ಏಷ್ಯಾ ಖಂಡದಲ್ಲಿ ಅತ್ಯಂತ ಶ್ರೀಮಂತ ಗ್ರಾಮ ಎಲ್ಲಿದೆ ಗೊತ್ತಾ? ಯಾವ ದೇಶದಲ್ಲಿರಬಹುದು ಈ ಗ್ರಾಮ ಎಂಬ ಕುತೂಹಲ ಕಾಡುತ್ತಿದೆಯೇ..? ಭಾರತದಲ್ಲಿ ಅಂತೂ ಈ ಶ್ರೀಮಂತ ಗ್ರಾಮ ಇರಲು ಸಾಧ್ಯವಿಲ್ಲ ಎಂಬ ಯೋಚನೆ ಕೆಲವರಲ್ಲಿರಬಹುದು.. ಇನ್ನೂ ಕೆಲವರ ಚಿಂತನೆ ವಿದೇಶಗಳತ್ತ ಹರಿಯಬಹುದು ಅಲ್ವಾ..!! ಆದರೆ ಆಶ್ಚರ್ಯವಾದರೂ ಸತ್ಯ ಏನು ಗೊತ್ತಾ..? ಏಷ್ಯಾದಲ್ಲಿ ಈ ಶ್ರೀಮಂತ ಗ್ರಾಮ ಚೀನಾದಲ್ಲೂ ಇಲ್ಲ ಇನ್ಯಾವುದೋ ದೇಶದಲ್ಲೂ ಇಲ್ಲ ಆ ಗ್ರಾಮ ನಮ್ಮ ಭಾರತದ ಗುಜರಾತ್ ರಾಜ್ಯದಲ್ಲಿದೆ..!!
ಹೌದು.. ಗುಜರಾತ್ ರಾಜ್ಯದ ಬುಜನ ಹೊರವಲಯದಲ್ಲಿರುವ ಮಾಧಾಪುರ ಎಂಬ ಗ್ರಾಮವೇ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ. ಇಲ್ಲಿನ ನಿವಾಸಿಗಳು ವಿವಿಧ ಬ್ಯಾಂಕುಗಳಲ್ಲಿ ಸರಿಸುಮಾರು ಏಳು ಸಾವಿರ ಕೋಟಿ ರೂಪಾಯಿ ನಿಶ್ಚಿತ ಠೇವಣಿ ಇರಿಸಿದ್ದಾರೆ ಎಂದರೆ ನಂಬಲೇಬೇಕು.
ಈ ಗ್ರಾಮದಲ್ಲಿ ಹೆಚ್ಚಾಗಿ ಪಟೇಲ್ ಸಮುದಾಯ ವಾಸ ಮಾಡುತ್ತಿದೆ. ಇಲ್ಲಿನ ಜನಸಂಖ್ಯೆ ಸುಮಾರು 32,000. 2011ರಲ್ಲಿ ಇಲ್ಲಿ 17000 ಮಂದಿ ವಾಸ ಮಾಡುತ್ತಿದ್ದರು. ಅಂದಹಾಗೆ ಇಲ್ಲಿ ಹೆಚ್.ಡಿ.ಎಫ್.ಸಿ, ಪಿ.ಎನ್.ಬಿ, ಎಸ್.ಬಿ.ಐ, ಆಕ್ಸಿಸ್, ಐಸಿಐಸಿಐ ಮತ್ತು ಯೂನಿಯನ್ ಸೇರಿ ಸಾರ್ವಜನಿಕ ಹಾಗೂ ಖಾಸಗಿರಂಗದ 17 ಬ್ಯಾಂಕುಗಳಿವೆ. ಇನ್ನು ಕೆಲವು ಬ್ಯಾಂಕುಗಳು ಇಲ್ಲಿ ಬ್ರಾಂಚ್ ಓಪನ್ ಮಾಡಲು ಆಸಕ್ತಿ ತೋರುತ್ತಿವೆ.
ಶ್ರೀಮಂತಿಕೆಗೆ ಕಾರಣ ಏನು?
ವಿಶೇಷವೆಂದರೆ ಇಲ್ಲಿ ಭಾರಿ ಆದಾಯ ಬರುವ ಯಾವುದೇ ಕೈಗಾರಿಕೆಗಳಾಗಲಿ ಅಥವಾ ಕೃಷಿಯಾಗಲಿ ಇಲ್ಲ. ಆದರೆ, ಇಲ್ಲಿನ ಕುಟುಂಬಗಳ ಬಹಳಷ್ಟು ಮಂದಿ ಬೇರೆ ಬೇರೆ ದೇಶಗಳಲ್ಲಿ ವಾಸ ಮಾಡುತ್ತಿವೆ. ಈ ಕುಟುಂಬಗಳ ಸದಸ್ಯರು ಈ ಗ್ರಾಮದಲ್ಲಿನ ಬ್ಯಾಂಕುಗಳು ಮತ್ತು ಅಂಚೆ ಕಚೇರಿಯಲ್ಲಿ ಕೋಟಿಗಟ್ಟಲೆ ಠೇವಣಿ ಇಡುತ್ತಿದ್ದಾರೆ. ಅಂದರೆ ಗ್ರಾಮದಲ್ಲಿ 20,000 ಮನೆಗಳಿದ್ದು, 1200 ಕುಟುಂಬಗಳು ವಿದೇಶಗಳಲ್ಲಿ ವಾಸಿಸುತ್ತಿವೆ. ಹೆಚ್ಚಾಗಿ ಆಫ್ರಿಕನ್ ದೇಶಗಳಲ್ಲಿ ವಾಸ ಮಾಡುತ್ತಿವೆ.
ಮಧ್ಯ ಆಫ್ರಿಕಾದ ನಿರ್ಮಾಣ ವ್ಯವಹಾರಗಳಲ್ಲಿ ಗುಜರಾತಿಗಳು ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಹೀಗಾಗಿ, ಇಲ್ಲಿಗೆ ಹೆಚ್ಚು ಮಂದಿ ವಲಸೆ ಹೋಗುತ್ತಿದ್ದಾರೆ. ಹಾಗೆಯೇ ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೆರಿಕ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲೂ ಬಹಳಷ್ಟು ಕುಟುಂಬಗಳು ವಾಸ್ತವ್ಯವಿವೆ.
ಆದರೆ, ಇಲ್ಲಿನ ಮಂದಿ ಎಲ್ಲೇ ಇದ್ದರೂ ತಮ್ಮ ಹಳ್ಳಿಯನ್ನು ಮರೆತಿಲ್ಲ. ಅಲ್ಲಿನ ಸ್ಥಳಗಳಲ್ಲಿನ ಬ್ಯಾಂಕು ಗಳಿಗಿಂತ ತಮ್ಮ ಹಳ್ಳಿಯ ಬ್ಯಾಂಕುಗಳ ಮೇಲೆಯೇ ನಂಬಿಕೆ ಹೆಚ್ಚು ಹೀಗಾಗಿ ಇಲ್ಲೇ ಹೆಚ್ಚಾಗಿ ಠೇವಣಿ ಇಡುತ್ತಿದ್ದಾರೆ. ಈ ಕಾರಣದಿಂದಾಗಿ ಈ ಮಾಧಾಪುರ ಗ್ರಾಮ ಹಳ್ಳಿಯಂತಿದ್ದರೂ ನಗರದ ಬಹುತೇಕ ಸವಲತ್ತುಗಳನ್ನು ಹೊಂದಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ.
ಮೌಂಟ್ ಎಲ್ಬ್ರಸ್ ಮೇಲೆ ಭಾರತೀಯ ಧ್ವಜ ಹಾರಿಸಿದ ಕೊಡಗಿನ ಪ್ರೀತ್ ಅಪ್ಪಯ್ಯ