ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಜಾಗತಿಕ ನಾಯಕನಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ @Narendra Modi ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬಿಡೆನ್ (38.1 ಮಿಲಿಯನ್ ಅನುಯಾಯಿಗಳು), ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ (11.2 ಮಿಲಿಯನ್ ಅನುಯಾಯಿಗಳು) ಮತ್ತು ಪೋಪ್ ಫ್ರಾನ್ಸಿಸ್ (18.5 ಮಿಲಿಯನ್ ಅನುಯಾಯಿಗಳು) ಅವರಂತಹ ಇತರ ವಿಶ್ವ ನಾಯಕರಿಗಿಂತ ಪ್ರಧಾನಿ ಬಹಳ ಮುಂದಿದ್ದಾರೆ.
@X ನಲ್ಲಿ ನೂರು ಮಿಲಿಯನ್! ಈ ರೋಮಾಂಚಕ ಮಾಧ್ಯಮದಲ್ಲಿರಲು ಮತ್ತು ಚರ್ಚೆ, ಜನರ ಆಶೀರ್ವಾದಗಳು, ರಚನಾತ್ಮಕ ಟೀಕೆಗಳು ಮತ್ತು ಹೆಚ್ಚಿನದನ್ನು ಪಾಲಿಸಲು ಸಂತೋಷವಾಗಿದೆ. ಭವಿಷ್ಯದಲ್ಲಿಯೂ ಸಮಾನವಾಗಿ ತೊಡಗಿಸಿಕೊಳ್ಳುಲು ಎದುರು ನೋಡುತ್ತಿದ್ದೇನೆ” ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದಲ್ಲಿ ಪ್ರಧಾನಿ ಮೋದಿ ಇತರ ರಾಜಕಾರಣಿಗಳಿಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 26.4 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 27.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (19.9 ಮಿಲಿಯನ್), ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (7.4 ಮಿಲಿಯನ್), ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ (2.9 ಮಿಲಿಯನ್) ಅವರಂತಹ ಇತರ ವಿರೋಧ ಪಕ್ಷದ ನಾಯಕರಿಗಿಂತ ಪಿಎಂ ಮೋದಿ ಮೈಲುಗಳಷ್ಟು ಮುಂದಿದ್ದಾರೆ.
100 ಮಿಲಿಯನ್‌ಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಅತಿ ಹೆಚ್ಚು ಅನುಸರಿಸುತ್ತಿರುವ ಜಾಗತಿಕ ನಾಯಕನಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಯಾಕೆ ಮೋದಿಗೆ ಹೆಚ್ಚು ಅನುಯಾಯಿಗಳು ?
ಮೋದಿ ಇಷ್ಟವಾಗುವುದು ಅವರ ಮಾನವಿಯತೆ ಹಾಗೂ ಸರಳತೆಗೆ ಏಕೆಂದರೆ ದೊಡ್ಡ ಪ್ರಮಾಣದ ಜನರ ಗುಂಪಿನಲ್ಲಿ ಇದ್ದ ಕಾರ್ಯಕರ್ತರ ಆರೋಗ್ಯ ಕೊಂಚ ಹದಗೆಟ್ಟಿದೆ ಎಂದು ಸೂಕ್ಷ್ಮವಾಗಿ ಗಮನಿಸಿ ಭಾಷಣ ನಿಲ್ಲಿಸಿ ವೈದ್ಯರಿಗೆ ಹಾಗೂ ನೀರನ್ನು ಒದಗಿಸಲು ಸಲಹೆ ನೀಡಿದರಲ್ಲಾ ಇದೇ ತಿಳಿಸುತ್ತಾದೆ
ಜನರ ಮೇಲಿನ ಕಾಳಜಿ ಹಾಗೂ ಮಾನವೀಯ ಮೌಲ್ಯವೇ ನರೇಂದ್ರ ಮೋದಿಯವರನ್ನು ವಿಶ್ವದ ನಾಯಕ ಮಾಡಿದ್ದು.
ಅಸ್ಸಾಂನಲ್ಲಿ ನಡೆಯಲಿರುವ ಮೂರನೇ ಹಂತದ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಲು ಜನರಿಗೆ ವಿನಂತಿ ಮಾಡಿಕೊಳ್ಳಲು ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದರು ಈ ಸಂದರ್ಭದಲ್ಲಿ, ಜನಸಮೂಹದ ಮಧ್ಯೆ ಇದ್ದ ಬಿಜೆಪಿ ಕಾರ್ಯಕರ್ತರ ಆರೋಗ್ಯವು ಹದಗೆಟ್ಟಿತು ಬಿಜೆಪಿ ಕಾರ್ಯಕರ್ತನನ್ನು ಗಮನಿಸಿದ ಪ್ರಧಾನಿ ಮೋದಿ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದರು ಮತ್ತು ತಕ್ಷಣ ತಮ್ಮ ವೈದ್ಯಕೀಯ ತಂಡವನ್ನು ಬಿಜೆಪಿ ಕಾರ್ಯಕರ್ತರ ಬಳಿಗೆ ಆರೈಕೆ ಮಾಡಲು ಹೋಗುವಂತೆ ಹೇಳಿದರು. ಅದೇ ಸಮಯದಲ್ಲಿ, ಪಕ್ಷದ ಕಾರ್ಯಕರ್ತರೊಬ್ಬರು ನೀರಿನ ಕೊರತೆಯಿಂದ ಮೂರ್ಛೆ ಹೋದರು. ಭಾಷಣ ಮಾಡುವಾಗ, ವೇದಿಕೆಯ ಮೇಲೆ ನಿಂತ ಪ್ರಧಾನಿ ಮೋದಿ ಅವರು ಕಾರ್ಯಕರ್ತರ ಕಡೆಗೆ ತಮ್ಮ ಗಮನವನ್ನು ತಿರುಗಿಸಿದರು, ಮತ್ತು ಅವರು ವೇದಿಕೆಯಿಂದ ಸಹಾಯಕ್ಕಾಗಿ ತಮ್ಮ ಸ್ವಂತಕ್ಕಾಗಿ ಇರುವ ಮೆಡಿಕಲ್ ತಂಡವನ್ನು ಕಾರ್ಯಕರ್ತನ ಬಳಿಗೆ ಕಳುಹಿಸಿದರು.
ಪ್ರತಿ ಬಾರಿ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುದು ವಿಶ್ವಗುರು ಮಾಡಲು ರಾತ್ರಿ ಹಗಲು ಎನ್ನದೆ ದೇಶಕ್ಕಾಗಿ ಭಾರತ ಮಾತೆಯ ಸೇವೆ ಮತ್ತು ರಕ್ಷಣೆಯನ್ನು ವೀರ ಯೋಧನಂತೆ ಸದಾ ಛಲ ಬಿಡದೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಜೀ ಅಪಾರ ಶಕ್ತಿ ಹಾಗೂ ದೇಶಭಕ್ತಿ ಇವೆರಡರ ಸಮ್ಮಿಲನ ರೂಪ