ಹೆಚ್ ಕೆ ಕನ್ಸಲ್ಟೆನ್ಸಿ ಸಂಸ್ಥೆ ಹಾಗೂ ಟಾಕ್ಯೋನ್ ಸಿಸ್ಟಂ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಆರ್.ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಸಹಭಾಗಿತ್ವದಲ್ಲಿ ಸ್ಟೋಗೋ ಫೆಸ್ಟ್ 2024 ಮತ್ತು ಚೈಲ್ಡ್ ಆನ್ಲೈನ್ ಪ್ರೊಟೆಕ್ಷನ್ ಪ್ರಶಸ್ತಿ (COP) 2024 ಅನ್ನು ಘೋಷಿಸುತ್ತಿದೆ. ಆರ್.ಆರ್. ಸಮೂಹ ಸಂಸ್ಥೆಯ ಕ್ಯಾಂಪಸ್ ನಲ್ಲಿ ಡಿಸೆಂಬರ್ 9 ಮತ್ತು 10ರಂದು ಕರ್ನಾಟಕ ಪ್ರಾದೇಶಿಕ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಸ್ಟೋಗೋ ಫೆಸ್ಟ್ ಎಂದರೇನು?
ಸ್ಟೋಗೋ ಫೆಸ್ಟ್ 2024 ಎನ್ನುವುದು ಅಂತರಾಷ್ಟ್ರೀಯ ಸ್ಟೀಮ್ ಸ್ಪರ್ಧೆಯಾಗಿದ್ದು, 4 ರಿಂದ 12ನೇ ಗ್ರೇಡ್ ವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ”ಮಕ್ಕಳ ಡಿಜಿಟಲ್ ಯೋಗ ಕ್ಷೇಮಕ್ಕಾಗಿ ಎಐ ಮತ್ತು ರೋಬೋಟಿಕ್ಸ್ ಬಳಕೆ” ಎಂಬ ಥೀಮ್ ನಡಿ ಈ ಸ್ಪರ್ಧೆ ನಡೆಯಲಿದೆ. ವಿಶೇಷವೆಂದರೆ, ಪ್ರಾದೇಶಿಕ ಸ್ಟೋಗೋ ಫೆಸ್ಟ್ ವಿಜೇತರು 2025ರ ಫೆಬ್ರವರಿ 6ರಂದು ಯುಎಇಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಸ್ಟೋಗೋ ಫೆಸ್ಟ್ (ಗ್ರೇಡ್ 4 ರಿಂದ ಗ್ರೇಡ್ 12 ರವರೆಗೆ) ನಲ್ಲಿ ಮಿಂಚಲಿದ್ದಾರೆ. ಇಲ್ಲಿ ಸ್ಟೋಗೋ ಉತ್ಸವ 2024ರ ಗ್ರಾಂಡ್ ಫಿನಾಲೆ ನಡೆಯಲಿದೆ. ಯುಎಇ ಸಹಿಷ್ಣು ಮತ್ತು ಸಹಬಾಳ್ವೆ ಸಚಿವರಾದ ಗೌರವಾನ್ವಿತ ಶೇಕ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರ ಬೆಂಬಲದೊಂದಿಗೆ ಈ ಕಾರ್ಯಕ್ರಮ ಜರುಗಲಿದೆ.
ಏನಿದು ಚೈಲ್ಡ್ ಆನ್ಲೈನ್ ಪ್ರೊಟೆಕ್ಷನ್ ಪ್ರಶಸ್ತಿ?
ಮಕ್ಕಳ ಆನ್ಲೈನ್ ಸುರಕ್ಷತೆಯೆಂಬ ಸಂಕೀರ್ಣ ಸವಾಲಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಈ ನಿಟ್ಟಿನಲ್ಲಿ ಸಕ್ರಿಯ ಉಪಕ್ರಮಗಳನ್ನು ಸಾಧಿಸಿರುವ ಶಾಲೆಗಳನ್ನು ಚೈಲ್ಡ್ ಆನ್ಲೈನ್ ಪ್ರೊಟೆಕ್ಷನ್ ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತದೆ. ಇಲ್ಲಿ ಪದಗಳಿಗಿಂತ, ಶಾಲೆಗಳು ಮಾಡಿರುವ ಸಾಧನೆಗಳಿಗೆ ಮನ್ನಣೆ ನೀಡಲಾಗುತ್ತದೆ. ಅಂತರ್ಜಾಲ ಮತ್ತು ಡಿಜಿಟಲ್ ಸಾಧನಗಳನ್ನು ಜವಾಬ್ದಾರಿಯುತವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯವನ್ನು ಹೊಂದುವಂತೆ ಮಕ್ಕಳನ್ನು ಸಜ್ಜುಗೊಳಿಸುವ ಉದ್ದೇಶದಿಂದಲೇ ವಿಶೇಷವಾಗಿ ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ಜೊತೆಗಾರರ ಡಿಜಿಟಲ್ ಯೋಗಕ್ಷೇಮವನ್ನು ವರ್ಧಿಸುವಂತಹ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಕ್ಕಳು ಸಕ್ರಿಯವಾಗಿ ಕೊಡುಗೆ ನೀಡುವುದು, ಅದರಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ಜಾಗೃತಿ ಹಾಗೂ ಅನುಭವವನ್ನು ಗಳಿಸುವಂತೆ ಮಾಡುವುದು ಕೂಡ ಸಿಒಪಿ ಪ್ರಶಸ್ತಿಯ ಮೂಲ ಉದ್ದೇಶವಾಗಿದೆ.
ಅಮೇರಿಕಾದ 3ನೇ ಅತೀ ಎತ್ತರದ ಪ್ರತಿಮೆಯಾಗಿ ತಲೆಯೆತ್ತಿದ ಹನುಮಾನ್ ವಿಗ್ರಹ