ಐಸ್ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ…?? ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ ಅಜ್ಜಿಯರೂ ಐಸ್ಕ್ರೀಮ್ ಪ್ರಿಯರೇ ಅಲ್ವಾ..!! ಬಗೆ ಬಗೆಯ ಐಸ್ಕ್ರೀಮ್ ಫ್ಲೇವರ್ ಹೆಸರು, ರುಚಿ, ಅಂದ ನೋಡಿದರೆ ಮತ್ತೆ ಮತ್ತೆ ತಿನ್ನೋಣವೆನಿಸಿ ಬಾಯಲ್ಲಿ ನೀರೂರುತ್ತದೆ. ಐಸ್ಕ್ರೀಮ್ ಮಾಯೆಯೇ ಹಾಗೆ..
ಐಸ್ಕ್ರೀಮ್ ಎಂದಾಕ್ಷಣ ಹಲವಾರು ಬ್ರ್ಯಾಂಡ್ ಹೆಸರುಗಳು ನೆನಪಿಗೆ ಬರುತ್ತದೆ. ಸ್ಥಳೀಯ ಬ್ರ್ಯಾಂಡ್ ಇಂದ ಹಿಡಿದು ಪ್ರಸಿದ್ಧ ಬ್ರ್ಯಾಂಡ್ ಗಳವರೆಗೂ ಜನ ತಿನ್ನದ ಐಸ್ಕ್ರೀಮ್ ಇರದು. ಆದರೆ ಈಗ ಇಡೀ ವಿಶ್ವವೇ ಕರ್ನಾಟಕದ ಕೆಲವು ಐಸ್ಕ್ರೀಮ್ ಬ್ರ್ಯಾಂಡ್ ಗಳತ್ತ ಕಣ್ಣೆತ್ತಿ ನೋಡುವಂತಹ ಶುಭ ಸುದ್ದಿಯೊಂದು ಇಲ್ಲಿದೆ. ವಿಶ್ವದ ಟಾಪ್ 100 ಐಸ್ಕ್ರೀಮ್ ಬ್ರ್ಯಾಂಡ್ ಗಳಲ್ಲಿ ಕರ್ನಾಟಕದ ಎರಡು ಬ್ರ್ಯಾಂಡ್ಗಳು ಸ್ಥಾನ ಪಡೆದುಕೊಂಡಿದೆ.
ಆನ್ಲೈನ್ ಟ್ರಾವೆಲ್ ಹಾಗೂ ಫುಡ್ ಗೈಡ್ ‘ಟೇಸ್ಟ್ ಅಟ್ಲಾಸ್’ ಈಗ ವಿಶ್ವದ 100 ಐಕಾನಿಕ್ ಐಸ್ಕ್ರೀಮ್ ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಐದು ಐಸ್ಕ್ರೀಮ್ ಬ್ರ್ಯಾಂಡ್ಗಳು ಸ್ಥಾನ ಪಡೆದುಕೊಂಡಿದ್ದು ಕರ್ನಾಟಕದ ಎರಡು ಐಸ್ಕ್ರೀಮ್ ಬ್ರ್ಯಾಂಡ್ಗಳು ಸೇರಿವೆ. ಕರ್ನಾಟಕದ ಮಂಗಳೂರು ನಗರದಲ್ಲಿರುವ ಪ್ರಸಿದ್ಧ ಐಡಿಯಲ್ ಪಬ್ಬಾಸ್ ನಾ ಫೇಮಸ್ ಐಸ್ಕ್ರೀಮ್ ಫ್ಲೇವರ್ ಗಳಲ್ಲಿ ಒಂದಾದ ಗಡ್ಬಡ್ ಮತ್ತು ಬೆಂಗಳೂರಿನ ಕಾರ್ನರ್ ಹೌಸ್ ನ ‘ಡೆತ್ ಬೈ ಚಾಕೊಲೇಟ್’ ವಿಶ್ವದ ಟಾಪ್ 100 ಐಕಾನಿಕ್ ಐಸ್ಕ್ರೀಮ್ ಗಳಲ್ಲೊಂದು ಎಂಬ ಸ್ಥಾನವನ್ನು ಪಡೆದುಕೊಂಡಿದೆ.
ವಿಶ್ವದ 100 ಐಸ್ಕ್ರೀಮ್ ಬ್ರ್ಯಾಂಡ್ ಗಳಲ್ಲಿ ನಮ್ಮ ಮಂಗಳೂರು ಪಬ್ಬಾಸ್ ಐಸ್ಕ್ರೀಮ್ ಸ್ಥಾನ ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಮಂಗಳೂರಿಗೆ ಯಾರೇ ಬಂದರೂ ಪಬ್ಬಾಸ್ ಐಸ್ಕ್ರೀಮ್ ತಿನ್ನದೇ ಹೋಗುವುದಿಲ್ಲ. ಪ್ರತೀ ದಿನ ಜನಸಂದಣಿಯಿಂದಲೇ ಕೂಡಿರುವ ಐಡಿಯಲ್ ಪಬ್ಬಾಸ್ ಐಸ್ಕ್ರೀಮ್ ಸವಿಗೆ ಸರಿಸಾಟಿಯಿಲ್ಲ.
ಭಾರತದ ಐದು ಐಸ್ಕ್ರೀಮ್ ಬ್ರ್ಯಾಂಡ್ಗಳು
ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿರುವ ವಿಶ್ವದ ಟಾಪ್ 100 ಐಸ್ಕ್ರೀಮ್ ಪಟ್ಟಿಯಲ್ಲಿ ಇದರಲ್ಲಿ ಮುಂಬೈನ Rustom&Co ಸ್ಯಾಂಡ್ವಿಚ್ ಐಸ್ಕ್ರೀಮ್ಗಳಿಗೆ ಭಾರೀ ಪ್ರಸಿದ್ಧಿ ಪಡೆದಿದೆ. ಅದೇ ರೀತಿ ಈ ಪಟ್ಟಿಯಲ್ಲಿ ಈಗ ‘ಮ್ಯಾಂಗೋ ಸ್ಯಾಂಡ್ವಿಚ್’, ಮುಂಬೈನ ನ್ಯಾಚುರಲ್ ಐಸ್ಕ್ರೀಮ್ ಕಂಪನಿಯ ‘ಟೆಂಡರ್ ಕಾಕನೆಟ್’ ಮತ್ತು ಅಪ್ಸರಾ ಕಂಪನಿಯ ‘ಗ್ವಾವ’ ಐಸ್ಕ್ರೀಮ್ ಕೂಡ ಸೇರಿವೆ.
ವಿಶ್ವದ 100 ಟಾಪ್ ಐಸ್ಕ್ರೀಮ್ ಪಟ್ಟಿಯಲ್ಲಿ ಭಾರತದ 5 ಐಸ್ಕ್ರೀಮ್ ಬ್ರ್ಯಾಂಡ್ಗಳು ಸ್ಥಾನ ಪಡೆದುಕೊಂಡಿದ್ದು ಹೆಮ್ಮೆಯ ವಿಷಯವಾದರೆ ಅದರಲ್ಲೂ ಕರ್ನಾಟಕದ್ದೇ ಎರಡು ಐಸ್ಕ್ರೀಮ್ ಬ್ರ್ಯಾಂಡ್ಗಳು ಇವೆಯೆಂದಾದರೆ ಅದು ಇಮ್ಮಡಿ ಖುಷಿಯ ಸಂಗತಿ. ನಮ್ಮ ಮಂಗಳೂರು ಜನರಿಗೆ ವಿಶ್ವದ ಟಾಪ್ 100 ಐಸ್ಕ್ರೀಮ್ ಗಳಲ್ಲಿ ಒಂದಾದ ಪಬ್ಬಾಸ್ ಐಸ್ಕ್ರೀಮ್ ಸವಿಯುವ ಭಾಗ್ಯ ಸಿಕ್ಕಿದೆ. ಎಲ್ಲರೂ ಐಸ್ಕ್ರೀಮ್ ಸವಿದು ಖುಷಿ ಪಡೋಣ.