ಕೆಲವು ವರ್ಷಗಳ ಹಿಂದೆ ರಾಜ್ಯ ಸರ್ಕಾರದಿಂದ ಈ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಆಗುತ್ತಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರದ ಆದೇಶದಂತೆ ಕೇಂದ್ರವೇ ಹೊಸದಾಗಿ ಈ ಕಾರ್ಡ್ ವಿತರಿಸಲು ನಿರ್ಧರಿಸಿದೆ. ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳಲ್ಲಿ ಈ ಕಾರ್ಡ್ ನೋಂದಣಿಗೆ ಅವಕಾಶ ನೀಡಲಾಗಿತ್ತಾದರೂ ಸರ್ವರ್ ಸಮಸ್ಯೆ ಈ ನೋಂದಣಿ ಕಾರ್ಯವನ್ನು ಆಮೆಗತಿಯಲ್ಲಿ ಸಾಗುವಂತೆ ಮಾಡಿತ್ತು. ಈಗ ಯಾವುದೇ ಸಮಸ್ಯೆಗಳಿಲ್ಲದೇ ಸ್ವಯಂ ನೋಂದಣಿಗೆ ಅವಕಾಶ ನೀಡಲಾಗಿದ್ದರೂ ಜನರ ಆಸಕ್ತಿ ಮಾತ್ರ ಕಡಿಮೆಯಾಗಿದೆ.
ಪ್ರತಿಯೊಬ್ಬರೂ ಕೇಂದ್ರ ಸರ್ಕಾರದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಕೆಲವೊಂದು ಕಾಯಿಲೆಗಳು ಅಚಾನಕ್ಕಾಗಿ ನಮ್ಮನ್ನು ಬಾಧಿಸಿದರೆ ತುರ್ತು ಹಣಕ್ಕಾಗಿ ಪರದಾಡುವ ಬದಲು ಈ ಆಯುಷ್ಮಾನ್ ಭಾರತ್ ಕಾರ್ಡ್ ಮೂಲಕ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಇದರಿಂದ ನಮ್ಮ ಆರೋಗ್ಯದೊಂದಿಗೆ ಸಮಾಜದ ಆರೋಗ್ಯವೂ ವೃದ್ಧಿಸುತ್ತದೆ.
ಇದನ್ನೂ ಓದಿ: 1ನೇ ತರಗತಿ ಸೇರಲು ಗರಿಷ್ಠ ವಯೋಮಿತಿ 8 ವರ್ಷಕ್ಕೆ ಹೆಚ್ಚಳ
ಭಾರತೀಯರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಸರ್ಕಾರದ ಅತ್ಯುನ್ನತ ಯೋಜನೆಯೆಂದರೆ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್. ಇದರಿಂದಾಗಿ ಲಕ್ಷಾಂತರ ಬಡ ಜನರು ಆರೋಗ್ಯ ಭಾಗ್ಯಗಳನ್ನು ಪಡೆದಿದ್ದಾರೆ. ಈ ಯೋಜನೆ ಪ್ರತೀ ಕುಟುಂಬಕ್ಕೂ ವರದಾನವೆಂದರೆ ತಪ್ಪಾಗಲಾರದು.
ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡುವುದು ಹೇಗೆ?
ಹೊಸದಾಗಿ ಆಯುಷ್ಮಾನ್ ಭಾರತ್ ಕಾರ್ಡ್ ಇನ್ನೂ ಮಾಡಲಿಲ್ಲವೇ..? ಹಾಗಾದರೆ ಇನ್ನು ಮುಂದೆ ಯಾರೂ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿಗಾಗಿ ಸೈಬರ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಅಲೆದಾಡಬೇಕಿಲ್ಲ. ಅದರ ಬದಲಾಗಿ ನಿಮ್ಮ ಕೈಯಲ್ಲಿರುವ ಮೊಬೈಲ್ ಅಥವಾ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಮೂಲಕ ನೀವೇ ಸ್ವತಃ ನೋಂದಣಿ ಮಾಡಿಕೊಳ್ಳಬಹುದು. ಮೊಬೈಲ್ ಅಲ್ಲಿ ‘ಗೂಗಲ್ ಪ್ಲೇ ಸ್ಟೋರ್’ ಗೆ ಹೋಗಿ ‘ಆಯುಷ್ಮಾನ್ ಕಾರ್ಡ್’ ಎಂದು ಹುಡುಕಾಡಿದರೆ ಆಪ್ ಸಿಗುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಬೆನಿಫೀಶಿಯರಿಯಲ್ಲಿ ಲಾಗಿನ್ ನಲ್ಲಿ ಮೊಬೈಲ್ ನಂಬರ್ ಹಾಕಿ ಹೊಂದಾಣಿಕೆ ಮಾಡಿ ಒಟಿಪಿ ನಮೂದಿಸಬೇಕು. ಆಗ ತೆರೆಯುವ ಪುಟದಲ್ಲಿ ರಾಜ್ಯ ಆಯ್ಕೆ ಮಾಡಿ ‘ಸ್ಕೀಮ್’ ಜಾಗದಲ್ಲಿ ‘ಕುಟುಂಬ್’ ಎಂದು ಆಯ್ಕೆ ಮಾಡಬೇಕು. ಆಧಾರ್ ಸಂಖ್ಯೆ, ಜಿಲ್ಲೆಯ ಹೆಸರನ್ನು ಆಯ್ಕೆ ಮಾಡಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.
ಆಧಾರ್ ಕೆವೈಸಿ ಸೇರಿದಂತೆ ಇತರ ಎಲ್ಲಾ ವಿವರಗಳನ್ನು ಪೂರ್ತಿಯಾಗಿ ಭರ್ತಿ ಮಾಡಿದ ನಂತರ ಆಯುಷ್ಮಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಆಪ್ ರಹಿತ ನೋಂದಣಿ ಹೇಗೆ?
ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಆಪ್ ರಹಿತವಾಗಿಯೂ ನೋಂದಣಿ ಮಾಡಿಕೊಳ್ಳಲಾಗುತ್ತದೆ. https://beneficiary.nha.gov.in ಈ ಪೋರ್ಟಲ್ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ನಿಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಈ ನೋಂದಣಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ನಿಮ್ಮ ಊರಿನ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದುಕೊಂಡು ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಮಾಡಿಕೊಳ್ಳಬಹುದು.
ಕೆಲವು ವರ್ಷಗಳ ಹಿಂದೆ ರಾಜ್ಯ ಸರ್ಕಾರದಿಂದ ಈ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಆಗುತ್ತಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರದ ಆದೇಶದಂತೆ ಕೇಂದ್ರವೇ ಹೊಸದಾಗಿ ಈ ಕಾರ್ಡ್ ವಿತರಿಸಲು ನಿರ್ಧರಿಸಿದೆ. ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳಲ್ಲಿ ಈ ಕಾರ್ಡ್ ನೋಂದಣಿಗೆ ಅವಕಾಶ ನೀಡಲಾಗಿತ್ತಾದರೂ ಸರ್ವರ್ ಸಮಸ್ಯೆ ಈ ನೋಂದಣಿ ಕಾರ್ಯವನ್ನು ಆಮೆಗತಿಯಲ್ಲಿ ಸಾಗುವಂತೆ ಮಾಡಿತ್ತು. ಈಗ ಯಾವುದೇ ಸಮಸ್ಯೆಗಳಿಲ್ಲದೇ ಸ್ವಯಂ ನೋಂದಣಿಗೆ ಅವಕಾಶ ನೀಡಲಾಗಿದ್ದರೂ ಜನರ ಆಸಕ್ತಿ ಮಾತ್ರ ಕಡಿಮೆಯಾಗಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರವಿರಲಿ