ವಾರಣಾಸಿ: ಕಾಶಿ ವಿಶ್ವನಾಥ ದೇವಾಲಯಕ್ಕೆ ಪ್ರವೇಶಿಸಲು ಆಗುತ್ತಿರುವ ತೊಂದರೆಯ ಬಗ್ಗೆ ನಿಮಗೆಲ್ಲರಿಗೂ ಅರಿವಿರಬಹುದು. ಈ ತೊಂದರೆಯನ್ನು ಕಡಿಮೆ ಮಾಡಲು ಇದೀಗ ವಿಐಪಿ ದರ್ಶನಕ್ಕೆ ಸರದಿಶಾಲಿನಲ್ಲಿ ಬರುವವರಿಗೆ ಹೊಸ ರೀತಿಯಲ್ಲಿ ಪ್ರವೇಶ ಗುರುತಿನ ಚೀಟಿ ನೀಡಲಾಗುತ್ತದೆ.
ಹಿಂದುಗಳ ಪವಿತ್ರ ಧಾರ್ಮಿಕ ಯಾತ್ರಾ ಸ್ಥಳವಾದ ಕಾಶಿ ವಿಶ್ವನಾಥ ದೇಗುಲಕ್ಕೆ ಭಕ್ತರು ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ಅಧಿಕಾರಗಳು ಈ ಕ್ರಮವನ್ನು ಕೈಗೊಂಡಿದ್ದಾರೆ. ಹಾಗಾದ್ರೆ ಏನದು ಮುಂದಕ್ಕೆ ತಿಳಿಯೋಣ ಬನ್ನಿ…
ಕಳೆದ ಮಾರ್ಚ್ ನಿಂದ ಅಧಿಕಾರಿಗಳು ಮತ್ತು ನೌಕರರಿಗೆ ಮಾತ್ರ ನೀಡಲಾಗುತ್ತಿದ್ದ QR ಕೋಡ್ ಆಧಾರಿತ ಗುರುತಿನ ಚೀಟಿಯನ್ನು ಇದೀಗ ಸಾಮಾನ್ಯ ಯಾತ್ರಾರ್ಥಿಗಳಿಗೂ ನೀಡಿ ದೇವಾಲಯಕ್ಕೆ ಪ್ರವೇಶವನ್ನು ಸುಗಮ ಮಾಡಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಅಂದರೆ ದೇವಾಲಯದ ಆವರಣದ ಪ್ರವೇಶಕ್ಕೆ QR ಕೋಡ್ ಆಧಾರಿತ ಗುರುತಿನ ಚೀಟಿಯನ್ನು ಒದಗಿಸಲಾಗುತ್ತದೆ. ದೇವಾಲಯದ ಸೌಲಭ್ಯಗಳನ್ನು ಸುಧಾರಿಸುವ ಸಲುವಾಗಿ ಅಧಿಕಾರಿಗಳು ಎಲ್ಲೆಡೆ ಅಳವಡಿಸಲು ಸಿದ್ಧತೆಯನ್ನು ನಡೆಸುತ್ತಿದ್ದಾರೆ.
QR ಕೋಡ್ ಆಧಾರಿತ ಚೀಟಿಯನ್ನು ಆರ್ ಎಫ್ ಐಡಿ ಅಂದರೆ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಯಾತ್ರಿಗಳ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಇದಕ್ಕಾಗಿ ಈಗಾಗಲೇ ದೇವಸ್ಥಾನದಲ್ಲಿ ಆರ್ ಎಫ್ ಐ ಡಿ ಯಂತ್ರ ಅಳವಡಿಸಲಾಗಿದೆ.
ಗುರುತಿನ ಚೀಟಿಯಲ್ಲಿ ಕಾಶಿ ವಿಶ್ವನಾಥ ದೇವರ ಲಾಂಛನವೂ ಇದೆ.
ದೇವಾಲಯದ ಆಡಳಿತ ಮಂಡಳಿಯಿಂದ ನೀಡಲಾಗುತ್ತಿರುವ ಈ ಗುರುತಿನ ಚೀಟಿಯಲ್ಲಿ ಕಾಶಿ ವಿಶ್ವನಾಥ ದೇವರ ಲಾಂಛನವೂ ಇದ್ದು ಅದರಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಗೇಟ್ ಗಳು ಸ್ವಯಂ ಚಾಲಿತವಾಗಿ ತಿಳಿದುಕೊಳ್ಳುತ್ತವೆ.
ಸಂದರ್ಶಕರ ದಾಖಲೆಗಳನ್ನು ನಿರ್ವಹಣೆ ಮಾಡಲು ದೇವಸ್ಥಾನದ ಅಧಿಕಾರಿಗಳಿಗೆ ತುಂಬಾ ಸುಲಭ
ಒಮ್ಮೆ ಈ ಪ್ರಕ್ರಿಯೆ ಸಂಪೂರ್ಣವಾಗಿ ಆರಂಭವಾದರೆ ಸಂದರ್ಶಕರ ದಾಖಲೆಗಳನ್ನು ನಿರ್ವಹಣೆ ಮಾಡಲು ದೇವಸ್ಥಾನದ ಅಧಿಕಾರಿಗಳಿಗೆ ತುಂಬಾ ಸುಲಭವಾಗುತ್ತದೆ. ಹಾಗೆ ಇದರಿಂದಾಗಿ ಯಾತ್ರೆಗಳನ್ನು ಸುಲಭವಾಗಿ ದೇವಾಲಯದ ಒಳಾಂಗಣ ಪ್ರವೇಶಕ್ಕೆ ಬಿಡಬಹುದು ಎಂದು ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ.