ಕಳೆದ 3 ವರ್ಷಗಳಿಂದ ಧನಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಭಾರತವಾಣಿ ಅಂತರ್ಜಾಲ ತಾಣ ಹೊಸವಿನ್ಯಾಸದ ಮೂಲಕ ನವೀಕರಣಗೊಂಡು ಲೋಕಾರ್ಪಣೆಯಾಗಿದೆ.
ಪುತ್ತೂರಿನ ಹಿರಿಯ ಲೇಖಕರಾದ ಪ್ರೊ.ವಿ.ಬಿ ಅರ್ತಿಕಜೆ ಅವರು ಲೋಕಾರ್ಪಣೆ ಮಾಡಿ “ಸಮಾಜದ ಜನರಿಗೆ ಒಳ್ಳೆಯ ಸುದ್ದಿಗಳನ್ನು ಧನಾತ್ಮಕ ಆಲೋಚನೆಗಳನ್ನು ನೀಡುವಂತಹ ತಾಣ ಇದಾಗಲಿ” ಎಂದು ಶುಭಹಾರೈಸಿದರು ಹಾಗೂ ಭಾರತವಾಣಿ ವೆಬ್ಸೈಟ್ ವಿನೂತನವಾಗಿ ನಿರ್ಮಿಸಿದ an idea Tech ಮಾಲೀಕರಾದ ಅನಿಶ್ ಅವರು ಹಿರಿಯ ಲೇಖಕರಾದ ಅರ್ತಿಕಜೆ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಭಾರತವಾಣಿ ಮುಂದಿನ ದಿನಗಳಲ್ಲಿ ಅತಿ ದೊಡ್ಡ ಧನಾತ್ಮಕ ಸುದ್ದಿಗಳ ತಾಣವಾಗಿ ಹೊರಹೊಮ್ಮಲಿದೆ.