ಮಂಗಳೂರುಸ್ಥಳೀಯ

ಮಂಗಳೂರಿನಲ್ಲಿ ಫೆ.18,19ರಂದು 5ನೇ ಆವೃತ್ತಿಯ ಲಿಟ್ ಫೆಸ್ಟ್

Share news

ಭಾರತ್‌ ಫೌಂಡೇಶನ್ ವತಿಯಿಂದ ‘ದ ಐಡಿಯಾ ಆಫ್ ಭಾರತ್‌’ ಪರಿಕಲ್ಪನೆಯಡಿ ಐದನೇ ಆವೃತ್ತಿ ಮಂಗಳೂರು ಲಿಟ್ ಫೆಸ್ಟ್‌ ಫೆ.18, 19ರಂದು ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಸನ್ ನಡೆಯಲಿದೆ.

25 ಸೆಷನ್‌ಗಳ ವಿಚಾರ ಸಂಕಿರಣದಲ್ಲಿ 55ಕ್ಕೂ ಹೆಚ್ಚು ವಾಗ್ಮಿಗಳು ಭಾಗವಹಿಸಲಿದ್ದಾರೆ. ಪ್ರತಿ ಸೆಷನ್ ಕೊನೆಯ ಭಾಗದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಇರಲಿದೆ. ಗೆದ್ದವರಿಗೆ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವುದು. ಈ ಬಾರಿ ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕಾ ಕಾರ್ಯಾಗಾರ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಲೇಖಕರೊಂದಿಗೆ ಸಂವಾದ , 2 ಸಿನಿಮಾಗಳ ಪ್ರದರ್ಶನ ಇರಲಿದೆ ಹೀಗೆ ಹಲವು ವಿಶೇಷತೆಗಳನ್ನು ಲಿಟ್ ಫೆಸ್ಟ್ ಒಳಗೊಂಡಿದೆ.

ಖ್ಯಾತ ನಟರಾದ ರಿಷಭ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಸ್ಮಿತಾ ಪ್ರಕಾಶ್‌, ಶಿವ್ ಅರೂ‌, ಅಜಿತ್ ಹನುಮಕ್ಕನವರ್, ಅಡ್ಡಂಡ ಕಾರ್ಯಪ್ಪ, ಬಾಸುಮ ಕೊಡಗು, ದಕ್ಕುಲ ಮುನಿಸ್ವಾಮಿ ಸೇರಿದಂತೆ ಅನೇಕ ವಾಗ್ರಿಗಳು, ಸಾಹಿತಿಗಳು, ಸಂಶೋಧಕರು ಹೀಗೆ ಅನೇಕ ಗಣ್ಯ ವ್ಯಕ್ತಿಗಳು ಸಂವಾದದಲ್ಲಿ ಭಾಗವಹಿಸಲಿದ್ದು, ಈ ಬಾರಿ ಲಿಟ್ ಫೆಸ್ಟ್ ಜ್ಞಾನದ ತೇರನ್ನು ಎಳೆಯಲು ಸಿದ್ಧವಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button