ವೃತ್ತಿಯಲ್ಲಿ ನೀವು ಬಟ್ಟೆ ಹೊಲಿಗೆಕಾರರೇ..? ಅಥವಾ ನಿಮಗೆ ಬಟ್ಟೆ ಹೊಲಿಯಲು ಗೊತ್ತಿದ್ದು ಹೊಲಿಗೆ ಯಂತ್ರ ಇಲ್ಲದೆ ಪರದಾಡುತ್ತಿದ್ದೀರಾ..? ಹಾಗಾದರೆ ಚಿಂತೆ ಯಾಕೆ? ಗ್ರಾಮ ಪಂಚಾಯತ್ ಉಚಿತವಾಗಿ ಹೊಲಿಗೆ ಯಂತ್ರ ನೀಡುತ್ತಿದ್ದು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
ಜಿಲ್ಲಾ ಔದ್ಯಮಿಕ ಕೇಂದ್ರ/ವೃತ್ತಿಪರ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಪ್ರದೇಶದ ಟೈಲರಿಂಗ್ ವೃತ್ತಿ ನಡೆಸುತ್ತಿರುವ ಮಹಿಳೆಯರಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ.
- ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ವರ್ಗಾವಣೆ ಪ್ರಮಾಣ ಪತ್ರ/ ಎಸ್ ಎಸ್ ಎಲ್ ಸಿ ಅಂಕಪಟ್ಟಿ/ ಇನ್ನಿತರ ಪ್ರಮಾಣ ಪತ್ರ)
- ಶೈಕ್ಷಣಿಕ ಅರ್ಹತೆ (ವರ್ಗಾವಣೆ ಪ್ರಮಾಣ ಪತ್ರ/ ಅಂಕಪಟ್ಟಿ)
- ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ಮಾತ್ರ)
- ಪಡಿತರ ಚೀಟಿ
- ಮತದಾರರ ಗುರುತಿನ ಚೀಟಿ
- ಆಯಾ ಗ್ರಾಮ ಪಂಚಾಯತಿಯ,
- ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ (ಟೈಲರಿಂಗ್) ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ.
ಯಾರು ಅರ್ಜಿ ಸಲ್ಲಿಸಲು ಅರ್ಹರಲ್ಲ
ಸರಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಅರ್ಜಿ ಸಲ್ಲಿಸಲು 07.09.2024 ಕೊನೆಯ ದಿನಾಂಕವಾಗಿರುತ್ತದೆ. ಅರ್ಹರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.