ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್.ಎಂ.ಸಿ) ಎಂಬಿಬಿಎಸ್ ಪದವಿಯ ನೀಟ್ ಪರೀಕ್ಷೆ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್ ಒಂದರಂದು ಶೈಕ್ಷಣಿಕ ಅವಧಿ ಆರಂಭಿಸಬೇಕು ಎಂದು ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಿದೆ.
ಅಖಿಲ ಭಾರತ ಕೋಟಾದ ಎರಡನೇ ಸುತ್ತಿನ ಕೌನ್ಸೆಲಿಂಗ್ ಸೆಪ್ಟೆಂಬರ್ 19ರ ವರೆಗೆ ಮುಗಿಸಬೇಕು. ಸೆಪ್ಟೆಂಬರ್ 28 ರಿಂದ 30ರ ಒಳಗೆ ಅಭ್ಯರ್ಥಿಗಳ ಮಾಹಿತಿಯನ್ನು ಮೆಡಿಕಲ್ ಕೌನ್ಸಿಲಿಂಗ್ ಸಮಿತಿಗೆ ಕಳುಹಿಸಬೇಕು. ರಾಜ್ಯಮಟ್ಟದಲ್ಲಿ ಸೆಪ್ಟೆಂಬರ್ 27ರ ಒಳಗೆ ಕೌನ್ಸಲಿಂಗ್ ಮುಗಿಸಿ ಅಕ್ಟೋಬರ್ 6 ರಿಂದ 8 ರ ಒಳಗೆ ಮಾಹಿತಿ ಕಳುಹಿಸಬೇಕು. ಯೇಸುತ್ತಿನಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಸೆಪ್ಟೆಂಬರ್ 27 ಹಾಗೂ ರಾಜ್ಯಮಟ್ಟದಲ್ಲಿ ಅಕ್ಟೋಬರ್ 5 ರ ಒಳಗೆ ಪ್ರವೇಶ ಪಡೆಯಬೇಕು. ಇನ್ನೂ ರಾಜ್ಯಮಟ್ಟದಲ್ಲಿ ಅಕ್ಟೋಬರ್ ಒಂಬತ್ತರಿಂದ 18ರೊಳಗೆ ಮೂರನೇ ಸುತ್ತಿನ ಕೌನ್ಸಿಲಿಂಗ್ ನಡೆಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಅಕ್ಟೋಬರ್ 23ರ ಒಳಗೆ ಪ್ರವೇಶ ಪಡೆಯಬೇಕು. ಮೂರನೇ ಸುತ್ತಿನ ಬಳಿಕವೂ ಉಳಿಕೆಯಾಗುವ ಸೀಟುಗಳನ್ನು ಭರ್ತಿ ಮಾಡಲು ನಡೆಸುವ ಮುಂದುವರಿದ ಕೌನ್ಸೆಲಿಂಗ್ ಅನ್ನು ಅಕ್ಟೋಬರ್ 25 ರಿಂದ 29ರ ಒಳಗೆ ನಡೆಸಿ ನವೆಂಬರ್ ಐದರ ಒಳಗೆ ಅಭ್ಯರ್ಥಿಗಳು ಪ್ರವೇಶ ಪಡೆಯಬೇಕು ಎಂದು ಎನ್ಎಂಸಿ ತಿಳಿಸಿದೆ.