಾಗೂ 6 ಕಂಚಿನ ಪದಕ ಸೇರಿದಂತೆ ಒಟ್ಟು 19 ಪದಕ ಗೆದ್ದಿದ್ದ ಭಾರತ ಪದಕಗಳ ಪಟ್ಟಿಯಲ್ಲಿ ಅಂತಿಮವಾಗಿ 24ನೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ಬಾರಿ ಚಿನ್ನದ ಪದಕಗಳ ಸಂಖ್ಯೆಯನ್ನು ಭಾರತ ಹೆಚ್ಚಿಸಿದೆಯಾದರೂ, ಎರಡಂಕಿ ತಲುಪುವಲ್ಲಿ ಸಾಧ್ಯವಾಗಲಿಲ್ಲ. ಅದಾಗ್ಯೂ ಈ ಬಾರಿ ಭಾರತದ ಅಥ್ಲೀಟ್ ಗಳ ಪ್ರದರ್ಶನ ಗಮನಾರ್ಹವಾಗಿತ್ತು. 29 ಪದಕಗಳಲ್ಲದೆ ಹಲವು ಅಥ್ಲೀಟ್ಗಳು ಕೂದಲೆಳೆ ಅಂತರದಲ್ಲಿ ಪದಕಗಳನ್ನು ಕಳೆದುಕೊಂಡರು. ಇನ್ನೂ ಕೆಲವರು ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಪಡೆದು ಅಲ್ಲಿ ಸೋತು ಕಂಚಿನ ಪದಕ್ಕೆ ನಡೆದ ಪಂದ್ಯದಲ್ಲೂ ಸೋತರು. ಹೀಗಾಗಿ ಭಾರತ ಹಲವು ವಿಭಾಗಗಳಲ್ಲಿ ಪದಕ ವಂಚಿತವಾಗಬೇಕಾಯಿತು. ಒಟ್ಟಾರೆಯಾಗಿ ಭಾರತ 7 ಚಿನ್ನ,9 ಬೆಳ್ಳಿ, 13 ಕಂಚು ಸೇರಿ ಒಟ್ಟು 29 ಪದಕಗಳನ್ನು ಗೆದ್ದ ಸಾಧನೆ ಮಾಡಿತು.
ಪ್ಯಾರಿಸ್ ಪ್ಯಾರಾಲಿಂಪಿಕ್ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳು
1.ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್.ಹೆಚ್ (ಶೂಟಿಂಗ್) ನಲ್ಲಿ ಅವನಿ ಲೆಖರಾ- ಚಿನ್ನ
2.ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಚ್.ಎಸ್ (ಶೂಟಿಂಗ್) ನಲ್ಲಿ ಮೋನ ಅಗರ್ವಾಲ್ -ಕಂಚು
- ಮಹಿಳೆಯರ 100 ಮೀಟರ್ ಟಿ35 (ಅಥ್ಲೆಟಿಕ್ಸ್) ನಲ್ಲಿ ಪ್ರೀತಿ ಪಾಲ್ -ಕಂಚು
- ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ಎಚ್1 (ಶೂಟಿಂಗ್) ನಲ್ಲಿ ಮನೀಶ್ ನರ್ವಾಲ್- ಬೆಳ್ಳಿ
- ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಎಸ್ ಹೆಚ್1 ಶೂಟಿಂಗ್ ನಲ್ಲಿ ರುಬಿನ ಫ್ಯಾನ್ಸಿಸ್- ಕಂಚು
- ಮಹಿಳೆಯರ 200 ಮೀಟರ್ ಟಿ35 (ಅಥ್ಲೆಟಿಕ್ಸ್) ನಲ್ಲಿ ಪ್ರೀತಿ ಪಾಲ್ -ಕಂಚು
- ಪುರುಷರ ಹೈಜಂಪ್ ಟಿ47 (ಅಥ್ಲೆಟಿಕ್ಸ್) ನಲ್ಲಿ ನಿಶಾದ್ ಕುಮಾರ್ -ಬೆಳ್ಳಿ
- ಪುರುಷರ ಡಿಸ್ಕಸ್ ಥ್ರೋ ಎಫ್56 (ಅಥ್ಲೆಟಿಕ್ಸ್) ನಲ್ಲಿ ಯೋಗೇಶ್ ಕಥುನಿಯ- ಬೆಳ್ಳಿ
- ಪುರುಷರ ಸಿಂಗಲ್ಸ್ ಎಸ್ಎಲ್3 (ಬ್ಯಾಡ್ಮಿಂಟನ್) ನಲ್ಲಿ ನಿತೇಶ್ ಕುಮಾರ್- ಚಿನ್ನ
- ಮಹಿಳೆಯರ ಸಿಂಗಲ್ಸ್ ಎಸ್.ಯು5 (ಬ್ಯಾಡ್ಮಿಂಟನ್) ನಲ್ಲಿ ತುಳಸಿಮತಿ ಮುರುಗೇಶನ್- ಬೆಳ್ಳಿ
- ಮನೀಶಾ ರಾಮ್ದಾಸ್ ಮಹಿಳೆಯರ ಸಿಂಗಲ್ಸ್ ಎಸ್.ಯು5 ಬ್ಯಾಡ್ಮಿಂಟನ್- ಕಂಚು
- ಸುಹಾಸ್ ಯತಿರಾಜ್ ಪುರುಷರ ಸಿಂಗಲ್ಸ್ ಎಸ್ಎಲ್4 ಬ್ಯಾಡ್ಮಿಂಟನ್- ಬೆಳ್ಳಿ
- ರಾಕೇಶ್ ಕುಮಾರ್- ಶೀತಲ್ ದೇವಿ ಮಿಶ್ರ ತಂಡದ ಕಾಂಪೌಂಡ್ ಓಪನ್ ಆರ್ಚರಿ- ಕಂಚು
- ಪುರುಷರ ಜಾವಲಿನ್ ಎಸೆತದಲ್ಲಿ ಸುಮಿತ್ ಆಂಟಿಲ್ ಎಫ್64 ಅಥ್ಲೆಟಿಕ್ಸ್ -ಚಿನ್ನ
- ಮಹಿಳೆಯರ ಸಿಂಗಲ್ಸ್ ಎಸ್.ಹೆಚ್6 ಬ್ಯಾಡ್ಮಿಂಟನ್ ನಲ್ಲಿ ನಿತ್ಯಶ್ರೀ ಶಿವನ್-ಕಂಚು
- ಮಹಿಳೆಯರ 400 ಮೀಟರ್ ಟಿ 20 (ಅಥ್ಲೆಟಿಕ್ಸ್) ನಲ್ಲಿ ದೀಪ್ತಿ ಜೀವನ್ ಜಿ-ಕಂಚು
- ಪುರುಷರ ಜಾವೆಲಿನ್ ಎಫ್46 (ಅಥ್ಲೆಟಿಕ್ಸ್) ನಲ್ಲಿ ಸುಂದರ್ ಸಿಂಗ್ ಗುರ್ಜರ್ -ಕಂಚು
- ಪುರುಷರ ಜಾವೆಲಿನ್ ಎಫ್ 46 (ಅಥ್ಲೆಟಿಕ್ಸ್) ನಲ್ಲಿ ಅಜಿತ್ ಸಿಂಗ್- ಬೆಳ್ಳಿ
- ಪುರುಷರ ಹೈಜಂಪ್ ಟಿ 63 (ಅಥ್ಲೆಟಿಕ್ಸ್) ನಲ್ಲಿ ಮರಿಯಪ್ಪನ್ ತಂಗವೇಲು- ಕಂಚು
- ಪುರುಷರ ಹೈಜಂಪ್ ಟಿ63 (ಅಥ್ಲೆಟಿಕ್) ನಲ್ಲಿ ಶರದ್ ಕುಮಾರ್- ಬೆಳ್ಳಿ
- ಪುರುಷರ ಶಾರ್ಟ್ ಪುಟ್ 46 (ಅಥ್ಲೆಟಿಕ್ಸ್) ನಲ್ಲಿ ಸಚಿನ್ ಖಿಲಾರಿ- ಬೆಳ್ಳಿ
- ಪುರುಷರ ವೈಯಕ್ತಿಕ ರಿಕರ್ವ್ ನಲ್ಲಿ ಅರವಿಂದರ್ ಸಿಂಗ್ (ಆರ್ಚರಿ) -ಚಿನ್ನ
- ಪುರುಷರ ಕ್ಲಬ್ ಥ್ರೋ51 (ಅಥ್ಲೆಟಿಕ್ಸ್) ನಲ್ಲಿ ದರಂಭೀರ್- ಚಿನ್ನ
- ಪುರುಷರ ಕ್ಲಬ್ ಥ್ರೋ 51 (ಅಥ್ಲೆಟಿಕ್ಸ್) ನಲ್ಲಿ ಪ್ರಣವ್ ಸೂರ್ಮ- ಬೆಳ್ಳಿ
- ಜೂಡೋ ಪುರುಷರ 60 ಕೆಜಿ ವಿಭಾಗದಲ್ಲಿ ಕಪಿಲ್ ಕರ್ಮಾರ್- ಕಂಚು
- ಟಿ64 ಹೈಜಂಪ್ (ಅಥ್ಲೆಟಿಕ್ಸ್) ಪ್ರವೀಣ್ ಕುಮಾರ್- ಚಿನ್ನ
- ಪುರುಷರ ಶಾರ್ಟ್ ಪುಟ್ ಎಫ್ 57 (ಅಥ್ಲೆಟಿಕ್ಸ್) ಹೊಕಾಟೊ ಸೆಮಾ- ಕಂಚು
- ಮಹಿಳೆಯರ 200 ಮೀಟರ್ ಟಿ12 (ಅಥ್ಲೆಟಿಕ್ಸ್) ಸಿಮ್ರಾನ್ ಸಿಂಗ್- ಕಂಚು
- ಪುರುಷರ ಜಾವೆಲಿನ್ ಎಫ್ 41 ಅಥ್ಲೆಟಿಕ್ಸ್ ನಲ್ಲಿ ನವದೀಪ್ ಸಿಂಗ್- ಚಿನ್ನ
ಪ್ಯಾರಿಸ್ ಪ್ಯಾರಲಿಂಪಿಕ್ಸ್ ನಲ್ಲಿ ಪದಕಗೆದ್ದು ಭಾರತದ ಗರಿಮೆಯನ್ನು ವಿಶ್ವಾದ್ಯಂತ ಪಸರಿಸಿದ ವಿಶೇಷ ಭಾರತೀಯ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಮುಂದಿನ ಒಲಂಪಿಕ್ಸ್ ನಲ್ಲಿ ಭಾರತದ ಮಡಿಲಿಗೆ ಮತ್ತಷ್ಟು ಪದಕಗಳು ಸೇರಲಿ ಎಂಬುದು ನಮ್ಮೆಲ್ಲರ ಆಶ್ರಯ.