ವಾಹನಗಳ ಅತಿ ಸುರಕ್ಷಿತ ನೋಂದಣಿ ಫಲಕ ಎಚ್ಎಸ್ಆರ್ಪಿ ಅಳವಡಿಸಲು ನೀಡಲಾಗಿರುವ ಕಾಲಾವಧಿ ಆಗಸ್ಟ್ 15 ರ ಭಾನುವಾರ ಮುಕ್ತಾಯ ವಾಗಬೇಕಿತ್ತು. ಆದರೆ, ಸೆಪ್ಟೆಂಬರ್ 18ರಂದು ಈ ಸಂಬಂಧ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ವಾಹನ ಸವಾರರಿಗೆ ನಿರಾಳವಾಗಿದೆ.
ಸಾರಿಗೆ ಇಲಾಖೆಯು 2019 ಏಪ್ರಿಲ್ 1ನೇ ತಾರೀಕಿಗಿಂತ ಮೊದಲು ನೋಂದಣಿಯಾದ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಸಲು 2023ರ ಆಗಸ್ಟ್ 16 ರಿಂದ ನವಂಬರ್ 16ರವರೆಗೆ ಕಾಲಾವಕಾಶವನ್ನು ನೀಡಿತ್ತು. ಅದಕ್ಕೆ ವಾಹನ ಮಾಲೀಕರಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿರಲಿಲ್ಲ. ಹಾಗಾಗಿ ಫೆಬ್ರವರಿ 15ರವರೆಗೆ ಗಡುವು ವಿಸ್ತರಿಸಿತ್ತು. ಆ ನಂತರವೂ ವಾಹನ ಮಾಲೀಕರು ಎಚ್ಚೆತ್ತುಕೊಳ್ಳದಿದ್ದರಿಂದ ಮೇ 31ರವರೆಗೆ ಗಡುವು ವಿಸ್ತರಣೆ ಮಾಡಿತ್ತು.
ಇನ್ನು ಗಡುವು ಮುಗಿದ ಬಳಿಕ ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆಯು ಸೂಚನೆ ನೀಡಿತ್ತು. ಅದಕ್ಕಾಗಿ ಖಾಸಗಿ ಕಂಪನಿಯು ನೀಡಲಾಗಿರುವ ಗಡುವನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ನಿರ್ದೇಶ ಬೇಕೆಂದು ಜೂನ್ ನಲ್ಲಿ ಹೈಕೋರ್ಟ್ ಮನವಿ ಮಾಡಿತ್ತು. ಅದರಂತೆ ಉಚ್ಚ ನ್ಯಾಯಾಲಯವು ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರಿಂದ ಸೆಪ್ಟೆಂಬರ್ 15 ರವರೆಗೆ ಮತ್ತೆ ಗಡು ವಿಸ್ತರಿಸಲಾಗಿತ್ತು. ಇದೀಗ ಈ ಗಡುವು ಇಂದಿಗೆ ಕೊನೆಗೊಳ್ಳಲಿದೆ. ಆದರೆ ಸೆಪ್ಟೆಂಬರ್ 18ರಂದು ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ .ಅಲ್ಲಿಯವರೆಗೆ ವಾಹನ ಸವಾರರಿಗೆ ನಿರಾಳವಾಗಿದೆ.
ಎಚ್ಎಸ್ಆರ್‌ಪಿ ಇಲ್ಲದಿದ್ದರೆ 500-1000 ರೂಪಾಯಿ ದಂಡ
ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಂಚಾರ ವಿಭಾಗದ ಪೊಲೀಸರು ಮೊದಲ ಬಾರಿಗೆ ವಾಹನಗಳಿಗೆ ಎಚ್ಎಸ್ಆರ್‌ಪಿಯನ್ನು ಅಳವಡಿಸದಿರುವ ವಾಹನಗಳನ್ನು ಪತ್ತೆ ಮಾಡಿದಾಗ 500 ರೂಪಾಯಿ ದಂಡ, ಆನಂತರ ಪ್ರತಿ ಬಾರಿ ಒಂದು ಸಾವಿರ ರೂಪಾಯಿ ದಂಡ ವಿಧಿಸಲಿದೆ.
1.48 ಕೋಟಿ ವಾಹನಗಳು ನೋಂದಣಿಗೆ ಬಾಕಿ
ರಾಜ್ಯದಲ್ಲಿ 2019ರ ಏಪ್ರಿಲ್ ಒಂದಕ್ಕೂ ಮೊದಲು ನೋಂದಣಿಯಾದ ಎರಡು ಕೋಟಿ ವಾಹನಗಳು ಎಚ್ಎಸ್ಆರ್ಪಿ ಅಳವಡಿಸಿಕೊಳ್ಳಲು ಬಾಕಿ ಇದೆ. ಅದರಲ್ಲಿ ಇದೀಗ ಕೇವಲ 52 ಲಕ್ಷ ವಾಹನಗಳಿಗೆ ಮಾತ್ರ ಎಚ್ಎಸ್ಆರ್ಪಿಯನ್ನು ಅಳವಡಿಸಲಾಗಿದೆ. ಇನ್ನೂ 1.48 ಕೋಟಿ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಸಲು ಬಾಕಿ ಇದೆ ಎಂದು ಮೂಲಗಳು ತಿಳಿಸಿದೆ.